![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 31, 2022, 7:01 PM IST
ಮುದಗಲ್ಲ: ಕಳೆದೆರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಐತಿಹಾಸಿಕ ಮೊಹರಂ ಆಚರಣೆ ಸ್ಥಗಿತಗೊಂಡಿತ್ತು. ಆದರೆ, ಈ ಬಾರಿ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಕಿಲ್ಲಾ ಸೇರಿದಂತೆ ಮೊಹರಂ ನಡೆಯುವ ಪ್ರದೇಶಗಳಲ್ಲಿ ಅನಗತ್ಯ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗುವುದು ಎಂದು ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ತಿಳಿಸಿದರು.
ಹಜರತ್ ಹುಸೇನಿ ಆಲಂ ದರ್ಗಾದಲ್ಲಿ ಶನಿವಾರ ನಡೆದ ದರ್ಗಾದ ಆಡಳಿತ ಮಂಡಳಿ, ಪುರಸಭೆ ಸದಸ್ಯರು, ಧರ್ಮಗುರುಗಳು, ಸಾರ್ವಜನಿಕ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಅಂಗವಾಗಿ ಪೊಲೀಸರು ತೆಗೆದುಕೊಳ್ಳುವ ಕೆಲವೊಂದು ಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕು. ನೀವು ನಮಗೆ ಸಲಹೆ ನೀಡಿದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಕೊಳ್ಳುತ್ತೇವೆ. ಆದರೆ, ಕಿಲ್ಲಾದಲ್ಲಿ ಜರುಗುವ 9ನೇ ದಿನದ ಕತ್ತಲ್ ರಾತ್ರಿಗೆ ಕಿಲ್ಲಾದ ಒಳಗಡೆ, ಹೊರಗಡೆ ಸಂಚರಿಸಲು ಕಟ್ಟುನಿಟ್ಟಿನ ಕರಾರುಗಳನ್ನು ವಿಧಿಸಲಾಗುವುದು. ಅನಗತ್ಯವಾಗಿ ವಾಹನಗಳನ್ನು ಚಲಾಯಿಸುವುದು ಕಂಡು ಬಂದರೆ ವಾಹನ ಚಾಲನಾ ಪರವಾನಗಿ, ವಾಹನದ ಕಾಗದ ಪತ್ರಗಳನ್ನು ಪರಿಶೀಲಿಸುವದಲ್ಲದೇ ಕಿಲ್ಲಾದಲ್ಲಿರುವವರು ಆಧಾರ ಕಾರ್ಡ್ ತೋರಿಸಬೇಕು. ಆಸ್ಪತ್ರೆ, ಔಷಧ ಖರೀದಿ ಸೇರಿದಂತೆ ಅಗತ್ಯ ಕಾರಣಗಳಿದ್ದರೆ ಮಾತ್ರ ವಾಹನಗಳನ್ನು ಬಿಡಲಾಗುವುದು. ಅನಗತ್ಯ ಎಂದು ಕಂಡು ಬಂದಲ್ಲಿ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದರ್ಗಾ ಕಮೀಟಿ ಅಧ್ಯಕ್ಷ ಅಮೀರಬೇಗ್ ಉಸ್ತಾದ, ಕಾರ್ಯದರ್ಶಿ ಮಹ್ಮದ ಸಾಕಲಿ, ಮೌಲಾನಾ ಜಮೀರ ಅಹ್ಮದಖಾಜಿ, ಸೈ. ನ್ಯಾಮತ್ ಉಲ್ಲಾ ಖಾದ್ರಿ, ಮುಜಾಕೀರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ, ಸದಸ್ಯ ಮಹಿಬೂಬಸಾಬ ಕಡ್ಡಿಪುಡಿ, ಅಜಮೀರ ಬೆಳ್ಳಿಕಟ್, ಮಹ್ಮದಗಯಾ ಸುದ್ದೀನ್ ಸೇರಿದಂತೆ ಮುಂತಾದವರಿದ್ದರು
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.