ಉಳಿತಾಯ ಅನುದಾನ ಕ್ರಿಯಾಯೋಜನೆಗೆ ಅಸ್ತು
ನಗರದ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.
Team Udayavani, Feb 14, 2021, 4:49 PM IST
ಬೀದರ: ಬಾಕಿ ಉಳಿತಾಯದ ಅನುದಾನ 6.52 ಕೋಟಿ ರೂ.ದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಬಳಸಿಕೊಳ್ಳಲು ನಗರದ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯು ಅನುಮೋದನೆ ನೀಡಿತು.
ಸಭೆಯಲ್ಲಿ ಇಲಾಖೆಯ ಉಳಿತಾಯ ಅನುದಾನದ ಬಗ್ಗೆ ಚರ್ಚೆ ನಡೆಯಿತು. 13ನೇ ಹಣಕಾಸಿನ ಯೋಜನೆಯಿಂದ 71.39 ಲಕ್ಷ ರೂ., ಅಕ್ಷರ ದಾಸೋಹದಿಂದ 43 ಲಕ್ಷ ರೂ., ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಇರುವ ಅನುದಾನ 2.86 ಕೋಟಿ ರೂ., ಎಂಐದಿಂದ 1.39 ಕೋಟಿ
ರೂ, ಬಿಆರ್ ಜಿಎಫ್‌ನಿಂದ 33.65 ಲಕ್ಷ ರೂ., ಅಕ್ಷರ ದಾಸೋಹದಿಂದ 43 ಲಕ್ಷ ರೂ., ಕೆಆರ್‌ಐಡಿಎಲ್ ಮತ್ತು ಪಿಆರ್‌ಐನಿಂದ 64.52 ಲಕ್ಷ ರೂ., ಔರಾದ ತಾಲೂಕಿನಲ್ಲಿ ಶಾಲೆಗೆ ರಿಪೇರಿ ಕಾಮಗಾರಿಯಿಂದ ವಾಪಾಸಾಗಿದ್ದು, 13 ಲಕ್ಷ ರೂ. ಸೇರಿ ಒಟ್ಟು 6.52 ಕೋಟಿ ರೂ. ಉಳಿತಾಯದ ಅನುದಾನವನ್ನು ಜಿಪಂ ಸದಸ್ಯರ ಕ್ಷೇತ್ರಗಳಿಗೆ ಹಂಚಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
50 ಕೋಟಿ ಬೆಳೆಹಾನಿ ಪರಿಹಾರ: ಜಿಲ್ಲೆಯಲ್ಲಿ ಈ ಹಿಂದೆ ಅತಿವೃಷ್ಟಿಯಿಂದಾಗಿ ಅಂದಾಜು 2.47 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. 1.03 ಲಕ್ಷ ರೈತ ಫಲಾನುಭವಿಗಳಿಗೆ ಅಂದಾಜು 50 ಕೋಟಿ ರೂ. ನಷ್ಟು ಪರಿಹಾರ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ
ಈಗಾಗಲೇ ಜಮೆಯಾಗಿದೆ. ಕಂದಾಯ, ತೋಟಗಾರಿಕಾ ಮತ್ತು ಇನ್ನಿತರ ಇಲಾಖೆಗಳ ಜಂಟಿ ಸಮೀಕ್ಷೆ ತರುವಾಯ ಪರಿಹಾರ ಸಾಪ್ಟವೇರ್‌ನಲ್ಲಿ ಎಂಟ್ರಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 1.02 ಲಕ್ಷ ರೈತರಿಗೆ ಪರಿಹಾರ ಮೊತ್ತ ಜಮೆ ಆಗುವುದು ಬಾಕಿಯಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್ ಅವರು ಸಭೆಗೆ ಮಾಹಿತಿ ನೀಡಿದರು.
93 ಕೋಟಿ ರೂ. ಬರಬೇಕಿತ್ತು: ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಜಿಲ್ಲೆಗೆ ಅಂದಾಜು 93 ಕೋಟಿ ರೂ. ಬೆಳೆ ಪರಿಹಾರ ಮೊತ್ತ ಬರಬೇಕಿತ್ತು. ರೈತರಿಗೆ ಅನ್ಯಾಯವಾಗದ ಹಾಗೆ ಪರಿಹಾರ ಮೊತ್ತವನ್ನು ನೀಡಬೇಕು
ಎಂದು ಜಿಪಂ ಸದಸ್ಯ ಡಾ| ಪ್ರಕಾಶ ಪಾಟೀಲ ಸಭೆಗೆ ತಿಳಿಸಿದರು. ಕೃಷಿ ಇಲಾಖೆಗೆ 75.89 ಕೋಟಿ ರೂ. ಅನುದಾನ ನಿಗದಿಯಾಗಿತ್ತು. ಈ ಪೈಕಿ
67.83 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 58 ಕೋಟಿ ರೂ. ಖರ್ಚಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.