ಭ್ರಷ್ಟ ಸರ್ಕಾರ ದಿಂದ ಅಭಿವೃದ್ಧಿಗೆ ಹಿನ್ನಡೆ
Team Udayavani, Apr 30, 2018, 3:36 PM IST
ಬಸವಕಲ್ಯಾಣ: ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್‌ನ ಭ್ರಷ್ಟ ಸರ್ಕಾರದ ಆಡಳಿದಲ್ಲಿ ಬಸವಕಲ್ಯಾಣ ಕ್ಷೇತ್ರದ ಅಭಿವೃದ್ಧಿಗೆ
ಹಿನ್ನಡೆಯಾಗಿದೆ. ಬಸವಣ್ಣನವರ ನಾಡಿನಲ್ಲಿ ಸುಳ್ಳು ಭವರಸೆ ನೀಡಿದರೆ ನಡೆಯುವುದಿಲ್ಲ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ವಾಗ್ಧಾಳಿ ನಡೆಸಿದರು.
ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಅವಧಿಗೆ ತಾವೇ ಶಾಸಕರಾಗಿದ್ದರೂ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಇದಕ್ಕೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಧೋರಣೆಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶರಣ ಭೂಮಿ ಬಸವಕಲ್ಯಾಣ ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿದೆ. ನುಡಿದಂತೆ ನಡೆಯದವರಿಗೆ ಯಾವತ್ತೂ ಒಳ್ಳೆಯದಾಗುವುದಿಲ್ಲ. ಅನುಭವ ಮಂಟಪ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡುವುದಾಗಿ ಸುಳ್ಳು ಭವರಸೆ ನೀಡಿ, ಕೊನೆಗೆ ಜಿಲೇಬಿ ತೋರಿದಂತೆ ಮಾಡಲಾಗಿದೆ. ಇಲ್ಲಿ ಎರಡು ತಿಂಗಳ ಹಿಂದೆ ಆಚರಿಸಲಾಗಿದ್ದ ಬಸವ ಉತ್ಸವ ನಿಜವಾದ ಬಸವ ಉತ್ಸವ ಆಗಿರದೇ ಕಾಂಗ್ರೆಸ್ ಉತ್ಸವವಾಗಿತ್ತು ಎಂದರು.
ಬಸವಕಲ್ಯಾಣದಲ್ಲಿ ಶರಣ ಸ್ಮಾರಕಗಳ ಅಭಿವೃದ್ಧಿಗೆ ರಚನೆಯಾಗಿರುವ ಬಿಕೆಡಿಬಿಗೆ ಹಿಂದೆ ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಂದೇ ಸಲಕ್ಕೆ 20 ಕೋಟಿ ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಗತ್ಯ ಅನುದಾನ ನೀಡದೇ ಕಡೆಗಣಿಸಿದೆ ಎಂದು ಆರೋಪಿಸಿದರು.
ದೇಶದಲ್ಲಿಯೇ ಕಾಂಗ್ರೆಸ್ ಇಲ್ಲ. ಇನ್ನು ಕಲ್ಯಾಣದಲ್ಲಿ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದರು. ಇಲ್ಲಿಯೇ ಮನೆ ಮಾಡುವುದಾಗಿ ಹೇಳಿದ ಜೆಡಿಎಸ್ ಅಭ್ಯರ್ಥಿ ಪಿಜಿಆರ್ ಸಿಂಧ್ಯಾ ಅವರು ಹಿಂದೆಯೇ ಮನೆ ಮಾಡಬೇಕಿತ್ತು. ಇದುವರೆಗೆ ನೆನಪಾಗದ ಕಲ್ಯಾಣ ಈಗ ನೆನಪಾಗುತ್ತಿದೆಯೇ ಎಂದು ಛೇಡಿಸಿದರು. ನನಗೆ ಅಣ್ಣ ಇಲ್ಲ ತಮ್ಮ ಇಲ್ಲ, ನನಗೆ ನೀವೇ ಎಲ್ಲ. ಹಿಂದೆ ಸಣ್ಣ ವಯಸ್ಸಿನಲ್ಲಿ ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ಈಗಲೂ ಬೆಂಬಲಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿ ಆಗಬೇಕು. ಶಿಕ್ಷಣದಲ್ಲಿ ಕ್ರಾಂತಿ ಆಗಬೇಕು. ಇಲ್ಲಿ ಉದ್ಯೋಗಾವಕಾಶಗಳು ಸಿಗುವ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು. ಈ ಭಾಗದ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ, ಸಂಸದ ಭಗವಂತ ಖೂಬಾ, ಜಿಪಂ ಸದಸ್ಯರಾದ ಸುಧಿಧೀರ ಕಾಡಾದಿ, ಗುಂಡುರೆಡ್ಡಿ, ಪಕ್ಷದ ನಗರ ಘಟಕದ ಅಧ್ಯಕ್ಷ ಶಿವಪುತ್ರಗೌರ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಪ್ರಮುಖರಾದ ಬಾಬು ವಾಲಿ, ರಾಜಕುಮಾರ ಸಿರಗಾಪುರ, ಜಗನ್ನಾಥ ಜಿಲ್ಲಾಬಟ್ಟೆ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ರವಿ ಚಂದನಕೆರೆ, ಶೋಭಾ ತೆಲಂಗ, ಜಿಲ್ಲಾಕಾರ್ಯದರ್ಶಿ ಸೂರ್ಯಕಾಂತ ಚಿಲ್ಲಾಬಟ್ಟೆ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ
ಗಾಯಕವಾಡ, ವೀರಣ್ಣ ಹಲಗೆ, ಚಂದ್ರಶೇಖರ್ ಬಿರಾದಾರ, ಕಾಳಿದಾಸ ಜಾಧವ, ಅನೀಲ ಹಲಶೆಟ್ಟೆ, ದಿಲೀಪ ಮಡ್ಡೆ, ಹಣಮಂತ ಅಂಬುಲಗೆ, ಅಶೋಕ ವಕಾರೆ, ಅರವಿಂದ ಮುತ್ತೆ, ತುಕಾರಾಮ ಲಾಡೆ, ದಿಗಂಬರ ಜಲ್ಲೆ, ಶಿವಕುಮಾರ ಬಿರಾದಾರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.