ಕುರುಬಖೇಳಗಿಯಲ್ಲಿ ಬಸವೇಶ್ವರ ಜಾತ್ರೆ
Team Udayavani, May 4, 2022, 1:15 PM IST
ಭಾಲ್ಕಿ: ವಿಶ್ವಗುರು ಬಸವಣ್ಣನವರ ಸಂದೇಶಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಪ್ರತಿಪಾದಿಸಿದರು.
ತಾಲೂಕಿನ ಕುರುಬಖೇಳಗಿ ಗ್ರಾಮದ ಬಸವೇಶ್ವರ ಮಂದಿರದ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಬಸವದರ್ಶನ ಪ್ರವಚನ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರಗಳಿವೆ. ಆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಹೀಗಾಗಿ ಸಮಸ್ಯೆಗಳಿಗೆ ಹೆದರಿ ಓಡಿ ಹೋಗಲು ನೋಡುತ್ತೇವೆ. ಇದು ಮೂರ್ಖರ ಲಕ್ಷಣ. ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರಗಳಿವೆ. ನಾವು ಸಂಸಾರದಲ್ಲಿ ಕೆಸರಿನಲ್ಲಿ ಹುಟ್ಟಿದ ಕಮಲದಂತೆ ಯಾವುದಕ್ಕೂ ಅಂಟಿಕೊಳ್ಳದೆ ಇದ್ದೂ ಇಲ್ಲದಂಗಿರಬೇಕು. ಇದು ಉತ್ತಮ ಪುರುಷನ ಲಕ್ಷಣ ಎಂದರು.
ಕಪಲಾಪುರ ಭವಾನಿ ಮಂದಿರದ ಮಾತಾಜಿ ಎಂದೇ ಪ್ರಖ್ಯಾತರಾದ ಜಯವಂತ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ಪ್ರಮುಖ ರಾಚಪ್ಪಾ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಬಸವಣ್ಣನವರ ವಿಚಾರಧಾರೆಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕ.ಸಾ.ಪ ತಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಡಾ| ವಿಕ್ರಮ ಬಸವರಾಜ ಭಾಲ್ಕೆ, ಪತ್ರಕರ್ತ ರಾಜೇಶ ಮುಗಟೆ, ಡಾ| ಭಿಮರಾವ್ ಗುರುನಾಥ ಪಾಟೀಲ, ರಾಜಕುಮಾರ ಬಾಲಕುಂದೆ, ಸುಭಾಷ ಮಾಲಿಪಾಟೀಲ, ಶಿವರಾಜ ಕೋಟೆ, ಪರಮೇಶ್ವರ ಕರಡ್ಯಾಳೆ, ಶಿವಶರಣಪ್ಪ ಸೊನಾಳೆ, ಸಿದ್ರಾಮ ಪಾಟೀಲ, ಮಲ್ಲಪ್ಪಾ ಪನಶೆಟ್ಟೆ ದಾಡಗಿ, ರಾಜಕುಮಾರ ಮಾಸಿಮಾಡೆ ಇದ್ದರು.
ದೇವಿಕಾ ಬಸವರಾಜ ಹೊನ್ನಾಳೆ ಪ್ರಾರ್ಥನಾಗೀತೆ ನಡೆಸಿಕೊಟ್ಟರು. ಪ್ರಕೃತಿ ಶಿವಶರಣಪ್ಪ ಮಠಪತಿ ವಚನನೃತ್ಯ ನಡೆಸಿಕೊಟ್ಟರು. ಶಾಂತಕುಮಾರ ಪ್ರಭುಶೆಟ್ಟೆಪ್ಪಾ ಮಾಸಿಮಾಡೆ ಸ್ವಾಗತಿಸಿದರು. ವಿಷ್ಣುಕೋಟೆ ನಿರೂಪಿಸಿದರು. ಗುರುರಾಜ ಸೊನಾಳೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.