ರಮಣೀಯ ನಿಸರ್ಗದಲ್ಲಿ ಗುಪ್ತಲಿಂಗೇಶ್ವರ
Team Udayavani, Feb 21, 2020, 3:14 PM IST
ಬೀದರ: ಸುತ್ತಮುತ್ತಲು ಹಚ್ಚಹಸಿರಿನ ಕಾಡು, ಸದಾ ಪಕ್ಷಿಗಳ ಚಿಲಿಪಿಲಿ ಕಲರವ, ಜೋಗ ಜಲಪಾತದಂತೆ ಮನಮೋಹಕವಾಗಿ ಧುಮ್ಮಿಕ್ಕುವ ನೀರಿನ ರಮಣೀಯ ದೃಶ್ಯ, ನಿಸರ್ಗದ ಮಡಿಲಲ್ಲಿ ಪುರಾತನ ಶಿವಲಿಂಗ ಹೊಂದಿದ ಶಿವನ ದೇಗುಲ.
ಇದು ಬೀದರ ನಗರದಿಂದ 20 ಕಿ.ಮೀ. ಅಂತರದಲ್ಲಿರುವ ಸುಕ್ಷೇತ್ರ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನದ ವೈಭವ. ಗಿರಿ-ಝರಿಗಳಿಂದ ಕೂಡಿದ ರಮ್ಯ ತಾಣದಲ್ಲಿ ಸ್ಥಾಪಿತಗೊಂಡಿರುವ ದೇವಸ್ಥಾನ ಪ್ರವಾಸಿ ತಾಣವಾಗಿ ಭಕ್ತ ಸಮೂಹವನ್ನು ಕೈ ಬೀಸಿ ಕರೆಯುತ್ತಿದೆ.
ಮಹಾಶಿವರಾತ್ರಿ, ಶ್ರಾವಣ ಮಾಸ ಮತ್ತು ಅಮಾವಾಸ್ಯೆಯಂದು ಗಾಯಮುಖದಲ್ಲಿ ಭಕ್ತ ಸಾಗರವೇ ಹರಿದು ಬರುತ್ತದೆ. ಪ್ರತಿಯೊಂದು ದೇವಸ್ಥಾನವು ತನ್ನದೇ ಆದ ಐತಿಹ್ಯ, ಧಾರ್ಮಿಕ ಮಹತ್ವ ಹಾಗೂ ವಿಶೇಷತೆಗಳನ್ನು ಹೊಂದಿದ್ದು, ಅದರಂತೆ ಈ ದೇಗುಲಕ್ಕೂ ಗಾಯಮುಖ ಗುಪ್ತಲಿಂಗೇಶ್ವರ ಹೆಸರು ಬರಲು ಕಾರಣವಿದೆ. ಇಲ್ಲಿ ಗೋಮುಖದಿಂದ ನೀರು ಬರುವ ಕಾರಣ ಗಾಯಮುಖ ಎಂಬುದಾಗಿ, ಜತೆಗೆ ಹಿಂದೆ ಭಕ್ತರು ಹಲವು ಬಂಡೆಗಳ ಮಧ್ಯ ಇದ್ದ ಲಿಂಗದ ದರ್ಶನ ಮಾಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಗುಪ್ತಲಿಂಗೇಶ್ವರ ಎಂಬ ಹೆಸರಿತ್ತು ಎಂಬುದು ಐತಿಹ್ಯ. ಆದರೆ, ಈಗ ಆ ಬಂಡೆಗಳನ್ನು ಸರಿಸಲಾಗಿದ್ದು, ವಿಶಾಲ ಪ್ರದೇಶದಲ್ಲಿ ಶಿವಲಿಂಗ ಪ್ರತಿಷ್ಠಾಪನೆಗೊಂಡಂತಾಗಿದೆ.
ಬೀದರ ನಗರದ ನರಸಿಂಹ ಝರಣಾ, ಗುರುನಾನಕ ಝೀರಾ, ಶುಕ್ಲತೀರ್ಥ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಒಟ್ಟು 9 ನೀರಿನ ಝರಿಗಳಿದ್ದು, ಇದರಲ್ಲಿ ಗಾಯಮುಖದ ಝರಿ ಕೂಡ ಒಂದು. ಬೆಟ್ಟದ ಮೇಲಿಂದ 200 ಅಡಿಯಷ್ಟು ಕೆಳಗೆ ನೀರು ಸದಾ ಜಲಪಾದಂತೆ ಧುಮ್ಮುಕ್ಕಿ ಹರಿಯುತ್ತಿರುತ್ತದೆ. ಇದೇ ನೀರು ದೇವಸ್ಥಾನದ ಗೋಮುಖದಿಂದ ದಿನದ 24 ಗಂಟೆಯೂ ಬರುತ್ತದೆ. ಈ ನೀರು ಶುದ್ಧ, ಅಮೃತದಂತಹ ರುಚಿ ಹೊಂದಿದ್ದು, ಇದನ್ನು ಕುಡಿದರೆ ಸರ್ವ ರೋಗಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಜತೆಗೆ ಕಾಲಕ್ಕೆ ತಕ್ಕಂತೆ ತಂಪು ಮತ್ತು ಬಿಸಿಯಾಗುವುದು ಈ ನೀರಿನ ಇನ್ನೊಂದು ಅದ್ಬುತ ಗುಣ.
ದೇವಸ್ಥಾನದಲ್ಲಿರುವ ಶಿವಲಿಂಗ ಮೊದಲು ಹಿಡಿ ಗಾತ್ರದಷ್ಟಿದ್ದು, ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ ಎನ್ನುವ ಭಕ್ತರ ಪಾಲಿಗೆ ಈ ದೇವಸ್ಥಾನ ಆರಾಧ್ಯ ದೇಗುಲವಾಗಿದೆ. ಅಲಿಯಂಬರದ ಪವಾಡ ಪುರುಷರಾಗಿದ್ದ ಶ್ರೀ ವೀರಭದ್ರಪ್ಪ ಅಪ್ಪರ ಪರಿಶ್ರಮದಿಂದ ಕಾಡಿನ ಮಧ್ಯದಲ್ಲಿದ್ದ ಈ ಗುಪ್ತಲಿಂಗೇಶ್ವರ ಮಂದಿರ ಪ್ರಮುಖ, ಪ್ರಸಿದ್ಧ ಸ್ಥಳವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಶ್ರೀ ವೀರಭದ್ರಪ್ಪನವರ ಮೂರ್ತಿ ಸಹ ಇಲ್ಲಿ ಸ್ಥಾಪನೆಗೊಂಡಿದೆ. ನಂತರ ಖಾನಾಪೂರದ ಲಿಂ. ಸಂಗನಬಸಪ್ಪ ಮಾಣಿಕರಾವ್ ಪಾಟೀಲ ಅವರು ದೇವಸ್ಥಾನ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಗುಪ್ತಲಿಂಗೇಶ್ವರ ಮಂದಿರ ಬೆಟ್ಟದ ಕೆಳಗೆ ಇರುವುದರಿಂದ ತೆರಳಲು ನೂರಕ್ಕಿಂತ ಹೆಚ್ಚು ಮೆಟ್ಟಿಲುಗಳನ್ನು ಇಳಿಯಬೇಕು. ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ತಿಂಗಳ ಕಾಲ ವಿಶೇಷ ಕಾರ್ಯಕ್ರಮ, ಪ್ರವಚನ, ಭಜನೆ ಕಾರ್ಯಕ್ರಮ, ಶಿವರಾತ್ರಿಗೆ ಹಾಗೂ ವಿಜಯದಶಮಿ ಸಪ್ತಾಹ, ಜಾತ್ರೆ ನಡೆಯುತ್ತದೆ. ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ರುದ್ರಾಭಿಷೇಕ ನಡೆಯುತ್ತದೆ. ಭಕ್ತರಿಗಾಗಿ ನಿರಂತರ ದಾಸೋಹ ವ್ಯವಸ್ಥೆಯೂ ಇಲ್ಲಿದೆ. ಹಾಗಾಗಿ, ಈ ಸ್ಥಳ ಸದಾ ಭಕ್ತರಿಂದ ಕೂಡಿರುತ್ತದೆ.
ಪ್ರವಾಸಿ ತಾಣವಾಗಿ ಬೆಳೆದು ನಿಂತಿರುವ ಗಾಯಮುಖ ಗುಪ್ತಲಿಂಗೇಶ್ವರ ದರ್ಶನಕ್ಕೆ ತೆರಳಲು ಸೂಕ್ತ ರಸ್ತೆ ಸೇರಿದಂತೆ ದೇಗುಲದಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕೊರತೆ ಇದೆ. ಗಾಯಮುಖ ಸಮೀಪದಲ್ಲೇ ಶನೇಶ್ವರ ಮಂದಿರವೂ ಇದೆ. ಜಿಲ್ಲೆಯ ಜನಪ್ರತಿನಿ ಧಿಗಳು, ಅಧಿ ಕಾರಿಗಳು ಈ ದೇವಸ್ಥಾನಗಳ ಪ್ರಗತಿಗೆ ಉತ್ತಮ ಯೋಜನೆ ರೂಪಿಸಿ ಪ್ರಮುಖ ಪ್ರವಾಸಿ ತಾಣಗಳನ್ನಾಗಿ ರೂಪಿಸಬೇಕಿದೆ.
ಶ್ರೀ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನವು ತಪಸ್ವಿಗಳ ಪಾಲಿನ ಪುಣ್ಯ ಕ್ಷೇತ್ರವಾಗಿದೆ. ಮಹಾಶಿವರಾತ್ರಿ ಪ್ರಯುಕ್ತ ಫೆ. 23ರ ವರೆಗೆ ಸಪ್ತಾಹ, ಶಿವಲಿಂಗಾರ್ಚನೆ, ಸತ್ಸಂಗ ಹಾಗೂ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಬರುವ ಭಕ್ತಾದಿಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯಬೇಕು.
ಅಮರೇಶ್ವರ ಪಾಟೀಲ, ಅಧ್ಯಕ್ಷರು,
ದೇವಸ್ಥಾನದ ಯುವ ಸಮಿತಿ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.