ಅಂಧತ್ವ ಮುಕ್ತ ಕ್ಷೇತ್ರ ನಿರ್ಮಾಣ ಗುರಿ
96 ಹಳ್ಳಿಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿ ಈವರೆಗೆ 1.04 ಲಕ್ಷ ಜನರಿಗೆ ನೇತ್ರ ತಪಾಸಣೆ
Team Udayavani, Feb 1, 2020, 1:42 PM IST
ಬೀದರ: ಬೀದರ ದಕ್ಷಿಣ ಕ್ಷೇತ್ರವನ್ನು ಅಂಧತ್ವ ಮುಕ್ತ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ ಹೇಳಿದರು. ಸಾತೊಳಿ ಗ್ರಾಮದಲ್ಲಿ ಶುಕ್ರವಾರ ನಯೋನಿಕ್ ಎಸ್ಸಿಲಾರ್ ನೇತ್ರ ಅನುಸೇವಾ ಸಂಸ್ಥೆ ವತಿಯಿಂದ “ನಮ್ಮ ಮನೆ ಅನಗತ್ಯ ಅಂಧತ್ವ ಮುಕ್ತ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ 96 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ದೇಶದಲ್ಲೆ ಮೊದಲ ಬಾರಿಗೆ ಇಂಥದೊಂದು ಉತ್ತಮ ಕಾರ್ಯ ನಡೆಯುತ್ತಿದೆ ಎಂದರು.
ಕಳೆದ ವರ್ಷ ಮೊದಲ ಬಾರಿಗೆ ಕಮಠಾಣಾದ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. ಒಟ್ಟು 2.50 ಲಕ್ಷ ಫಲಾನುಭವಿಗಳ ಪೈಕಿ ಈವರೆಗೆ 1.04 ಲಕ್ಷ ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 8 ಸಾವಿರ ದೃಷ್ಟಿಹೀನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಒಟ್ಟು 60 ಸಾವಿರ ಜನರಿಗೆ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು. ನೇತ್ರ ಹೀನತೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿ ಆತನ ಇಡೀ ಕುಟುಂಬ ಸಮಸ್ಯೆಗೆ ಸಿಲುಕುತ್ತದೆ. ಅದರಿಂದ ಖರ್ಚು, ವೆಚ್ಚಗಳು ಸೇರಿದಂತೆ ವಿವಿಧ ಆರೋಗ್ಯ ತೊಂದರೆ ಹೆಚ್ಚುತ್ತವೆ. ಇದಕ್ಕೆ ಪರಿಹಾರ ಕಲ್ಪಿಸಲು ಕ್ಷೇತ್ರದಲ್ಲಿ ವಿಶೇಷ ಯೋಜನೆ ಜಾರಿಗೆ ತಂದಿದ್ದು, ಇದರ ಲಾಭ ಪಡೆಯಬೇಕು. ಆರೋಗ್ಯ ಸಹಾಯಕರು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಸಂಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಯೋನಿಕ್ ಸಂಸ್ಥೆ ನಿರ್ದೇಶಕ ಪ್ರಶಾಂತ ಮಾತನಾಡಿ, ಬೀದರ ದಕ್ಷಿಣ ಮಾದರಿ ಕ್ಷೇತ್ರವನ್ನಾಗಿ ತೆಗೆದುಕೊಂಡು ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಿಸುವ ಗುರಿ ಇದೆ. ರಾಜ್ಯದಲ್ಲಿ ಒಟ್ಟು 8 ಲಕ್ಷ ಜನರು ಅಂಧತ್ವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ. 100ರಷ್ಟು ದೃಷ್ಟಿ ಹೀನರಲ್ಲಿ ಶೇ. 66ರಷ್ಟು ಜನರಿಗೆ ಪೊರೆಯ ಸಮಸ್ಯೆಯಿದ್ದರೆ, ಶೇ. 19ರಷ್ಟು ದೃಷ್ಟಿ ಹೀನರು ಕನ್ನಡಕ ಉಪಯೋಗ ಮಾಡದ ಕಾರಣ ಅಂಧತ್ವಕ್ಕೊಳಗಾಗುವರು ಎಂದು ಹೇಳಿದರು. ಜಿಪಂ ಸದಸ್ಯ ಬಾಬುರಾವ್ ಮಲ್ಕಾಪುರೆ ಮಾತನಾಡಿದರು. ನಿವೃತ್ತ ಡಿಎಚ್‌ಒ ಮಾರ್ತಂಡರಾವ್ ಖಾಶೆಂಪೂರಕರ್ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ| ರಾಜಶೇಖರ ಪಾಟೀಲ, ಆರೋಗ್ಯ ಅ ಧಿಕಾರಿ ಡಾ| ನಿವೇದಿತಾ ಸೇರಿದಂತೆ
ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.