ಭಾಲ್ಕಿ ಕ್ಷೇತ್ರದಲ್ಲಿ ಖಂಡ್ರೆ ಸಹೋದರರ ಕಾಳಗ 


Team Udayavani, Apr 26, 2018, 6:30 AM IST

Mr.-DK-Sidram.jpg

ಖಂಡ್ರೆದ್ವಯರ ಕಾಳಗದಿಂದ ರಾಜ್ಯದ ಗಮನ ಸೆಳೆಯುವ ಬೀದರ್‌ನ ಭಾಲ್ಕಿ ಕ್ಷೇತ್ರ ಈ ಬಾರಿ ಪಕ್ಷಾಂತರ ಪರ್ವದಿಂದ ಚರ್ಚೆಯ ಚಾವಡಿಯಲ್ಲಿದೆ.

ಐದು ದಶಕಗಳ ಕಾಲ ಒಂದೇ ಕುಟುಂಬ ಹಿಡಿತ ಸಾಧಿ ಸುತ್ತ ಬಂದಿರುವ ಜಿದ್ದಾಜಿದ್ದಿನ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ದಟ್ಟವಾಗಿದೆ. ಹೀಗಾಗಿ, ರಾಜ್ಯದ ಚಿತ್ತ ಈ ಕ್ಷೇತ್ರದತ್ತ ನೆಟ್ಟಿದೆ. ಮೂರು ದಶಕಗಳಿಂದ ಕೇವಲ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಕಾದಾಟಕ್ಕೆ ಸಾಕ್ಷಿಯಾಗುತ್ತಿದ್ದ ಭಾಲ್ಕಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜೆಡಿಎಸ್‌ ಪ್ರಬಲ ಪೈಪೋಟಿ ನೀಡುತ್ತಿದೆ. ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಬಿಜೆಪಿಯಿಂದ ಬಿಎಸ್‌ವೈ ಆಪ್ತ ಡಿ.ಕೆ.ಸಿದ್ರಾಮ್‌ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಟಿಕೆಟ್‌ ಕೈತಪ್ಪಿರುವುದರಿಂದ ಬಂಡಾಯ ಎದ್ದಿರುವ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ತ್ರಿಕೋನ ಸ್ಪರ್ಧೆಗೆ ರಣಾಂಗಣ ಸಿದ್ಧಗೊಂಡಿದೆ.

ಭಾಲ್ಕಿ ಕ್ಷೇತ್ರ ಮೈಸೂರು ಪ್ರಾಂತ್ಯಕ್ಕೆ ಒಳಪಟ್ಟ ನಂತರ 1957ರಿಂದ 2008ರವರೆಗೆ 12 ಚುನಾವಣೆ ಗಳನ್ನು ಕಂಡಿದ್ದು, ಒಂಭತ್ತರಲ್ಲಿ ಖಂಡ್ರೆ ಮನೆತನವೇ ಅಧಿಕಾರ ಹಿಡಿದಿಟ್ಟುಕೊಂಡಿರುವುದು ಗಮನಾರ್ಹ. ಆದರೆ,ಯಾರೊಬ್ಬರು ಹ್ಯಾಟ್ರಿಕ್‌ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಭದ್ರಕೋಟೆಯನ್ನಾಗಿಸಿದ ಹಿರಿಮೆ ಮುತ್ಸದಿಟಛಿ ರಾಜಕಾರಣಿ ಭೀಮಣ್ಣ ಖಂಡ್ರೆಗೆ ಸಲ್ಲುತ್ತದೆ.

ಬಿಜೆಪಿಗೆ ಕ್ಷೇತ್ರದಲ್ಲಿ ನೆಲೆಯೂರಲು ಸಮಯ ಹಿಡಿಯಿತು. 1999ರಲ್ಲಿ ಕಾಂಗ್ರೆಸ್‌ ಕೋಟೆ ಒಡೆದ ಬಿಜೆಪಿ ಸತತ 2 ಬಾರಿ ಶಾಸಕ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ನಂತರ ಮತ್ತೆ ಕಾಂಗ್ರೆಸ್‌ ಹಿಡಿತ ಸಾಧಿಸಿತು. ಲಿಂಗಾಯತ ಮತ್ತು ಮರಾಠಾ ಸಮುದಾಯದ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಈವರೆಗೆ ಗೆದ್ದಿರುವ ಶಾಸಕರೆಲ್ಲರೂ ಲಿಂಗಾಯತರೇ. ಚುನಾವಣಾ ಅಖಾಡದಲ್ಲಿರುವ ಪ್ರಬಲ ಮೂವರು ಅಭ್ಯರ್ಥಿಗಳೆಲ್ಲರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಚಿವ ಈಶ್ವರ ಖಂಡ್ರೆ ಸ್ವತಂತ್ರ ಧರ್ಮದ ವಿರುದ್ಧವಾಗಿದ್ದರೆ, ಬಿಜೆಪಿಯ ಸಿದ್ರಾಮ್‌, ಜೆಡಿಎಸ್‌ನ ಪ್ರಕಾಶ ಅವರು ಹೋರಾಟದಲ್ಲಿ ವೈಯಕ್ತಿಕವಾಗಿ ಬೆಂಬಲ ನೀಡುತ್ತ ಬಂದವರು. ಆದರೆ, ಅವರು ಪ್ರತಿನಿಧಿ ಸುವ ಪಕ್ಷಗಳು ಮಾತ್ರ ಲಿಂಗಾಯತರ ಬೇಡಿಕೆ ಪರವಾಗಿಲ್ಲ. ಹೀಗಾಗಿ, ಲಿಂಗಾಯತರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆಂಬ ಕುತೂಹಲವೂ ಇದೆ.

ಜಾತಿವಾರು ಲೆಕ್ಕಾಚಾರ
ಕ್ಷೇತ್ರದಲ್ಲಿ ಲಿಂಗಾಯತರು 65 ಸಾವಿರ ಇದ್ದರೆ,ಮರಾಠಾ ಸಮುದಾಯ 50 ಸಾವಿರದಷ್ಟಿದ್ದಾರೆ.ಮುಸ್ಲಿಂ, ದಲಿತರು, ಹಿಂದುಳಿದ ವರ್ಗದವರು ನಂತರದ ಸ್ಥಾನದಲ್ಲಿದ್ದಾರೆ

ನಿರ್ಣಾಯಕ ಅಂಶವೇನು?
ಈಶ್ವರ ಖಂಡ್ರೆ ಸಚಿವರಾದ ಮೇಲೆ ಅಭಿವೃದ್ಧಿ ಕೆಲಸ ಆಗಿರುವುದು ಕಾಂಗ್ರೆಸ್‌ಗೆ ಲಾಭ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಿಜೆಪಿ ತೊರೆದು ತೆನೆ ಹೊತ್ತಿರುವುದರಿಂದ ಕಮಲ ಪಾಳೆಯದ ಕೆಲ ನಾಯಕರು ಅವರ ಹಿಂದೆ ಬಂದಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಟಿಕೆಟ್‌ ವಿಷಯದಲ್ಲಿ ಕಡೆಗಣಿಸಿರುವುದರಿಂದ ಮರಾಠಾ ಸಮಾಜ ಬಿಜೆಪಿಯ ವಿರುದ್ಧ ಮುನಿಸಿಕೊಂಡಿದೆ. ಇನ್ನೊಂದೆಡೆ ಸಮಾಜದ ಹಿರಿಯ ಮುಖಂಡ ಎಂ.ಜಿ.ಮುಳೆ ಜನತಾದಳಕ್ಕೆ ಸೇರಿದ್ದಾರೆ. ಇದೆಲ್ಲದರ ಲಾಭ ಜೆಡಿಎಸ್‌ಗೆ ಆಗುವ ಸಾಧ್ಯತೆಯೂ ಇದೆ.

ಭಾಲ್ಕಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ತಂದು ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಯೋಜನೆಗಳ ಜಾರಿ ಮೂಲಕ ಜನಪರ ಆಡಳಿತ ನೀಡಿದೆ.
 – ಈಶ್ವರ ಖಂಡ್ರೆ, ಕಾಂಗ್ರೆಸ್‌

ಕ್ಷೇತ್ರದಲ್ಲಿ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಅನ್ಯಾಯ, ಭ್ರಷ್ಟಾಚಾರ ಹೆಚ್ಚಿದೆ. ಇದರ ವಿರುದ್ಧದ ಹೋರಾಟವೇ ನನ್ನ ಸ್ಪರ್ಧೆಗೆ ಕಾರಣ. ನನಗೆ ಅಧಿಕಾರ ಮುಖ್ಯವಲ್ಲ. ಹಣ, ಅಧಿಕಾರದ ಬಲದಿಂದ ಈಗ ಗೆಲುವು ಸಾಧಿಸಲು ಸಾಧ್ಯವಿಲ್ಲ. ಬದಲಾವಣೆ ಆಗುವುದು ನಿಶ್ಚಿತವಾಗಿದೆ.
– ಡಿ.ಕೆ ಸಿದ್ರಾಮ್‌, ಬಿಜೆಪಿ

ಭಾಲ್ಕಿ ಕ್ಷೇತ್ರದಲ್ಲಿ ದಶಕಗಳ ಕಾಲ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನನಗೆ ಟಿಕೆಟ್‌ ತಪ್ಪಿಸುವ ಮೂಲಕ ಬೆನ್ನಿಗೆ ಚೂರಿ ಹಾಕಲಾಯಿತು. ನನ್ನ ಬೆಂಬಲಿಗರ ಒತ್ತಾಯದ ಮೇರೆಗೆ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದೇನೆ. ಜನರು ನನಗಾದ ಅನ್ಯಾಯಕ್ಕೆ ಸೂಕ್ತ ಸಮಯದಲ್ಲಿ ಉತ್ತರಿಸಲಿದ್ದಾರೆ.
– ಪ್ರಕಾಶ ಖಂಡ್ರೆ, ಜೆಡಿಎಸ್‌

– ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.