ದೇಶಾಂಶ ಪತ್ನಿಗೆ ಅಮ್ಮ ಗೌರವ ಪ್ರದಾನ
Team Udayavani, Dec 22, 2020, 4:33 PM IST
ಬೀದರ: “ಬೀದರ ಶಬ್ದಕೋಶ’ದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯ ಲೇಖಕರಾಗಿದ್ದ ದೇಶಾಂಶಹುಡಗಿ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಚಿಟ್ಟಾವಾಡಿಯ “ಜಯಶಂಕರ’ ಮನೆಯಲ್ಲಿ “ಅಮ್ಮ ಗೌರವ’ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡ ಮಾಡುವ “ಅಮ್ಮ ಪ್ರಶಸ್ತಿ-20’ಗೆ ಹಿರಿಯ ಸಾಹಿತಿದೇಶಾಂಶ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ನ.25ರಂದು ಅವರ ನಿಧನ ಹಿನ್ನೆಲೆಯಲ್ಲಿ ಬೀದರಿನ ಅವರ ಮನೆಯಲ್ಲಿ, ದೇಶಾಂಶ ಅವರ ಪತ್ನಿ ಮಹಾದೇವಮ್ಮ ಹುಡಗಿ ಅವರಿಗೆ ಅಮ್ಮ ಗೌರವ ಪ್ರದಾನ ಮಾಡಲಾಯಿತು. ಶಾಲು ಸತ್ಕಾರ, ಅಭಿನಂದನಾ ಪತ್ರ, ಫಲಪುಷ್ಪಗಳೊಂದಿಗೆ, ತೊಗರಿ ಬೇಳೆ ಮತ್ತು ಸೀರೆಯನ್ನು ಕಾಣಿಕೆಯಾಗಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಧರಿನಾಡಿಗೆ ಕೀರ್ತಿಯನ್ನು ತಂದ ದೇಶಾಂಶಹುಡಗಿ ಅವರನ್ನು ಹುಡುಕಿಕೊಂಡು ಬಂದ ಅಮ್ಮ ಪ್ರಶಸ್ತಿಯ ಗೌರವ ಪುರಸ್ಕಾರದ ಆಯ್ಕೆ ಸಮಿತಿಯು ಅತ್ಯುತ್ತಮರನ್ನು ಆಯ್ಕೆ ಮಾಡಿದೆ. ಸಾಹಿತಿಗಳನ್ನು ಬೆಳೆಸುವಲ್ಲಿ ಅಹರ್ನಿಶಿ ಶ್ರಮಿಸಿದ ದೇಶಾಂಶ ಅವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಕೆಂಪು ನೆಲದ ಈ ಧರಿನಾಡಿನಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಬೀದರ ಎಂಬ ಹೆಸರು ಪ್ರಸ್ತಾಪವಾದಗಲೆಲ್ಲ ದೇಶಾಂಶ ಅವರ ಹೆಸರು ನೆನಪಿಗೆ ಬರುತ್ತದೆ ಎಂದು ಸ್ಮರಿಸಿದರು.
ಅಮ್ಮ ಪ್ರಶಸ್ತಿ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮನೆಗೆ ತೆರಳಿ ಅಮ್ಮ ಪುರಸ್ಕಾರ ನೀಡಲಾಗುತ್ತಿದೆ. ಸಂಭ್ರಮ ಪಡಬೇಕಾದ ವ್ಯಕ್ತಿತ್ವದ ಅಗಲಿಕೆಯ ನಡುವೆಯೂ ದೇಶಾಂಶ ಅವರ ಬೆನ್ನ ಹಿಂದಿನ ಬೆಳಕಂತೆ ಜೀವನವನ್ನು ಸವೆಸಿದ ಪತ್ನಿ ಮಹಾದೇವಮ್ಮ ಅವರನ್ನು ಸತ್ಕರಿಸುವ ಮೂಲಕ ಆ ಹಿರಿಯ ಚೇತನಕ್ಕೆ ನೆನಪು ಮಾಡಿಕೊಂಡಂತಾಯಿತು ಎಂದು ಹೇಳಿದರು.
ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ, ಹಿರಿಯ ಲೇಖಕಿ ಜಗದೇವಿ ದುಬಲಗುಂಡಿ, ಸಾಹಿತಿಗಳಾದ ಪ್ರೇಮಾ ಹೂಗಾರ, ವಿಜಯಲಕ್ಷ್ಮೀ ಸುಜೀತಕುಮಾರ, ವಿಜಯ ಭಾಸ್ಕರರೆಡ್ಡಿ, ಮಹಾದೇವರೆಡ್ಡಿ, ಬಸವರಾಜ, ಕನ್ಯಾಕುಮಾರಿ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.