ಅಕ್ಕಮಹಾದೇವಿ ಮಹಿಳಾ ಆತ್ಮ ಬಲ ಸಂಕೇತ
Team Udayavani, Mar 2, 2022, 11:27 AM IST
ಬೀದರ: ಶರಣರ ಕಣ್ಮಣಿಯಾದ ಶ್ರೀ ಅಕ್ಕಮಹಾದೇವಿ ಜಾಗತಿಕ ಮಹಿಳಾ ಆತ್ಮ ಬಲದ ಸಂಕೇತವಾಗಿದ್ದು, ಅವರು ಹಾಕಿಕೊಟ್ಟ ಆಧ್ಯಾತ್ಮದ ದಾರಿಯಲ್ಲಿ ಕರುಣಾದೇವಿ ಮಾತಾರವರು ಮುನ್ನಡೆಯುದ್ದಾರೆ. ಅವರ ತಪೋನುಷ್ಠಾನದ ಬಲದಿಂದ ಇಂದು ನಮಗೆ ಶ್ರೀಶೈಲ ದೊರಕಿದೆ ಎಂದು ಹೇಳಲು ನನಗೆ ಅಭಿಮಾನ ಎನಿಸುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ನುಡಿದರು.
ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿ ವೀರಶೈವ ರಕ್ಷಣಾ ವೇದಿಕೆ ಮತ್ತು ಶಾಂಭವಿ ಅಧ್ಯಾತ್ಮ ವೇದಿಕೆ ಆಶ್ರಯದಲ್ಲಿ ಶ್ರೀ ಕರುಣಾದೇವಿ ಮಾತಾರವರ 60ನೇ ಜನ್ಮ ದಿನದ ಅಂಗವಾಗಿ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೆಯವರು ಶ್ರೀಶೈಲದಲ್ಲಿ ಅಕ್ಕಮಹಾದೇವಿಯವರ ಅದ್ಭುತವಾದ ಸ್ಮಾರಕವನ್ನು ನಿರ್ಮಾಣ ಮಾಡಿರುವುದು ಜಿಲ್ಲೆಯ ಜನತೆಯು ಅಭಿಮಾನ ಪಡುವಂತಾಗಿದೆ. ಶ್ರೀಶೈಲದ ನಿಯೋಜಿತ ದಾಸೋಹ ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಯೋಗ ನೀಡುತ್ತೇನೆ ಎಂದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ತಮ್ಮ ಅನುಷ್ಠಾನದ ಮೂಲಕ ಲೋಕದ ಕಲ್ಯಾಣ ಮಾಡುತ್ತಿರುವ ಮಾತಾ ಅಧ್ಯಾತ್ಮ ಲೋಕದ ಗೌರವನ್ನು ಹೆಚ್ಚಿಸಿದ್ದಾರೆ. ಇವರ ಸಾಧನೆಯಿಂದ ನಮ್ಮ ಸಮಾಜಕ್ಕೆ ಕೀರ್ತಿ ಮತ್ತು ನಮ್ಮಗೆಲ್ಲ ಅಧ್ಯಾತ್ಮ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.
ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ್ ಮಾತನಾಡಿ, ಸಾಧನಾ ಮಾರ್ಗ ಸರಳವಾಗಿರುವುದಿಲ್ಲ. ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಸಮಾಜದ ಒಳತಿಗಾಗಿ, ಲೋಕದ ಕಲ್ಯಾಣಕ್ಕಾಗಿ ಪೂಜ್ಯ ಕರುಣಾದೇವಿ ಮಾತೆಯವರು ತಮ್ಮನ್ನು ತಾವು ಕರ್ಪೂರದಂತೆ ಉರಿದು ಬೆಳಕನ್ನು ನೀಡುತ್ತಿದ್ದಾರೆ. ಅವರು ಭಾಲ್ಕಿಯ ಮತಕ್ಷೇತ್ರಕ್ಕೆ ಬೆಲೆ ಕಟ್ಟಿಲಾಗದ ಕೀರ್ತಿ ತಂದಿದ್ದಾರೆ ಎಂದರು.
ಶ್ರೀಶೈಲ ಟ್ರಸ್ಟ್‌ನ ಸದಸ್ಯೆ ಶಕುಂತಲಾ ತಂಬಾಕೆ ಮಾತನಾಡಿದರು. ಡಾ| ಓಂಕಾರ ಸ್ವಾಮಿ, ವೀರಶೆಟ್ಟಿ ಭಂಗೂರೆ, ಚಂದ್ರಶೇಖರ ಪಾಟೀಲ, ಮಹಾದೇವಪ್ಪ ಭಂಗೂರೆ, ಯೋಗೇಶ ಸೋಲಾಪುರ, ಪ್ರಫುಲ್ ಪಾಂಡೆ, ಕಾಶಿನಾಥ ಖಂಡ್ರೆ, ಬಾಬುರಾವ್ ಪೊಲೀಸ್ ಪಾಟೀಲ, ಗುಂಡೇರಾವ್ ಪಾಟೀಲ, ಅಕ್ಕಮಹಾದೇವಿ ಮಠಪತಿ, ಅನಿಲಕುಮಾರ ಪಾಟೀಲ ಇದ್ದರು. ಗುರುವಂದನಾ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ ದಾನಿ ಸ್ವಾಗತಿಸಿದರು. ಬಸವರಾಜ ಹಾಲಹಳ್ಳಿ ಪ್ರಾಸ್ತಾವಿಕ ನುಡಿ ಹೇಳಿದರು. ದೀಪಕ ಠಮಕೆ ನಿರೂಪಿಸಿದರು. ಗುರುವಂದನೆ ಪ್ರಯುಕ್ತ ಮಾತಾಜಿ ಅವರನ್ನು ಖಾನಾಪೂರದಿಂದ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು.
ರಾಜ್ಯ ಸರ್ಕಾರ ಅಕ್ಕ ಮಹಾದೇವಿ ಶರಣೆಯನ್ನು ಕಡೆಗಣಿಸಿದೆ. ಅಕ್ಕಳ ಜಯಂತಿಯನ್ನು ಸದರಿ ವರ್ಷದಿಂದ ಆಚರಿಸಬೇಕು. ಈವರೆಗೆ ಪ್ರಕಟಗೊಂಡ ಅಕ್ಕ ಮಹಾದೇವಿಯವರ ಲೇಖನಗಳ ಮಹಾ ಸಂಪುಟವನ್ನು ಹೊರತರುವ ಕಾರ್ಯಯೋಜನೆ ಹಾಕಿಕೊಂಡಿದ್ದೇನೆ. -ಡಾ| ರಾಜಶೇಖರ ಶಿವಾಚಾರ್ಯರು, ಹಿರೇಮಠ ಸಂಸ್ಥಾನ, ಬೇಮಳಖೇಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.