ಠಾಣಾಕುಶನೂರನಲ್ಲಿ ಅಖಂಡ ಹರಿನಾಮ-ಶಿವನಾಮ ಸಪ್ತಾಹ
Team Udayavani, Jun 16, 2018, 3:12 PM IST
ಕಮಲನಗರ: ಠಾಣಾಕುಶನೂರ ಗ್ರಾಮದ ಮಹಾದೇವ ಮಂದಿರದಲ್ಲಿ ಅಖಂಡ ಹರಿನಾಮ, ಶಿವನಾಮ ಸಪ್ತಾಹ ಹಾಗೂ ಸೇವೆಯಿಂದ ನಿವೃತ್ತರಾದ ಶಿಕ್ಷಕ ರಘುನಾಥ ಶರಣಪ್ಪಾ ರೊಟ್ಟೆ ಅವರ ಸನ್ಮಾನ ಸಮಾರಂಭ ನಡೆಯಿತು.
ಏಳು ನಗಳ ಕಾಲ ಪ್ರತಿನಿತ್ಯ 7ರಿಂದ 9 ಗಂಟೆ ವರೆಗೆ ಶಿವಲಿಲಾಮೃತ ಪಾರಾಯಣ, ಬೆಳಗ್ಗೆ 11ರಿಂದ 1
ಗಂಟೆ ವರೆಗೆ ಗಾಥಾ ಭಜನೆ, ಮಧ್ಯಾಹ್ನ 3ರಿಂದ 4ರ ವರೆಗೆ ಶಿವಭಜನೆ, ಪ್ರತಿದಿನ ಸಂಜೆ 5 ರಿಂದ 6ರ ವರೆಗೆ ಪ್ರವಚನ, ಸಂಜೆ 7ರಿಂದ 8ರ ವರೆಗೆ ಹರಿಪಠಣ, ರಾತ್ರಿ 9ರಿಂದ 11ರ ವರೆಗೆ ಹರಿ ಕೀರ್ತನೆ, ರಾತ್ರಿ ಹರಿಜಾಗರಣ ಹಾಗೂ ಬೆಳಗ್ಗೆ 5 ಗಂಟೆಗೆ ಕಾಕಡಾರತಿ ಕಾರ್ಯಕ್ರಮಗಳು ಜರುಗಿದವು.
ಏಳು ದಿನಗಳ ಕಾಲ ವಿವಿಧ ಮಹಾತ್ಮರು, ಶರಣರು, ಕೀರ್ತನೆಕಾರರು, ಪ್ರವಚನಕಾರರು, ಗಾಯಕರು ಹಾಗೂ ಸುಮಾರು 30 ಗ್ರಾಮಗಳಿಂದ ಶಿವ-ಹರಿ ಭಜನಾ ತಂಡಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ
ನಿವೃತ್ತ ಶಿಕ್ಷಕ ಹಾಗೂ ಈ ಕಾರ್ಯಕ್ರಮದ ರೂವಾರಿ ರಘುನಾಥ ಶರಣಪ್ಪಾ ರೊಟ್ಟೆ ದಂಪತಿಯನ್ನು ಗ್ರಾಮಸ್ಥರು ಸನ್ಮಾನಿಸಿದರು.
ವಿರಕ್ತ ಮಠ, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಸಂಘ ಸಂಸ್ಥೆ ಹಾಗೂ ಶಿಕ್ಷಕರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಸಾನ್ನಿಧ್ಯ ವಹಿಸಿದ್ದ ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಕ ರಘುನಾಥ ರೊಟ್ಟೆ ಅವರು ತಮ್ಮ ಜೀವನ ಪರ್ಯಂತ ಮಕ್ಕಳಿಗೆ ಒಳ್ಳೆ ಪಾಠ, ಬೋಧನೆ ಮಾಡಿ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿದ್ದಾರೆ.
ಶಿಕ್ಷಕ ವೃತ್ತಿಯೊಂದಿಗೆ ಶರಣ ತತ್ವ, ಸಂತರ ತತ್ವಗಳನ್ನು ಕೀರ್ತನೆ ಮತ್ತು ಪ್ರವಚನಗಳ ಮೂಲಕ ಜನಜಾಗೃತಿಗೊಳಿಸಿದ್ದಾರೆ ಎಂದರು. ಶ್ರೀ ಮುರಲಿಧರ ಮಹಾರಾಜ, ಜಗನ್ನಾಥ ಮೂಲಗೆ ಮಾತನಾಡಿದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಇಲಾಖೆ ಅಧಿಕಾರಿಗಳಾದ ಉಮಾಕಾಂತ ಮಹಾಜನ ವೇದಿಕೆಯಲ್ಲಿದ್ದರು. ಪ್ರವಿಣ ಕಾರಬಾರಿ, ಶಿವಕುಮಾರ ಸಜ್ಜನಶೆಟ್ಟೆ, ಜಗನ್ನಾಥ ಜಿರ್ಗೆ, ಸತೀಶ ಜಿರ್ಗೆ, ರಾಮದಾಸ ಮಾಸ್ಟರ್, ವಸಂತ ದೆಸಾಯಿ, ಶರಣಪ್ಪಾ ಬೆಲ್ದಾಳ, ಮಹಾದಪ್ಪಾ ಸಜ್ಜನಶೆಟ್ಟೆ, ಬಾಬುರಾವ್ ಜಾಧವ ಡಾ| ರವಿಂದ್ರ ಬಾವಗೆ, ಬಾಲಾಜಿ ವಾಗಮೊಡೆ, ರಮೇಶ ಬೊಚರೆ, ಸೋಪಾನ ಕೊರೆಕಲ ಇನ್ನಿತರರು ಇದ್ದರು. ಸಂಜು ಕದಂ ಸ್ವಾಗತಿಸಿದರು. ರಾಮಶೇಟ್ಟಿ ಪನ್ನಾಳೆ ನಿರೂಪಿಸಿದರು. ಬಾಲಾಜಿ ವಾಗಮೊಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.