ದುರ್ವ್ಯಸನಕ್ಕೆ ಮುಕ್ತಿ ನೀಡುವ ಚನ್ನ ವೀರ ಶ್ರೀ
ಹಿರಿಯ ಸ್ವಾಮೀಜಿ ಜನ್ಮದಿನ ನಿಮಿತ್ತ 15 ವರ್ಷಗಳಿಂದ "ವ್ಯಸನಮುಕ್ತಿ ಜಾಗೃತಿ ಕಾರ್ಯಕ್ರಮ'
Team Udayavani, Mar 8, 2020, 7:17 PM IST
ಔರಾದ: ಕಮಲನಗರ ತಾಲೂಕಿನ ಸೋನಾಳ ಗ್ರಾಮ ಹಾಗೂ ಹೂವಿನ ಶಿಗ್ಲಿ ವಿರಕ್ತ ಮಠದ ಶ್ರೀ ಚನ್ನವೀರ ಸ್ವಾಮಿಗಳು, ಹಿರಿಯ ಸ್ವಾಮೀಜಿ ಜನ್ಮದಿನ ನಿಮಿತ್ತ ಪ್ರತಿವರ್ಷ ರಾಜ್ಯ ಹಾಗೂ ತೆಲಂಗಾಣದ ಮನೆ, ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದುಶ್ಚಟಗಳಿಂದ ದೂರವಿರುವಂತೆ ಭಕ್ತರಿಗೆ ಅರಿವು ಮೂಡಿಸುತ್ತಿದ್ದಾರೆ.
ಈ ಮೂಲಕ ಸಾವಿರಾರು ಕುಟುಂಬದ ಸದಸ್ಯರು ನೆಮ್ಮದಿಯ ಜೀವನ ಸಾಗಿಸುವಂತೆ ಮಾಡುತ್ತಿರುವ ಸ್ವಾಮೀಜಿ ಕಾರ್ಯ ಶ್ಲಾಘನೀಯ. ಲಿಂ. ನಿರಂಜನ ಸ್ವಾಮೀಜಿ ಜನ್ಮದಿನ ನಿಮಿತ್ತ ಶ್ರೀ ಚನ್ನವೀರ ಸ್ವಾಮಿಗಳು ಹದಿನೈದು ವರ್ಷಗಳಿಂದ “ವ್ಯಸನಮುಕ್ತಿ ಜಾಗೃತಿ ಕಾರ್ಯಕ್ರಮ’ ಮಾಡಿಕೊಂಡು ಬರುತ್ತಿದ್ದಾರೆ. ಭಕ್ತರ ಮನೆ ಮನೆಗೆ ತೆರಳಿ ಹಾಗೂ ಊರಿನಲ್ಲಿರುವ ಅಂಗಡಿಗಳಿಗೆ ನಡಿಗೆ ಮೂಲಕ ತೆರಳಿ “ನಿಮ್ಮಲ್ಲಿರುವ ದುಷ್ಟಗುಣ ಹಾಗೂ ದುಶ್ಚಟಗಳನ್ನು ನಮ್ಮ ಜೋಳಿಗೆಯಲ್ಲಿ ಹಾಕಿ, ಕುಟುಂಬದ ಸದಸ್ಯರೊಂದಿಗೆ ಶಾಂತಿ ನೆಮ್ಮದಿಯ ಜೀವನ ಸಾಗಿಸಿ. ಜೊತೆಗೆ ಪಾಲಕರ ಸೇವೆ ಮಾಡಿ ಧರ್ಮದ ಬೆಳವಣಿಗೆಗೆ ದುಡಿಯುವಂತೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಕಲಮನಗರ ತಾಲೂಕಿನ ಸೋನಾಳ ಗ್ರಾಮದಲ್ಲಿ ಶುರುವಾಗಿದ್ದ ವ್ಯಸಕ್ತ ಮುಕ್ತಿ ಕಾರ್ಯ ಹದಿನೈದು ವರ್ಷಗಳಿಂದ ನಿರಂತರವಾಗಿ ಆಚರಣೆ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ, ಸವಣೂರು ತಾಲೂಕಿನ ಇತಂಗಿ, ಕಂದಗೂಳ ತಾಲೂಕಿನ ಮುಳ್ಳಹಳ್ಳಿ, ಸೋಮುಕಟ್ಟೆ ಗ್ರಾಮಗಳಲ್ಲಿ ಭಕ್ತರಿಗೆ ಪ್ರೇರಣೆ ನೀಡಲಾಗಿದೆ. ಇದೀಗ ನೆರೆಯ ತೆಲಂಗಾಣ ರಾಜ್ಯದ ಕಂಗಟಿ ಮಂಟಲ ವ್ಯಾಪ್ತಿಯ ನಾಗುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಶ್ರೀಗಳು ಎರಡು ದಿನಗಳಿಂದ ವ್ಯಸನ ಮುಕ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಧೂಮಪಾನ, ತಂಬಾಕು ಸೇವನೆ ಸೇರಿದಂತೆ ಇನ್ನಿತರ ಮಾದಕ ವ್ಯಸನದ ಪದಾರ್ಥಗಳನ್ನು ತಮ್ಮ ಜೋಳಿಗೆಗೆ ಹಾಕಿಸಿ “ಇನ್ನೊಮ್ಮೆ ಇಂಥ ಕೆಟ್ಟ ವಸ್ತುಗಳನ್ನು ಮುಟ್ಟುವುದಿಲ್ಲ’ ಎಂದು ಪ್ರಮಾಣ ಮಾಡಿಸಿ, ನಿರಂಜನ ಸ್ವಾಮೀಜಿಯ ಭಾವಚಿತ್ರಗಳನ್ನು ನೀಡುತ್ತಾರೆ. ಅಲ್ಲದೇ ವ್ಯಸನಿಗಳನ್ನು ಧಾರ್ಮಿಕ ಕಾರ್ಯಕ್ರಮದ ಕಡೆಗೆ ಕರೆದುಕೊಂಡು ಬರುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಇದರಿಂದ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದು ನಾಗೂರು ಗ್ರಾಮದ ಅನೀಲಕುಮಾರ ಬಿರಾದಾರ ಹಾಗೂವಿಜಯಕುಮಾರ ಘಾಳೆಪ್ಪ ತಿಳಿಸಿದ್ದಾರೆ.
ಪ್ರತಿಯೊಬ್ಬರ ದುರ್ವ್ಯಸನ ಬಿಡಿಸುವುದೇ ನಮ್ಮ ಕಾಯಕವಾಗಿದೆ ಎಂದು ಶ್ರೀಗಳು ಹೇಳುತ್ತಾರೆ. ಮನೆಯಲ್ಲಿ ಓದುವ ಮಕ್ಕಳಿದ್ದರೂ ನನ್ನ ಗಂಡನಿಗೆ ಮನೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲದೇ, ಪ್ರತಿನಿತ್ಯ ನಾನು ಕೂಲಿ ಕೆಲಸ ಮಾಡಿ ತಂದು ಕೂಡಿಟ್ಟ ಹಣವನ್ನು ತೆಗೆದುಕೊಂಡು ಮದ್ಯ ಸೇವಿಸಿ ಅಲೆದಾಡುತ್ತ ಮನೆಗೆ ಬರುತ್ತಿದ್ದರು. ಇದನ್ನು ಕಂಡು ನನಗೆ ನನ್ನ ಮಕ್ಕಳಿಗೆ ಮುಖ ತೋರಿಸದಂತೆ ಆಗುತ್ತಿತ್ತು. ಅಲ್ಲದೇ ಮಕ್ಕಳ ಶಿಕ್ಷಣಕ್ಕೂ ಕತ್ತರಿ ಹಾಕಲಾಗಿತ್ತು. ಊಟಕ್ಕೂ ಪರದಾಡುವ ಸ್ಥಿತಿ ಬಂದಿತ್ತು. ಅಂಥ ಸಮಯದಲ್ಲಿ ಶ್ರೀ ನಿರಂಜನ ಸ್ವಾಮೀಜಿ ದೇವರಂತೆ ನಮ್ಮೂರಿಗೆ ಬಂದು ವ್ಯಸನ ಮುಕ್ತಿ ಪ್ರೇರಣೆ ನೀಡುತ್ತಿರುವಾಗ ,ಸರಿ ಹೋಗಲಿಕ್ಕಿಲ್ಲ ಎನ್ನುವ ಆಲೋಚನೆ ಇತ್ತು. ಆದರೆ ಶ್ರೀಗಳು ನಮ್ಮೂರಿಗೆ ಬಂದು ನನ್ನಂಥ ನೂರಾರು ಕುಟುಂಬ ಸುಧಾರಣೆ ಮಾಡಿದ್ದಾರೆ ಎಂದು ನಾಗುರ ಗ್ರಾಮದ ಮಹಿಳೆಯೊಬ್ಬರು ಹೇಳುತ್ತಾರೆ.
ದೇವರು ನಾವು ಉತ್ತಮ ಪ್ರಕೃತಿಯಲ್ಲಿ ಜನ್ಮ ತಾಳುವಂತೆ ಮಾಡಿದ್ದಾನೆ. ನೂರು ವರ್ಷಗಳ ಕಾಲ ಜ್ಞಾನವೆಂಬ ಅಮೃತ ಕುಡಿಯಿರಿ. ಶುದ್ಧ ನೀರು ಕುಡಿಯಿರಿ ಎಂದು ಹೇಳಿದ್ದರೂ ಭಕ್ತರು ತಪ್ಪು ದಾರಿ ಹಿಡಿಯುತ್ತಾರೆ. ಅದರಂತೆ ಮಠಕ್ಕೆ ಬಂದ ತಾಯಂದಿರು ತಮ್ಮ ಕುಟುಂಬದ ಸಮಸ್ಯೆಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ವ್ಯಸನಮುಕ್ತಿ ಪ್ರೇರಣೆ ಕಾರ್ಯಕ್ರಮವನ್ನು ಗುರುಗಳ ಜನ್ಮದಿನ ನಿಮಿತ್ತ ಹಮ್ಮಿಕೊಳ್ಳಲಾಗಿದೆ. ಇನ್ನುಮುಂದೆ ನಿರಂತರವಾಗಿ ವ್ಯಸನಮುಕ್ತಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ.
ಶ್ರೀ ಚನ್ನವೀರ ಸ್ವಾಮೀಜಿ,
ವಿರಕ್ತ ಮಠ, ಸೋನಾಳ
ಶ್ರೀಗಳು ಮಾಡುವ ಈ ಒಳ್ಳೆಯ ಕಾರ್ಯಕ್ರಮದಿಂದ ನಮ್ಮೂರು ಸಂಪೂರ್ಣವಾಗಿ ಬದಲಾಗಿದೆ. ಈ ಹಿಂದೆ ನಮ್ಮೂರಿನಲ್ಲಿ ಸಂಜೆ ಆದರೆ ಕುಡುಕರ ಹಾವಳಿ ಹೆಚ್ಚಾಗುತ್ತಿತ್ತು. ಹೆಣ್ಣು ಮಕ್ಕಳು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದರು. ಈಗ ಆ ಸ್ಥಿತಿಯನ್ನು ಕಳೆದ ಶ್ರೀ ನಿರಂಜನ ಸ್ವಾಮಿಗಳು. ಭಕ್ತರ ಬದುಕು ಹಸನಾಗಿಸಿದ್ದಾರೆ.
ವಿಜಯಕುಮಾರ ಎಲಶೆಟ್ಟಿ, ನಾಗುರ
ಶ್ರೀಗಳು ಮಾಡುವ ಒಳ್ಳೆಯ ಕೆಲಸಕ್ಕೆ ಊರಿನ ಜನರು ಹಾಗೂ ಮಠದ ಭಕ್ತರು ಸಹಕಾರ ನೀಡಿದ್ದಾರೆ. ಶ್ರೀಗಳ ಇಂತಹ ಒಳ್ಳೆಯ ಕೆಲಸ ನಿರಂತರವಾಗಿ ನಡೆಯಲಿ. ನಮ್ಮಿಂದಾಗುವ ಸಹಕಾರವನ್ನು ತುಂಬು ಹೃದಯದಿಂದ ಮಾಡುತ್ತೇವೆ.
ನೀಲಕಠರಾವ್, ಔರಾದ
ರವೀಂದ್ರ ಮುಕ್ತೇದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.