ಬಂಜಾರರು ಶ್ರಮಜೀವಿಗಳು: ಎಂಎಲ್ಸಿ ಬಯ್ನಾಪೂರ
Team Udayavani, Apr 6, 2022, 11:58 AM IST
ಮುದಗಲ್ಲ: ಕಾಡು-ಮೇಡುಗಳಲ್ಲಿ ವಾಸಿಸುವ ಬಂಜಾರ ಸಮಾಜ ಬಂಧುಗಳು ಶ್ರಮಜೀವಿಗಳಾಗಿದ್ದಾರೆ ಎಂದು ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ನಾಪೂರ ಹೇಳಿದರು.
ಸೊಂಪೂರ ತಾಂಡಾ(ಡಿ)ದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ದುರ್ಗಾದೇವಿ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರ ಸಮಾಜಕ್ಕೆ ತನ್ನದೇಯಾದ ಇತಿಹಾಸವಿದೆ. ಸಂತ ಸೇವಾಲಾಲರು ತಂದೆ ಭೀಮಾನಾಯ್ಕ, ತಾಯಿ ಧರ್ಮಿಣಿಭಾಯಿ ತಪಸ್ಸಿನಿಂದ ಜನಿಸಿದರು. ಅವರು ಬಂಜಾರ ಸಮಾಜದ ಉದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು ಎಂದರು.
ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಇತ್ತೀಚೆಗೆ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವ ಬಂಜಾರ ಸಮಾಜ ಅನಗತ್ಯ ಜಗಳ, ವೈಯಕ್ತಿಕ ಕಚ್ಚಾಟದಿಂದ ದೂರು-ಪ್ರತಿ ದೂರು ಸಲ್ಲಿಸುವ ಮೂಲಕ ದಾರಿ ತಪ್ಪುತ್ತಿದೆ ಎಂದು ವಿಷಾದಿಸಿದರು.
ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಒಗ್ಗಟ್ಟು ತೋರಿಸುವುದಲ್ಲದೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದೆ ಬರಬೇಕಿದೆ ಎಂದರು.
ಎಲ್‌ಐಸಿ ಅಭಿವೃದ್ಧಿ ಅಧಿ ಕಾರಿ ಎಲ್.ಟಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮುಂಚೆ ವಿಜಯಪುರ ಜಿಲ್ಲೆಯ ಕೆಸರಟ್ಟಿಯ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಹಾಗೂ ಲಿಂಗಸುಗೂರಿನ ವಿಜಯಮಹಾಂತೇಶ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಗಮಿಸಿ ತಾಂಡಾ ನಿವಾಸಿಗಳಿಗೆ ಆಶೀರ್ವದಿಸಿದರು. ಸುಮಾರು 2 ವರ್ಷಗಳಿಂದ ದೇವಸ್ಥಾನದ ಗೋಪುರ ಹಾಗೂ ಮೂರ್ತಿ ಕೆತ್ತನೆಗೆ ಶ್ರಮಿಸಿದ್ದ ಗ್ರಾಮದ ಮುಖಂಡರು ತಾಂಡಾದಲ್ಲಿ ಪ್ರತಿ ಮನೆಯಲ್ಲಿ ವಂತಿಗೆ ಸಂಗ್ರಹಿಸಿ ಕಳೆದ ತಿಂಗಳು ಮಹಾರಾಷ್ಟ್ರದ ಫಂಡರಪುರದಿಂದ ಅವಳಿ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದರು.
ಈ ವೇಳೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಗ್ರಾಪಂ ಅಧ್ಯಕ್ಷ ಮೌನೇಶ ರಾಠೊಡ, ತಾಪಂ ಮಾಜಿ ಸದಸ್ಯರಾದ ರಾಮನಗೌಡ, ಶರಣಪ್ಪ ನಾಗಲಾಪುರ, ಶಂಭುಲಿಂಗಪ್ಪ ಸಾಹುಕಾರ, ಬಂಜಾರ ಸಮಾಜದ ಗೌರವಾಧ್ಯಕ್ಷ ಭೀಮಶಪ್ಪ ಪೂಜಾರಿ, ಗ್ರಾಪಂ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಮಾನಸಿಂಗ್, ಬಸವರಾಜ ತಳವಾರ, ಶರಣಪ್ಪ ತಗ್ಗಲಿ, ಪಿಕೆಪ್ಪ ನಾಯ್ಕ, ಮಹಿಬೂಬಸಾಬ ಸೇರಿದಂತೆ ತಾಂಡಾದ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.