ದೇವಲ ಗಾಣಗಾಪುರ ಅಭಿವೃದ್ಧಿಗೆ ಬದ್ಧ
ಬ್ರೀಜ್ ಕಂ ಬ್ಯಾರೇಜ್ ದುರಸ್ತಿ ಕಾಮಗಾರಿಗೆ ಚಾಲನೆದತ್ತಾತ್ರೇಯ ಯಾತ್ರಿ ನಿವಾಸ ಲೋಕಾರ್ಪಣೆ
Team Udayavani, Jan 26, 2020, 4:20 PM IST
ಅಫಜಲಪುರ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ದೇವಲ ಗಾಣಗಾಪುರ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಅನುದಾನ ತಂದಿದ್ದು, ಇನ್ನೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ತಾಲೂಕಿನ ದೇವಲ ಗಾಣಗಾಪುರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 2019-20ನೇ ಸಾಲಿನ 90 ಲಕ್ಷ ಅನುದಾನದಲ್ಲಿ ದೇವಲ ಗಾಣಗಾಪುರ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿàಜ್ ಕಂ ಬ್ಯಾರೇಜ್ ದುರಸ್ತಿ ಕಾಮಗಾರಿಗೆ ಚಾಲನೆ ಹಾಗೂ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 2010-11ನೇ ಸಾಲಿನ ಧಾರ್ಮಿಕ ದತ್ತಿ ಇಲಾಖೆ ಯೋಜನೆ ಅಡಿಯಲ್ಲಿ 2.82 ಕೋಟಿ ವೆಚ್ಚದಲ್ಲಿ ದತ್ತಾತ್ರೇಯ ದೇವಸ್ಥಾನದ ಯಾತ್ರಿಕ ನಿವಾಸ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಪ್ರವಾಹ ಬಂದಾಗ ಬ್ರೀಜ್ ಕಂ ಬ್ಯಾರೇಜ್ ಹಾನಿಯಾಗಿತ್ತು. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಹೀಗಾಗಿ 90 ಲಕ್ಷ ವೆಚ್ಚದಲ್ಲಿ 200 ಮೀಟರ್ ಸಿಸಿ ರಸ್ತೆ, ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೂ ಬ್ಯಾರೇಜ್‌ನಿಂದ ನೀರು ಪೋಲಾಗುತ್ತಿದೆ, ನೀರು ತಡೆದು ನಿಲ್ಲಿಸಲು ಹೈಡ್ರಾಲಿಕ್ ಗೇಟ್ ಅಳವಡಿಕೆ ಅವಶ್ಯವಾಗಿದ್ದು, ಇದರ ಕುರಿತು ಸದನದಲ್ಲಿ ಚರ್ಚಿಸಿ ಶೀಘ್ರ ಹೈಡ್ರಾಲಿಕ್ ಗೇಟ್ ಅಳವಡಿಕೆಗೆ ಅನುದಾನ ತರಲಾಗುವುದು ಎಂದರು.
ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ದೇವಲ ಗಾಣಗಾಪುರಕ್ಕೆ ಇನ್ನೂ ಸಾಕಷ್ಟು ಸೌಲಭ್ಯಗಳು ಬೇಕಾಗಿವೆ. ಅದರಲ್ಲೂ ತುರ್ತಾಗಿ ಇಲ್ಲಿಗೆ ಅಫಜಲಪುರ, ತೆಲ್ಲೂರ ಮಾರ್ಗವಾಗಿ ರಾಜ್ಯ ಹೆದ್ದಾರಿ ನಿರ್ಮಾಣ ಆಗಬೇಕಾಗಿದೆ. ಕೇಂದ್ರ ಸರ್ಕಾರ ಈ ಗ್ರಾಮದ ಮೇಲಿಂದ ಹಾದು ಹೋಗುವಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಬೇಕು. ಇಲ್ಲಿಗೆ ಬರುವ ಭಕ್ತರಿಗಾಗಿ ದೊಡ್ಡದಾದ ಯಾತ್ರಿಕ ನಿವಾಸ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಇದನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ನೋಡಿಕೊಳ್ಳಬೇಕು. ಒಂದು ವೇಳೆ ಅವರಿಗೆ ನೋಡಿಕೊಳ್ಳಲಾಗದಿದ್ದರೆ ಬೇರೆಯವರಿಗೆ ವಹಿಸಲಾಗುವುದು ಎಂದರು.
ಗ್ರಾಮದಲ್ಲಿ ಹಳೆ ಪೈಪ್‌ಲೈನ್ ತೆಗೆದು ಹೊಸದಾಗಿ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಗಾಣಗಾಪುರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 10 ಕೋಟಿ ನೀಡುತ್ತೇನೆಂದು ಹೇಳಿದ್ದರು. ಇದುವರೆಗೂ ನಯಾಪೈಸೆ ನೀಡಿಲ್ಲ ಎಂದ ಅವರು, ಗಾಣಗಾಪುರ ಗ್ರಾ.ಪಂ ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಗಾಣಗಾಪುರಕ್ಕೆ ಹೊಸ ಬಸ್ ನಿಲ್ದಾಣ, ಮಿನಿ ಬಸ್ ಡಿಪೋ ಅವಶ್ಯಕತೆ ಇದ್ದು, ಇದನ್ನು ಸರ್ಕಾರದ ಮುಂದಿಡುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಶಾಸಕ ಎಂ.ವೈ. ಪಾಟೀಲ ಜನಪರ ರಾಜಕಾರಣಿಯಾಗಿದ್ದಾರೆ. ನೀರಾವರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ 300 ಕೋಟಿ ವೆಚ್ಚದ ಕೆರೆ ತುಂಬುವ ಕೆಲಸ ಮಾಡಿದ್ದಾರೆ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಎಂ.ವೈ ಅವರ ಕೈ ಹಿಡಿದ ಕೋಲಿ ಸಮಾಜಕ್ಕೆ ಅವರ ಬೆಂಬಲವಾಗಿರಬೇಕು. ನಂಬಿಗಸ್ಥ ಸಮಾಜವನ್ನು ಎಸ್‌ಟಿಗೆ ಸೇರಿಸುವಲ್ಲಿ ಸದನದಲ್ಲಿ ಚರ್ಚಿಸಬೇಕು. ನಾನು ಮೇಲ್ಮನೆಯಲ್ಲಿ ಚರ್ಚಿಸುತ್ತೇನೆ ಎಂದರು.
ಅಲ್ಲದೇ ರಾಜ್ಯದಲ್ಲಿ ಕಾಗಿನೆಲೆ, ಕೂಡಲಸಂಗಮ ಅಭಿವೃದ್ಧಿ ಪ್ರಾ ಧಿಕಾರ ರಚಿಸಿದಂತೆ ಚೌಡದಾನಪುರ ಅಭಿವೃದ್ಧಿ ನಿಗಮ ರಚನೆಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿದರು. ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ತಾ.ಪಂ ಅಧ್ಯಕ್ಷೆ ರುಕ್ಮೀಣಿ ಜಮಾದಾರ, ಸದಸ್ಯ ಬಲವಂತ ಜಕಬಾ, ಮುಖಂಡರಾದ ಶಿವಶರಣಪ್ಪ ಹಿರಾಪುರ, ಮಹಾಂತೇಶ ಪಾಟೀಲ, ಶರಣು ಕುಂಬಾರ, ಮಲ್ಲಿಕಾರ್ಜುನ ಖರ್ಗೆ ಅತನೂರ, ಸಿದ್ದು ಶಿರಸಗಿ, ಸಿದ್ದು ಕಲಶೆಟ್ಟಿ, ಮಾರುತಿ ಮೂರನೆತ್ತಿ, ರಾಕೇಶ ವಡಗೇರಿ, ನಾಗೇಶ ಹೊಸಮನಿ, ಸಚೀನ ಲಿಂಗಶೆಟ್ಟಿ, ಮುರುಗೇಶ ಯಂಕಂಚಿ, ಎಇಇಗಳಾದ ವಿಜಯಕುಮಾರ ಪಟ್ಟಣ, ಶಾಂತಪ್ಪ ಜಾಧವ, ಗುಂಡಪ್ಪ ಹೊಸಮನಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಹಸು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.