ಸೌಲಭ್ಯ ವಂಚಿತ ಕಲಾವಿದರಿಗೆ ನೆರವು
Team Udayavani, Jul 20, 2022, 3:21 PM IST
ಔರಾದ: ಔರಾದ ಹಾಗೂ ಕಮಲನಗರ ತಾಲೂಕು ಕೇಂದ್ರ ಸ್ಥಾನ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಲಾವಿದರಿದ್ದಾರೆ. ಅವರನ್ನು ಗುರುತಿಸಲು ಸಂಘ ರಚಿಸಿ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯಕುಮಾರ ಸೋನಾರೆ ಹೇಳಿದರು.
ಸಂತಪುರ ಅನುಭವ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಸರ್ಕಾರ ಪ್ರತಿ ವರ್ಷ ಕಲೆ, ಕಲಾವಿ ದರನ್ನು ಗುರುತಿಸಿ ಪ್ರೋತ್ಸಾಹಿಸಲು ಅನೇಕ ಯೋಜನೆ ಜಾರಿಗೆ ತರುತ್ತಿದೆ. ಗಡಿ ತಾಲೂಕಿನಲ್ಲಿ ದಲ್ಲಾಳಿಗಳ ಸಂಖ್ಯೆ ಹೆಚ್ಚಾಗಿದ್ದು, ಕಲಾವಿದರಿಗೆ ಸಿಗಬೇಕಾದ ಸೌಲತ್ತುಗಳು ದಲ್ಲಾಳಿಗಳ ಪಾಲಾಗುತ್ತಿವೆ. ತಾಲೂಕಿನ ಯಾವುದೇ ಗ್ರಾಮದಲ್ಲಿ ಕಲಾವಿದರಿದ್ದರೆ ನಮ್ಮ ಅಥವಾ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದರೆ ಸೌಲತ್ತು ಕಲ್ಪಿಸುವುದಾಗಿ ತಿಳಿಸಿದರು.
ಜು.27 ಮತ್ತು 28ರಂದು ಬೀದರ ಡಾ| ಚೆನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವಾರ್ಷಿಕೋತ್ಸವ ಹಾಗೂ ಜಾನಪದ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ನಮ್ಮ ಕಲೆ ಹಾಗೂ ಕಲಾವಿದರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಈ ವೇಳೆ ಸಂಘಟನೆ ತಾಲೂಕು ಅಧ್ಯಕ್ಷ ಸಂಗಮೇಶ ಬೇಲ್ದಾಳ, ಉಪಾಧ್ಯಕ್ಷ ಚಿನ್ನಮ್ಮಾ ಲಾಧ, ಹವಗಿರಾವ್ ಶೆಂಬೆಳ್ಳಿ, ಶಿವಾಜಿರಾವ್ ಪಾಟೀಲ್, ಉಜನಿ ಸಿದ್ದಯ್ನಾಸ್ವಾಮಿ ಬೆಲ್ದಾಳ, ಶರಣಯ್ನಾ ಸ್ವಾಮಿ ಜಿರ್ಗಾ, ಪ್ರಭುಸ್ವಾಮಿ ಉಜನಿ, ತಿರುಪತಿ ಪಾಂಚಾಳ, ರಾಮಶೆಟ್ಟಿ ಬಂಬು ಳಗೆ, ಯಮುನಾಬಾಯಿ ದಿಗಂಬರ್, ಮುಧೋಳ ಹಣಮಂತ ಪಾಂಚಳ, ಗುಡಪಳ್ಳಿ ನಾಗಶೆಟ್ಟಿ ನಾಗಲಗಿದ್ದೆ, ಶ್ಯಾಮ ದಾಸ ಗುಡಪಳ್ಳಿ, ಶಂಕರ ಮೂಲಗೆ, ಶಿವು ಮಾಟುರೆ, ಸುಭಾಷ ಡಿಗ್ಗೆ ಜೋಜನಾ, ರಾಜಕುಮಾರ ಹೊಸಕಿಂಡೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.