ಅಮರೇಶ್ವರ ರಥೋತ್ಸವ ಸಂಪನ್ನ
Team Udayavani, Feb 16, 2018, 3:16 PM IST
ಔರಾದ: ಪಟ್ಟಣದ ಗ್ರಾಮ ದೇವತೆ ಹಾಗೂ ಉದ್ಭವಲಿಂಗ ಅಮರೇಶ್ವರ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಅಮರೇಶ್ವರ ಮಂದಿರ ಬಳಿ ಬಸವರಾಜ ದೇಶಮುಖ, ತಹಶೀಲ್ದಾರ ಎಂ. ಚಂದ್ರಶೇಖರ, ಪಪಂ ಸದಸ್ಯ ಕುಮಾರ ದೇಶಮುಖ, ಮಾಜಿ ಜಿಪಂ ಸದಸ್ಯ ವಸಂತ ಬಿರಾದರ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಅಮರೇಶ್ವರ ಮಂದಿರದಿಂದ ಬಸವೇಶ್ವರ ವೃತ್ತದ ಮುಖ್ಯರಸ್ತೆ ಮಾರ್ಗವಾಗಿ ಅಗ್ನಿಕುಂಡದ ವರೆಗೂ ರಥೋತ್ಸವ ನಡೆಯಿತು.
ಶಾಸಕ ಪ್ರಭು ಚವ್ಹಾಣ, ಬೀದರ ಸಂಸದ ಭಗಂವತ ಖೂಬಾ, ಕಾಂಗ್ರೆಸ್ ಮುಖಂಡ ಡಾ| ಲಕ್ಷ್ಮಣ ಸೋರಳಿಕರ್, ದಯಾನಂದ ಘೂಳೆ, ವೀರೇಶ ಅಲ್ಮಾಜೆ, ಗಜಾನಂದ ಟೀಗೆ, ಆನಂದ ದ್ಯಾಡೆ, ಅನೀಲ ಹೇಡೆ, ಅನೀಲಕುಮಾರ ನಿರ್ಮಳೆ, ಸಂತೋಷ ಚಾಂಡೇಶ್ವರೆ, ಅಮರ ಔರಾದೆ, ಶ್ರೀನಿವಾಸ ಖೂಬಾ, ಶರಣಪ್ಪ ಪಾಟೀಲ್ ರಥೋತ್ಸವದಲ್ಲಿ ಹೆಜ್ಜೆ ಹಾಕಿದರು.
ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಾ ಹಾಗೂ ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.
ರಂಗೋಲಿ ಸ್ಪಥೆ: ರಥೋತ್ಸವನಿಮಿತ್ತ ಪಟ್ಟಣದ ಅಮರೇಶ್ವರ ದೇವಸ್ಥಾನ ಆಡಳಿತ ಮಂಡಳಿಯಿಂದ ರಂಗೋಲಿ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಶಟಕಾರ ಬಡಾವಣೆ, ದೇಶಮುಖ ಬಡಾವಣೆ ಹಾಗೂ ಇನ್ನಿತರ ಬಡಾವಣೆಯಲ್ಲಿನ ಮಹಿಳೆಯರು, ಯುವತಿಯರು ರಂಗೋಲೆ ಬಿಡಿಸಿ ಜಾತ್ರೆಗೆ ಮೆರಗು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.