ಬಸವಕಲ್ಯಾಣ-ಹುಲಸೂರ ಮೀಸಲಾತಿ ಪಟ್ಟಿ
ಚಿಟಗುಪ್ಪಾ ತಾಲೂಕಿನ 14 ಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ
Team Udayavani, Jan 19, 2021, 6:08 PM IST
ಬೀದರ: ರಾಜ್ಯ ಚುನಾವಣಾ ಆಯೋಗವು 2020ರ ಗ್ರಾಪಂಗಳ ತಾಲೂಕುವಾರು ನಿಗದಿಪಡಿಸಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಗ್ರಾಪಂವಾರು ನಿಯಮಾನುಸಾರ ಮರು ಹಂಚಿಕೆ ಮಾಡುವ ಪ್ರಕ್ರಿಯೆಯು ಸೋಮವಾರ ಬಸವಕಲ್ಯಾಣ ನಗರದಲ್ಲಿ ಸುಗಮವಾಗಿ ನಡೆಯಿತು. ಇದಕ್ಕಾಗಿ ಈ ಮುಂಚೆಯೇ ತಾಲೂಕುವಾರು ಸಮಯ ನಿಗದಿಪಡಿಸಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿಗಳಾದ ಡಿಸಿ ರಾಮಚಂದ್ರನ್ ಆರ್ ಅವರು, ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಬಸವಕಲ್ಯಾಣ ತಾಲೂಕಿನ 31 ಹಾಗೂ ಹುಲಸೂರ ತಾಲೂಕಿನ 7 ಗ್ರಾಪಂಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಬಸವಕಲ್ಯಾಣ ತಾಲೂಕಿನ ಬಸವಕಲ್ಯಾಣ ಥೇರ್ ಮೈದಾನದ ಸಭಾಭವನದಲ್ಲಿ ನೂತನ ಸದಸ್ಯರ ಸಭೆ ಜರುಗಿಸಿ, ಅವರ ಸಮ್ಮುಖದಲ್ಲಿಯೇ ಮೀಸಲಾತಿ ನಿಗದಿಪಡಿಸಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಅಪರ ಡಿಸಿ ರುದ್ರೇಶ ಗಾಳಿ ಮತ್ತು ತಹಶೀಲ್ದಾರ್ ಸಾವಿತ್ರಿ ಸಲಗರ ಇದ್ದರು. ಬಸವಕಲ್ಯಾಣ ಮತ್ತು ಹುಲಸೂರ ತಾಲೂಕಿನ ವಿವಿಧ ಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯ ವಿವರ ಈ ಕೆಳಗಿನಂತಿವೆ.
ಬಸವಕಲ್ಯಾಣ ತಾಲೂಕು: ಬೆಟಬೆಳಕುಂದಾ:ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ.
ನಾರಾಯಣಪುರ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ, ಯರಬಾಗ್: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ.
ಖೇಡ್ರಾ(ಬಿ): ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ. ಚಂಡಕಾಪೂರ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ.
ಮುಡಬಿ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ. ಎಕಲೂರ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ.
ಕಿಟ್ಟಾ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ.
ಪರತ್ತಾಪೂರ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ. ಇಸ್ಲಾಂಪೂರ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ. ಯರಂಡಿ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ. ರಾಜೋಳಾ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಉಪಾಧ್ಯಕ್ಷ. ಭೋಸಗಾ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ.
ರಾಜ್ಜೆಶ್ವರ: ಪರಿಶಿಷ್ಟ ಜಾತಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಅಳಗೂಡ್: ಪರಿಶಿಷ್ಟ ಜಾತಿ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ.
ಉಜಳಂಬ: ಪರಿಶಿಷ್ಟ ಜಾತಿ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ಹಣಮಂತವಾಡಿ(ಆರ್): ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.
ಧನ್ನೂರಾ(ಕೆ): ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ತಡೋಳಾ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
ಹರಕೂಡ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಉಪಾಧ್ಯಕ್ಷ. ಕಲಕೋರಾ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ , ಸಾಮಾನ್ಯ ಉಪಾಧ್ಯಕ್ಷ. ಲಾಡವಂತಿ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
ಮೋರಖಂಡಿ:ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಮಂಠಾಳ: ಪರಿಶಿಷ್ಟ ಪಂಗಡ ಅಧ್ಯಕ್ಷ,ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಕೋಹಿನೂರ: ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಚಿಕ್ಕಣೇಗಾಂವ್:ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ನೀರಗುಡಿ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಉಪಾಧ್ಯಕ್ಷ.ಸಸ್ತಾಪೂರ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಉಪಾಧ್ಯಕ್ಷ. ಗುಂಡುರ್: ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.ಘೊಟಾಳಾ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ. ಬೆಟ್ ಗೇರಾ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
ಹುಲಸೂರ ತಾಲೂಕು: ಹುಲಸೂರ: ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಮೀರಕಲ್: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ. ಬೇಲೂರ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ. ಗೋರತಾ ಬಿ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ. ತೊಗ್ಲೂರ್: ಪರಿಶಿಷ್ಟ ಜಾತಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ. ಗಡಿಗೊಂದಗಾಂವ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ. ಮುಚಲಾಂಬ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
ಹುಮನಾಬಾದ್ ತಾಲೂಕು: ಮಧ್ಯಾಹ್ನ 3ಗಂಟೆಯಿಂದ ಹುಮನಾಬಾದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಹುಮನಾಬಾದ ತಾಲೂಕಿನ 19 ಮತ್ತು ಚಿಟಗುಪ್ಪಾ ತಾಲೂಕಿನ 14 ಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ ಕೂಡ ಸುಸೂತ್ರವಾಗಿ ನಡೆಯಿತು.
ಚುನಾಯಿತ ಸದಸ್ಯರು ಉಪಸ್ಥಿತಿ: ಚುನಾಯಿತ ಸದಸ್ಯರು, ತಹಶೀಲ್ದಾರರು, ಗ್ರಾಮ ಲೆಕ್ಕಾ ಧಿಕಾರಿಗಳ ಮುಖಾಂತರ ನೋಟಿಸ್ ಸ್ವೀಕೃತಿ ಪಡೆದು ನಿಗದಿಪಡಿಸಲಾದ ಸ್ಥಳದಲ್ಲಿ ಚುನಾವಣಾಧಿಕಾರಿಗಳಿಂದ ನೀಡಲಾದ ಪ್ರಮಾಣ ಪತ್ರದೊಂದಿಗೆ ಅವರವರ ಗ್ರಾಪಂಗೆ ನಿಗದಿಪಡಿಸಲಾದ ಸ್ಥಾನದಲ್ಲಿ ಆಸೀನರಾಗಿದ್ದರು. ಕೋವಿಡ್ ನಿಯಮ ಪಾಲನೆ: ಕೋವಿಡ್ ನಿಯಮಾನುಸಾರ ಆಸೀನರಾಗಲು ಚುನಾಯಿತ ಎಲ್ಲ ಸದಸ್ಯರಿಗೆ ಈ ಮೊದಲೇ ಸೂಚಿಸಿದಂತೆ
ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳ ವ್ಯವಸ್ಥೆಗೆ ಕ್ರಮ ವಹಿಸಲಾಗಿತ್ತು.
ಇಂದು ಬೀದರ ತಾಲೂಕು: ಜ.19ರಂದು ಬೆಳಗ್ಗೆ 10ಗಂಟೆಗೆ ಬೀದರನ ರಂಗಮಂದಿರದಲ್ಲಿ ಬೀದರ ತಾಲೂಕಿನ ಒಟ್ಟು 33 ಗ್ರಾಪಂಗಳ ಅಧ್ಯಕ್ಷ ಹಾಗೂ
ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಲಿದೆ.
22ರಂದು ಔರಾದ್ ಕಮಲನಗರ, ಭಾಲ್ಕಿ ಜ.22ರ ಬೆಳಗ್ಗೆ 10ಗಂಟೆಯಿಂದ ಔರಾದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಔರಾದ ತಾಲೂಕಿನ 21 ಹಾಗೂ
ಕಮಲನಗರ ತಾಲೂಕಿನ 18 ಗ್ರಾಪಂಗಳ ಮತ್ತು ಭಾಲ್ಕಿಯ ರಾಮತೀರ್ಥವಾಡಿ ಕ್ರಾಸ್‌ನ ಪ್ರಯಾಗ ಫಂಕ್ಷನ್ ಹಾಲ್ನಲ್ಲಿ ಭಾಲ್ಕಿ ತಾಲೂಕಿನ 40 ಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.