ಅಣ್ಣಾಭಾವು ಸಾಠೆ ಜಯಂತಿ ಸರ್ಕಾರ ಆಚರಿಸಲಿ: ಖೂಬಾ
Team Udayavani, Sep 2, 2017, 11:51 AM IST
ಬಸವಕಲ್ಯಾಣ: ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಅಣ್ಣಾಭಾವು ಸಾಠೆ ಅವರ ಜಯಂತಿಯನ್ನು
ಪ್ರತಿವರ್ಷ ಸರ್ಕಾರದಿಂದಲೇ ಆಚರಿಸಬೇಕು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಒತ್ತಾಯಿಸಿಸಿದರು.
ನಗರದ ಧರ್ಮ ಪ್ರಕಾಶ ಗಲ್ಲಿಯ ಶರಣ ನೂಲಿಯ ಚಂದಯ್ಯ ಭವನದಲ್ಲಿ ಆದಿ ಜಾಂಬವ ಮಾದಿಗ ಸಮಾಜ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಶರಣ ಮಾದರ ಚನ್ನಯ್ಯ ಪಂಚ ಕಮಿಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಾಮ್ರಾಟ್ ಅಣ್ಣಾಭಾವು ಸಾಠೆ ಅವರ 97ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ಜಯಂತಿ ಆಚರಿಸುವ ಕುರಿತು ಎಲ್ಲರೂ ಸೇರಿ ಸರ್ಕಾರಕ್ಕೆ ಒತ್ತಾಯಿಸೋಣ ಎಂದರು.
ಮುಂಬೈನ ಆರ್‌ಟಿಒ ಸಂಜಯ ವಾಡೇಕರ್ ಉಪನ್ಯಾಸ ನೀಡಿ, ಒಂದೂವರೆ ದಿನ ಶಾಲೆಗೆ ಹೋದ ಅಣ್ಣಾಭಾವು
ಸಾಠೆಯವರು 35 ಕಾದಂಬರಿಗಳನ್ನು, 300ಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯ ಜಾಗತಿಕ ಮಟ್ಟದ
ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಬಣ್ಣಿಸಿದರು.
ಉಪನ್ಯಾಸಕ ಪ್ರಹ್ಲಾದ ಚಂಗಟೆ ವಿಶೇಷ ಉಪನ್ಯಾಸ ನೀಡಿದರು. ಪಂಚ ಕಮಿಟಿ ಅಧ್ಯಕ್ಷ ಘಾಳೆಪ್ಪ ಮುಜನಾಯಕ
ಅಧ್ಯಕ್ಷತೆ ವಹಿಸಿದ್ದರು. ಆದಿ ಜಾಂಬವ ಮಾದಿಗ ಸಮಾಜ ಸಂಘದ ಅಧ್ಯಕ್ಷ ಯುವರಾಜ ಭೆಂಡೆ ಸ್ವಾಗತಿಸಿ ಪ್ರಾಸ್ತಾವಿಕ
ಮಾತನಾಡಿದರು. ಶರಣೆ ಚಿತ್ರಮ್ಮ ತಾಯಿ, ನಗರ ಸಭೆ ಸದಸ್ಯೆ ಕಾವೇರಿ ಭೆಂಡೆ, ಮುಖಂಡರಾದ ದಿಲೀಪ ಸಿಂಧೆ,
ಮನೋಹರ ಮೈಸೆ, ಕೇಶಪ್ಪ ಬಿರಾದಾರ, ಸಂದೀಪ ಬುಯೆ, ಶಬ್ಬೀರ ಪಾಶಾ ಮುಜಾವರ, ವಾಲ್ಮೀಕ ಖನಕೂರೆ,
ಕಾಳಿದಾಸ ಜಾಧವ, ದಿಲೀಪಗೀರ ಗೋಸ್ವಾಮಿ, ಸಮಾಜದ ಪ್ರಮುಖರಾದ ಅಶೋಕ ಸಂಗನೂರೆ, ತುಕಾರಾಮ
ಲಾಡೆ, ದತ್ತು ಗೋರಾ, ಸಂಜುಕುಮಾರ ಸಂಗನೂರೆ ದಿಗಂಬರ ಜಲೆª, ಪ್ರದೀಪ ಢಗಳೆ, ಶ್ರೀನಿವಾಸ ಜಲೆª, ದತ್ತು
ಭೆಂಡೆ, ಅಜಯ ಕೊಟನೂರೆ, ಆನಂದ ಮುಜನಾಯಕ, ಪ್ರವೀಣ ಆಲಗೂಡೆ, ವಿಜಯಕುಮಾರ ಭೆಂಡೆ,
ದತ್ತು ಗೌರ, ಲಕ್ಷ್ಮಣ ತಂಬುರ್ಜಿ ಭಾಗವಹಿಸಿದ್ದರು. ರಮೇಶ ಉಮ್ಮಾಪೂರೆ ನಿರೂಪಿಸಿದರು. ಇದಕ್ಕೂ ಮುನ್ನ
ಅಣ್ಣಾಭಾವು ಸಾಠೆ ಅವರ ಭಾವಚಿತ್ರ ಮೆರವಣಿಗೆ ಜರುಗಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
IFFI: ಪಾಪ್ ಸಂಗೀತಗಾರ ರಾಬಿ ವಿಲಿಯಮ್ಸ್ ಬೆಟರ್ ಮ್ಯಾನ್ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.