ಬಳಗಾನೂರು: 54.2 ಮಿ.ಮೀ ಮಳೆ ದಾಖಲು; ಕುಡಿಯುವ ನೀರಿಗಾಗಿ ಪರದಾಟ
Team Udayavani, Aug 28, 2022, 4:38 PM IST
ಬಳಗಾನೂರು: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿದಿದ್ದು, ವಿದ್ಯುತ್ ಸ್ಥಗಿತಗೊಂಡಿರುವ ಹಿನ್ನೆಲೆ ಶನಿವಾರ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಯಿತು.
ಪಟ್ಟಣದಲ್ಲಿ 54.2 ಮಿ.ಮೀ. ಮಳೆ ದಾಖಲಾಗಿದೆ. ಸಾರ್ವಜನಿಕರಿಗೆ ಶ್ರಾವಣ ಮಾಸದ ಕಡೆ ಶನಿವಾರ ಹಾಗೂ ಬೆನಕನ ಅಮಾವಾಸ್ಯೆ ಆಚರಣೆಗೆ ವಿದ್ಯುತ್ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಪರದಾಡುವಂತಾಯಿತು.
ಪಟ್ಟಣ ಸೇರಿ ಸುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ರೈತರ ಮೊಗದಲ್ಲಿ ಸಂತಸ ತಂದಿದೆ. ನಾಟಿ ಕಾರ್ಯ ಮತ್ತಷ್ಟು ಚುರುಕುಗೊಳಿಸಿದ್ದಾರೆ.
ನಾಟಿ ಪೂರೈಸಿದ ಭತ್ತದ ಬೆಳೆಗಳಿಗೆ ಹಾಗೂ ತೋಗರಿ, ಹತ್ತಿ ಸೇರಿ ಇತರೆ ಬೆಳೆಗಳಿಗೆ ಮಳೆ ಉಸಿರು ನೀಡಿದೆ. ಆದರೆ ಸೂರ್ಯಕಾಂತಿ ಬೆಳೆದ ರೈತರಿಗೆ, ನಾಲೆಗಳ ಅಕ್ಕಪಕ್ಕದ ಹೊಲಗಳಿಗೆ ಈ ಮಳೆ ಹಾನಿ ಉಂಟು ಮಾಡಿದೆ. ಪಟ್ಟಣದ ಹಿರೇಹಳ್ಳ, ಚಿಗೆಹಳ್ಳ ಸೇರಿ ನಾಲೆಗಳು, ಹೊಲ ಗದ್ದೆಗಳಲ್ಲಿನ ಕಾಲುವೆಗಳು ತುಂಬಿ ಹರಿಯುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.