ಫೆ.15ಕ್ಕೆ ದೆಹಲಿಯಲ್ಲಿ ಸೇವಾಲಾಲ ಜಯಂತಿ
ಹಾಮುನಗರದಲ್ಲಿ ಹಾಮುಲಾಲ ಜಾತ್ರಾ ಮಹೋತ್ಸವ ದೆಹಲಿಗೆ ಆಗಮಿಸಲು ಡಾ| ಜಾಧವ ಕರೆ
Team Udayavani, Jan 26, 2020, 4:25 PM IST
ಬಸವಕಲ್ಯಾಣ: ಫೆಬ್ರವರಿ 15ರಂದು ದೆಹಲಿಯಲ್ಲಿ ಸಂತ ಸೇವಾಲಾಲ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಬಂಜಾರಾ ಸಮುದಾಯದ ಬಾಂಧವರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.
ಹಾಮುನಗರ (ಏಕಲೂರ ತಾಂಡಾ)ದಲ್ಲಿ ಶುಕ್ರವಾರ ರಾತ್ರಿ ಜರುಗಿದ ಶ್ರೀ ಹಾಮುಲಾಲ ದೇವರ 173ನೇ ಜಾತ್ರಾ ಮಹೋತ್ಸವ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು. ಫೆ.15ರಂದು ದೆಹಲಿಯಲ್ಲಿ ಆಯೋಜಿಸಲಾದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಫೆ.13ರಂದು ಸಂಜೆ ಯಾದಗಿರಿಯಿಂದ ದೆಹಲಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖಂಡರು ಹಾಗೂ ಬಾಂಧವರು ದೆಹಲಿಗೆ ಆಗಮಿಸಿ ಜಯಂತಿ ಆಚರಣೆಗೆ ಮೆರಗು ತರಬೇಕು ಎಂದರು.
ಕುಸ್ತಿ ಪೈಲ್ವಾನರನ್ನು ಸೃಷ್ಟಿಸಿ ಹಾಗೂ ಅವರಿಗೆ ತರಬೇತಿ ನೀಡಲು ಮುಂದಿನ ವರ್ಷದೊಳಗಾಗಿ ಹಾಮುನಗರದಲ್ಲಿ ನೂತನ ಗರಡಿ ಮನೆ ಸ್ಥಾಪಿಸಬೇಕು. ಮುಂದಿನ ವರ್ಷ ಬಸವಕಲ್ಯಾಣದಲ್ಲಿ ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು. ಇದರಲ್ಲಿ ನಾನೂ ಭಾಗವಹಿಸುವೆ ಎಂದು ಸಂಸದರು ಈ ವೇಳೆ ಶಾಸಕ ಬಿ. ನಾರಾಯಣರಾವ್ ಅವರಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ನಾರಾಯಣರಾವ್ ಮಾತನಾಡಿ, ಹಾಮುನಗರದಿಂದ ಏಕಲೂರ, ಹಾಮುನಗರ-ಹತ್ಯಾಳ ವರೆಗೆ ರಸ್ತೆ ನಿರ್ಮಾಣ, ಹಾಮುನಗರದಲ್ಲಿ ಕುಸ್ತಿ ಗರಡಿ ಮನೆ ಹಾಗೂ ಆಟದ ಮೈದಾನ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಹಾಮುನಗರಕ್ಕೆ 5 ಕೋಟಿ.ರೂ. ಅನುದಾನ ನೀಡಲಾಗುವುದು. ತಾಲೂಕಿನ ಆಯಾ ಜಿಪಂ, ತಾಪಂ ಹಾಗೂ ಗ್ರಾಪಂ ಕ್ಷೇತ್ರಗಳ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಬಂಜಾರಾ ಸಮುದಾಯದ ಮುಖಂಡರೆಲ್ಲರು ಸಹಕರಿಸಿದರೆ ತಾಲೂಕಿನಲ್ಲಿರುವ ಒಟ್ಟು 40 ತಾಂಡಾಗಳ ಅಭಿವೃದ್ಧಿಗಾಗಿ ಒಟ್ಟು 20 ಕೋಟಿ ರೂ. ಒದಗಿಸಲು ನಾನು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ನಾಯಕ ಬಾಬು ಹೊನ್ನಾನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇವಿ ತಾಂಡಾದ ಅನೀಲ್ ಮಹಾರಾಜರು ನೇತೃತ್ವ ವಹಿಸಿದ್ದರು. ನಂತರ ತಾಪಂ ಅಧ್ಯಕ್ಷೆ ಯಶೋಧಾ ಎನ್. ರಾಠೊಡ್, ತಾಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನೀಲಕಂಠ ರಾಠೊಡ್, ಜಿಪಂ ಸದಸ್ಯ ರಾಜಶೇಖರ್ ಮೇತ್ರೆ ಮಾತನಾಡಿದರು.
ಚಿಕನಾಗಾಂವ್ ಬಂಜಾರಾ ತಾಂಡಾದ ಲೋಕೇಶ್ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಯುವ ಮುಖಂಡ ಶರಣು ಸಲಗರ, ದಾವೂದ್, ಶರಣು ಅಲಗೂಡ್, ಧನಸಿಂಗ್ ರಾಠೊಡ್, ಬೀದರ ಉತ್ತರ ಕ್ಷೇತ್ರದ ನಾಡ ತಹಶೀಲ್ದಾರ್ ಘಮಾವತಿಬಾಯಿ ಆರ್. ರಾಠೊಡ, ಏಕಲೂರ ಗ್ರಾಪಂ ಅಧ್ಯಕ್ಷೆ ಹೇಮಾವತಿ ಟಿ. ಜೋಗೆ, ಉಪಾಧ್ಯಕ್ಷೆ ಮಹಾದೇವಿ ಎಸ್. ರಾಠೊಡ, ತಾಪಂ ಸದಸ್ಯೆ ತಾರಾಬಾಯಿ ಆರ್. ರಾಠೊಡ, ಎಸ್.ಆರ್. ನಾಯಕ, ವಿಠಲ ಕೆ. ರಾಠೊಡ, ಜೇಮಸಿಂಗ್ ಜಿ. ರಾಠೊಡ್, ಸುಶೀಲಾಬಾಯಿ ಜಿ. ರಾಠೊಡ್, ರಾಮಚಂದ್ರ ಜಿ. ರಾಟೋಡ, ಸಂಜುಕುಮಾರ ನಾಯಕ, ಪ್ರೇಮಸಿಂಗ್ ಚವ್ಹಾಣ ಇದ್ದರು. ನವಲಿಂಗ ಪಾಟೀಲ ನಿರೂಪಿಸಿದರು. ಕಿಶನ್ ಚವ್ಹಾಣ ವಂದಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಾಮುನಗರ ನಿವಾಸಿ ಭೀಮಸಿಂಗ್ ಎಸ್. ರಾಠೊಡ್ ಹಾಗೂ ಶ್ರೀ ಹಾಮುಲಾಲ ದೇವಸ್ಥಾನ ಸುತ್ತಲೂ ಸ್ಟೀಲ್ ಗ್ರೀಲ್ ಅಳವಡಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.