ಪ್ರಯತ್ನಶೀಲರಿಗೆ ಮೋಕ್ಷ ಪ್ರಾಪ್ತಿ: ಪ್ರಣವಾನಂದ ಶ್ರೀ
Team Udayavani, Jan 29, 2018, 1:36 PM IST
ಹುಮನಾಬಾದ: ಜೀವನದಲ್ಲಿ ಮೋಕ್ಷ ಎನ್ನುವುದು ಪ್ರಾರಬ್ಧಕರ್ಮವಲ್ಲ. ಅದು ದೊರೆಯಲು ಪ್ರಯತ್ನಶೀಲರಾಗಿರಬೇಕು ಎಂದು ಮುಚಳಂಬಿಯ ನಾಗಭೂಷಣ ಶಿವಯೋಗಿ ಮಠದ ಶ್ರೀ ಪ್ರಣವಾನಂದ ಸ್ವಾಮಿಗಳು ನುಡಿದರು.
ಶಕ್ಕರಗಂಜ ವಾಡಿಯಲ್ಲಿ ರವಿವಾರ ನಡೆದ ಶ್ರೀ ಶಿವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆಯ ರಜತ ಮಹೋತ್ಸವದ ಎರಡನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋಕ್ಷ ಪ್ರಯತ್ನದ ಕಾರ್ಯವಾಗಿದೆ. ಮೋಕ್ಷವೆನ್ನುವುದ ಪ್ರಾರಬ್ಧ ಕರ್ಮವಲ್ಲ. ಶ್ರೋತ್ರೀಯ ಬ್ರಹ್ಮಮೂರ್ತಿಗಳಾದ ಸದ್ಗುರುವಿನ ವಚನವನ್ನಾಲಿಸಿ ಪ್ರಯತ್ನಶೀಲರಾದಲ್ಲಿ ಮಾತ್ರ ಮೋಕ್ಷ ಪ್ರಾಪ್ತವಾಗುವುದು ಎಂದು ಹೇಳಿದರು.
ಮಹಾಲಿಂಗಪುರದ ಶ್ರೀ ಸಹಜಾನಂದ ಸ್ವಾಮಿಗಳು ಮಾತನಾಡಿ, ಮುಕ್ತಿ ಪ್ರಾಪ್ತ ಮಾಡಿಕೊಳ್ಳಲು ತ್ರಿವಿಧ ವಿಧಿಗಳನ್ನು ಪಾಲಿಸಬೇಕು. ಕೆಲವರು ನಮ್ಮ ಹಣೆ ಬರಹದಲ್ಲಿದ್ದರೆ ನಮಗೆ ಮೋಕ್ಷ ಸಿಗಲಿ ಎನ್ನುವರು. ಆದರೆ ಇದು ಎಲ್ಲವನ್ನೂ ಅರಿತ ಸದ್ಗುರುವಿನ ಮಂತ್ರದಂಡದ ವಿಧಿಗಳನ್ನು ಪಾಲಿಸುವುದಿರಿಂದ ಮಾತ್ರ ಪ್ರಾಪ್ತವಾಗುವುದು ಎಂದು ಹೇಳಿದರು.
ಕಲಬುರಗಿಯ ಮಾತೋ ಶ್ರೀ ಲಕ್ಷ್ಮೀದೇವಿ ಮಾತನಾಡಿ, ಸಂಸಾರದಲ್ಲಿ ಎಲ್ಲರೂ ಹೋರಾಡುವುದು ಸುಖಕ್ಕಾಗಿ. ಆದರೆ
ಮನುಷ್ಯನಿಗೆ ಬೇಕಾಗಿರುವುದು ಶಾಶ್ವತ ಸುಖ. ದುಃಖ ಬಂದು ಕೆಡಿಸಲಾಗದಂತಹ ಸುಖಕ್ಕಾಗಿ ಮನುಷ್ಯ ಹಂಬಲಿಸಬೇಕು. ಇದಕ್ಕೆ ಸದ್ಗುರುವಿನ ಸಾನ್ನಿಧ್ಯ ಅತ್ಯವಶ್ಯವಾಗಿದೆ ಎಂದು ಹೇಳಿದರು.
ಬೆಳಗಾವಿಯ ಶ್ರೀ ನಿಜುಗುಣಾಂದ ಮಹಾಸ್ವಾಮಿಗಳು ಮಾತನಾಡಿ, ಸದ್ಗುರು ಶಿವಾನಂದ ಮಹಾಸ್ವಾಮಿಗಳು ಅವತಾರ ಪೂರ್ಣಮಾಡಿ 25 ಸಂವತ್ಸರಗಳು ಗತಿಸಿವೆ. ಶಕ್ಕರಗಂಜ ವಾಡಿಯ ಸದ್ಭಕ್ತಾದಿಗಳು ಪ್ರತಿ ತಿಂಗಳು ಅಷ್ಟಮಿಯಂದು ಆರಾಧನೆ ಮಾಡುತ್ತಾ ವರ್ಷಕ್ಕೊಮ್ಮೆ ವಾರ್ಷಿಕ ಪುಣ್ಯಾರಾಧನೆ ಮಾಡುವುದರೊಂದಿಗೆ ಮೋಕ್ಷಗಳ ಪರಮಧಾಮವಾಗಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು. ಬೀದರ ಚಿದಂಬರಾಶ್ರಮದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವಾನಂದ ಕೈಲಾಸ ಆಶ್ರಮ ಬ್ಯಾಲಹಳ್ಳಿಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಬೀದರ ಗುರುದೇವಾಶ್ರಮದ ಮಾತೆ ಸಿದ್ದೇಶ್ವರಿತಾಯಿ, ಚಳಕಾಪುರದ ಶ್ರೀ ಶಂಕರಲಿಂಗ ಮಹಾಸ್ವಾಮಿಗಳು, ಶಕ್ಕರಂಗಜವಾಡಿಯ ಶಿವಾನಂದ ಅದ್ವೈತಾಶ್ರಮದ ಶ್ರೀಗಳು, ಬೆಳ್ಳೂರಿನ ಮಾತೋಶ್ರೀ ಅಮೃತಾನಂದಮಯಿ ಉಪಸ್ಥಿತರಿದ್ದರು. ಶಕ್ಕರಗಂಜ ವಾಡಿಯ ರಮೇಶ ಶ್ರೀಮಂಡಲ, ಗಣೇಶಾನಂದ ಮಹಾರಾಜರು ಇದ್ದರು. ಇದೇ ವೇಳೆ ಬೆಳಗಾವಿಯ ಮಲ್ಲನಗೌಡ ಶಿವಲಿಂಗಪ್ಪ ಸೇಗುಣಿಸಿ ತಂಡದವರಿಂದ ಗುರುಸ್ತುತಿ ಸಂಗೀತ ಸೇವೆ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.