ಸೈದಾಪುರದಲ್ಲಿ ರೈಲು ನಿಲ್ಲಿಸಲು ಸಂಸದರಿಗೆ ಮನವಿ
Team Udayavani, Nov 21, 2021, 3:26 PM IST
ಸೈದಾಪುರ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಕೋವಿಡ್‌ನಿಂದಾಗಿ ಸ್ಥಗಿತಗೊಂಡ ರೈಲುಗಳ ನಿಲುಗಡೆ ಪುನಃ ನಿಲ್ಲಿಸುವಂತೆ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಅವರಿಗೆ ಸೈದಾಪುರ ನಾಗರಿಕರು ಮನವಿ ಸಲ್ಲಿಸಿದರು.
ಯಾದಗಿರಿ ನಗರಕ್ಕೆ ಭೇಟಿ ನೀಡಿದ ಸಂಸದರಿಗೆ ಒತ್ತಾಯಿಸಿದ ನಾಗರಿಕರು, ಸುಮಾರು ದಶಕಗಳಿಂದ 02793 ರಾಯಲ್ ಸೀಮಾ ಎಕ್ಸ್‌ಪ್ರೆಸ್ ತಿರುಪತಿಯಿಂದ ನಿಜಾಮಾಬಾದ ಜಂಕ್ಷನ್ ಮತ್ತು 16583 ಯಶವಂತಪುರದಿಂದ ಲಾತೂರ್, 16571 ಯಶವಂತಪುರ ಜಂಕ್ಷನ್‌ದಿಂದ ಬೀದರವರೆಗೆ ಸಂಚರಿಸುವ ರೈಲುಗಳು ನಿಲ್ಲುತ್ತಿದ್ದವು. ಕೆಲವು ತಿಂಗಳಿಂದ ಇವು ನಿಲ್ಲುತ್ತಿಲ್ಲ. ಸುತ್ತಲಿನ 65 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲ್ವೆ ನಿಲ್ದಾಣ ಇದಾಗಿದೆ. ಕಡೇಚೂರು ಹಾಗೂ ಬಾಡಿಯಾಲ ಕೈಗಾರಿಕಾ ಪ್ರದೇಶಗಳು ರೈಲು ನಿಲ್ದಾಣದ ಸಮೀಪದಲ್ಲಿವೆ. ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರು, ಚೆನ್ನೈ, ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಿಗೆ ಕೆಲಸ ಕಾರ್ಯಗಳಿಗಾಗಿ ಹೋಗುತ್ತಾರೆ. ಈ ಬಗ್ಗೆ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿ ರೈಲುಗಳ ನಿಲುಗಡೆಗೆ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.
ಸೈದಾಪುರ ಗ್ರಾಪಂ ಸದಸ್ಯ ಅರ್ಜುನ ಚವ್ಹಾಣ, ರಾಜು ದೊರೆ, ಏಸುನಾಥ ಮೇಲಗಿರಿ, ರಾಕೇಶ ಕೋರೆ, ಶರಣಪ್ಪ, ಚಂದಪ್ಪ ಕಾವಲಿ, ಮಾಳಪ್ಪ ಬಾಲಛೇಡ, ಮೌಲಾಲಿ, ಮಾರೆಪ್ಪ, ಮರೆಪ್ಪ ಕಟ್ಟಿಮನಿ ರಾಂಪೂರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.