ತರಕಾರಿಯಲ್ಲಿ ಭರಪೂರ ಲಾಭ ಕಂಡ ರೈತ
7 ಎಕರೆ ಭೂಮಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ವರ್ಷಕ್ಕೆ 5ರಿಂದ 5.50 ಲಕ್ಷ ಆದಾಯ
Team Udayavani, Feb 23, 2020, 11:32 AM IST
ಬೀದರ: ತರಕಾರಿ ಬೆಳೆಯಿರಿ ಎಂದರೆ ಉಳುಮೆ ಮಾಡಬೇಕು, ನಾಟಿ ಮಾಡಬೇಕು, ಕಾಯಿ ಕಡಿಯಬೇಕು, ಮಾರುಕಟ್ಟೆಗೆ ಕಳಿಸಬೇಕು, ಬಾಗವಾನರಿಗೆ ಅಡ್ಡಾದಿಡ್ಡಿ ದರಕ್ಕೆ ತರಕಾರಿ ಕೊಟ್ಟು ಕೈ ಜಾಡಿಸಿಕೊಂಡು ಬರಬೇಕು. ಗಾಳಿಗಿ ಗುದ್ದಿ ಮೈ ನೋಯಿಸಿಕೊಂಡಂತೆ ಎಂದು ಹೇಳುವ ರೈತರೆ ಈಗಿನ ಕಾಲದಲ್ಲಿ ಹೆಚ್ಚು. ಆದರೆ, ಇವುಗಳನ್ನೆಲ್ಲ ನಿಭಾಯಿಸಿಯೂ ತರಹೇವಾರಿ ತರಕಾರಿ ಬೆಳೆದು ಇನ್ನೊಬ್ಬ ವೃದ್ಧ ರೈತ ಸೈ ಎನ್ನಿಸಿಕೊಂಡಿದ್ದಾರೆ.
ಹುಮನಾಬಾದ ತಾಲೂಕಿನ ಉಡಬಾಳ ಗ್ರಾಮದ ರೈತ ನಾರಾಯಣರಾವ್ ಭಂಗಿ ಐದು ವರ್ಷಗಳಿಂದ ಒಂದು ಎಕರೆಯಿಂದ ತರಕಾರಿ ಬೆಳೆಯಲು ಪ್ರಾರಂಭಿಸಿ ಇಂದು ಏಳು ಎಕರೆ ವರೆಗೆ ಬೆಳೆ ಬೆಳೆಯುತ್ತಿದ್ದಾರೆ. ತರಕಾರಿಗೆ ಹೇಳಿ ಮಾಡಿಸಿದಂಥ ಕಪ್ಪು ಮಣ್ಣಿನ ಜಮೀನು ಇದ್ದು, ಬಾವಿ ಮೂಲಕ ನೀರಾವರಿ ಮಾಡುತ್ತಿದ್ದಾರೆ.
ತರಕಾರಿ ಬೆಳೆಯುವ ಮೊದಲು ಕಬ್ಬು, ಜೋಳ, ಕಡಲೆಯಂಥ ಕೃಷಿ ಬೆಳೆಗಳನ್ನೇ ಬೆಳೆಯುತ್ತಿದ್ದೆ. ಖರ್ಚು ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಹೀಗಾದರೆ ಕುಟುಂಬ ನಿಭಾಯಿಸುವುದು, ಮಕ್ಕಳ ವಿದ್ಯಾಭ್ಯಾಸ, ಮಕ್ಕಳಿಗೆ ನೌಕರಿ ಕೊಡಿಸಲು ಆಗುವುದಿಲ್ಲ. ಇನ್ನೂ ಹೆಚ್ಚಿನ ಹಣ ಸಂಪಾದನೆ ಮಾಡಬೇಕೆಂಬ ಛಲದಿಂದ ಊರೂರು ಸುತ್ತಿ ತರ ತರಹದ ಬೆಳೆಗಳನ್ನು ಬೆಳೆದ ರೈತರ ತೋಟಗಳಿಗೆ ಹೋಗಿ ನೋಡಿ ಚರ್ಚಿಸಿ, ಲೆಕ್ಕ ಹಾಕಿ ನೋಡಿದಾಗ ತರಕಾರಿ ಬೆಳೆಯುವುದೇ ಸೂಕ್ತ ಎಂದು ನಿರ್ಧರಿಸಿದೆ ಎನ್ನುತ್ತಾರೆ ಭಂಗಿ.
ಚಿಟಗುಪ್ಪಾ, ಮನ್ನಾಏಖೆಳ್ಳಿ, ಕಲಬುರಗಿ, ಹೈದ್ರಾಬಾದ್‌ಗೆ ತರಕಾರಿ ಕಳಿಸಿ ಮಾರಾಟ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ
7 ಎಕರೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಹನಿ ನೀರಾವರಿಗೆ ಮತ್ತು ಮಲ್ಚಿಂಗ್ ಗೆ ಸಹಾಯಧನ ಪಡೆದಿದ್ದೇನೆ. ಬೆಳೆಗೆ ಮಲ್ಚಿಂ ಗ್, ಡ್ರಿಪ್ ಮಾಡಿಸಿದ್ದರಿಂದ ಖರ್ಚು ಕಡಿಮೆಯಾಗಿ ಬಹು ಬೆಳೆ ಪದ್ಧತಿಯಿಂದ ಉತ್ಪನ್ನ ಜಾಸ್ತಿಯಾಗುತ್ತಿದೆ ಎನ್ನುತ್ತಾರೆ ಅವರು. ಹೆಚ್ಚಿನ ಮಾಹಿತಿಗೆ ನಾರಾಯಣರಾವ್ ಭಂಗಿ ಮೊ: 9448584932ಗೆ ಸಂಪರ್ಕಿಸಬಹುದು.
5 ವರ್ಷದಿಂದ ಕಲ್ಲಂಗಡಿ, ಗೋಬಿ, ಟೊಮ್ಯಾಟೊ, ಬದನೆ, ಹೀರೆಕಾಯಿ, ಹಾಗಲ ತರಕಾರಿ ಬೆಳೆಯುತ್ತಿದ್ದೇನೆ. ಇದರಲ್ಲೇ ನನಗೆ ಲಾಭ ಎನಿಸಿದೆ. ದಿನಕ್ಕೆ 1500ರಿಂದ 2000 ರೂ. ವರ್ಷಕ್ಕೆ 5 ರಿಂದ 5.50 ಲಕ್ಷಗಳ ವರೆಗೆ ಆದಾಯ ಬರುತ್ತಿದೆ. ಖರ್ಚು ವರ್ಷಕ್ಕೆ 2-3 ಲಕ್ಷ ರೂಪಾಯಿ ಬರುತ್ತಿದೆ. ನೌಕರದಾರರಿಗೆ ವೇತನ ಬಂದಂತೆ ನನಗೂ ಕೃಷಿಯಿಂದ ವೇತನ ಬರುತ್ತಿದೆ. ಇದಕ್ಕೆಲ್ಲ ಅಧಿಕಾರಿಗಳು ಮತ್ತು ಪ್ರಗತಿಪರ ರೈತರರೇ ನನಗೆ ಪ್ರೇರಣೆ. “ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಆಗುತ್ತದೆ.
ನಾರಾಯಣರಾವ್ ಭಂಗಿ, ರೈತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.