ಪ್ರತಿ ಗ್ರಾಮದಲ್ಲೂ ಬಸವ ದಳ ಶಾಖೆ
Team Udayavani, Mar 29, 2022, 2:45 PM IST
ಬೀದರ: ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮಗಳಿಗೂ ರಾಷ್ಟ್ರೀಯ ಬಸವ ದಳ ಸಂಘಟನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಹುಮನಾಬಾದ ತಾಲೂಕಿನ ಅಮೀರಾಬಾದ್ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬಸವ ದಳವು ದೇಶದ ಅತಿದೊಡ್ಡ ಬಸವ ಪರ ಸಂಘಟನೆಯಾಗಿದೆ. ಐದು ರಾಜ್ಯಗಳಲ್ಲಿ 1,200ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಬಸವಾದಿ ಶರಣರ ತತ್ವಗಳ ಪ್ರಸಾರದ ಜತೆಗೆ ಯುವಕರಲ್ಲಿ ಶರಣ ಸಂಸ್ಕೃತಿ ಬೆಳೆಸುವುದು ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕಬೇಕು. ಜಾಗತಿಕ ಧರ್ಮಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಲಿಂ. ಲಿಂಗಾನಂದ ಸ್ವಾಮೀಜಿ ಹಾಗೂ ಲಿಂ| ಮಾತೆ ಮಹಾದೇವಿ ಅವರ ಕನಸಾಗಿತ್ತು. ಅದನ್ನು ನನಸಾಗಿಸುವವರೆಗೂ ರಾಷ್ಟ್ರೀಯ ಬಸವ ದಳ ವಿರಮಿಸದು ಎಂದು ತಿಳಿಸಿದರು.
ಅನಿಲಕುಮಾರ ಕುಡತಿ ಗುರುಬಸವ ಪೂಜೆ ನೆರವೇರಿಸಿದರು. ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ರವಿ ಪಾಪಡೆ, ನಾಗಶೆಟ್ಟಿ ಶೆಟಕಾರ್, ಸಿದ್ರಾಮ ಶೆಟಕಾರ್, ಸಂಜುಕುಮಾರ ಪಾಟೀಲ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ಸುರೇಶ ಮರೂರಕರ್ ಸ್ವಾಗತಿಸಿ ವಿಜಯಕುಮಾರ ಬೋತಗಿ ವಂದಿಸಿದರು.
ಅಪ್ಪಾರಾವ್ ಮರೂರಕರ್, ಸುಭಾಷ ಗೌರಿ, ನಿಜಲಿಂಗಪ್ಪ ಬಿ. ಮರೂರಕರ್, ವೈಜಿನಾಥ, ಸಂತೋಷ ಮರೂರಕರ್, ಧೂಳಪ್ಪ ಬೋತಗಿ, ರಮೇಶ ಮರೂರಕರ್, ಈಶ್ವರ ಬೋತಗಿ, ಬಬಿತಾ ಉಮೇಶ ಮರೂರಕರ್ ಇದ್ದರು.
ಗ್ರಾಮ ಘಟಕದ ಪದಾಧಿಕಾರಿಗಳು
ಅಪ್ಪಾರಾವ್ ಮರೂರಕರ್ (ಗೌರವಾಧ್ಯಕ್ಷ), ಸಂತೋಷ ಮರೂರಕರ್ (ಅಧ್ಯಕ್ಷ), ರಾಜಕುಮಾರ ಬೋತಗಿ, ರಾಜಕುಮಾರ ಹೇಮಶೆಟ್ಟಿ (ಉಪಾಧ್ಯಕ್ಷರು), ಸಾಯಿನಾಥ ಮರೂರಕರ್ (ಪ್ರಧಾನ ಕಾರ್ಯದರ್ಶಿ), ವಿಜಯಕುಮಾರ ಬೋತಗಿ (ಸಹ ಕಾರ್ಯದರ್ಶಿ), ನಾಗರಾಜ ಉಡಬಾಳ, ಶಿವಶರಣಪ್ಪ ಗೌರಿ(ಸಂಘಟನಾ ಕಾರ್ಯದಶಿ), ಮಂಜುನಾಥ ಮರೂರಕರ್ (ಕೋಶಾಧ್ಯಕ್ಷ), ಸುಭಾಷ ಗೌರಿ, ಅನಿಲ್ ಕುಡತಿ, ಧೂಳಪ್ಪ ಬೋತಗಿ, ನಿಜಲಿಂಗ ಬರೂರಕರ್, ವೈಜಿನಾಥ, ಕಾಶೀನಾಥ (ಗೌರವ ಸಲಹೆಗಾರರು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.