ನಿಯಮ ಪಾಲಿಸಿ ಅಪಘಾತ ತಡೆಯಿರಿ: ವಿಶ್ವನಾಥ
Team Udayavani, Jan 25, 2020, 5:11 PM IST
ಬೀದರ: ಮೋಟಾರು ವಾಹನ ನಿಯಮ, ಕಾನೂನು ಪಾಲಿಸಿ ಅಪಘಾತಗಳನ್ನು ತಡೆಯಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ. ವಿಶ್ವನಾಥ ಸಲಹೆ ನೀಡಿದರು.
ನಗರದ ಹೊರವಲಯದ ಪಶು ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2020ರ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಾದೇಶಿಕ ಸಾರಿಗೆ ಕಚೇರಿ, ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಟಿ20 ಕ್ರಿಕೆಟ್ ಟೂರ್ನಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಯುವಕರು ನಿರ್ಲಕ್ಷ್ಯದಿಂದ ವಾಹನ ನಡೆಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿದ್ದು, ಘಟನೆಯಲ್ಲಿ ಹಲವರು ಸಾವನ್ನಪ್ಪಿದರೆ ಬಹಳಷ್ಟು ಜನ ಅಂಗವಿಕಲರಾಗುತ್ತಿದ್ದಾರೆ ಎಂದರು.
ಭಾಲ್ಕಿಯ ಮೋಟಾರು ವಾಹನ ನಿರೀಕ್ಷಕ ಮಹ್ಮದ್ ಜಾಫರ್ ಸಾ ದಿಕ್ ಮಾತನಾಡಿ, 2019ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರು ಹೆಚ್ಚಿನವರು ಯುವಕರೇ ಆಗಿದ್ದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಲಘು ಮೋಟಾರು ವಾಹನ ಚಲಾಯಿಸುವವರು ಸೀಟ್ ಬೆಲ್ಟ್ ಉಪಯೋಗಿಸಬೇಕು. ತಲೆ ನಮ್ಮ ದೇಹದ ಅತ್ಯಂತ ಸೂಕ್ಷ್ಮಅಂಗವಾಗಿದ್ದು, ಅಪಘಾತದಲ್ಲಿ ತಲೆಗೆ ಪೆಟ್ಟಾದರೆ ಸಾವು ಖಚಿತ ಎಂದು ಎಚ್ಚರಿಸಿದರು. ಪ್ರಾಣ ಉಳಿಸಲು ನೀವು ವೈದ್ಯರಾಗಬೇಕಿಲ್ಲ, ಆಂಬ್ಯೂಲೆನ್ಸ್‌ಗೆ ದಾರಿ ನೀಡಿದರೆ ಸಾಕು. ಅಪಘಾತ ಸಂಭವಿಸಿದಾಗ ಫೋಟೋ, ವೀಡಿಯೋ ಮಾಡುವ ಬದಲು ಆಂಬ್ಯೂಲೆನ್ಸ್ ಮತ್ತು ಪೊಲೀಸರಿಗೆ ಕರೆ ಮಾಡಿ ಪ್ರಾಣ ಉಳಿಸಬೇಕು. ಯುವ ಬಲದಿಂದಲೇ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.
ಪಶು ಮಹಾವಿದ್ಯಾಲಯದ ಡೀನ್ ದಿಲೀಪಕುಮಾರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಯಶವಂತಕುಮಾರ, ಗುರು ಬಸವ ಮೋಟಾರ್ಸ್ ಮಾಲೀಕ ಕುಪೇಂದ್ರ ಪ್ರಥಮ ನಗದು ಪುರಸ್ಕಾರವನ್ನು ಹಾಗೂ ಎಸ್ ಕೆಎಸ್ ಡ್ರೈವಿಂಗ್ ಶಾಲೆ ಪ್ರಾಂಶುಪಾಲ ಶರೀಫ್ ಖಾನ್ ದ್ವಿತೀಯ ನಗದು ಪುರಸ್ಕಾರ ವಿತರಿಸಿದರು.
ಸಾಯಿ ರಾಜ್ ಚಾಲನಾ ತರಬೇತಿ ಶಾಲೆಯ ರಾಜಪ್ಪ, ಅಂಪೈರ್ ಗಳಾದ ವಿನಾಯಕ ಕುಲಕರ್ಣಿ, ಬಸವರಾಜ ಬಿರಾದಾರ, ಮಹ್ಮದ್ ಮತೀನ್, ಹಾಜಿ, ಇಲಿಯಾಸ್, ಅಯಾಜ್ ಇತರರು ಪಾಲ್ಗೊಂಡಿದ್ದರು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಗಜಾನನ ಕ್ರಿಕೆಟ್ ಕ್ಲಬ್ ಕಾಯಕ ಕ್ರಿಕೆಟ್ ಕ್ಲಬ್ ವಿರುದ್ಧ ಜಯ ಗಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.