Bidar: ಅ.28ರಂದು 5ನೇ ವಚನ ಸಾಹಿತ್ಯ ಸಮ್ಮೇಳನ
Team Udayavani, Oct 25, 2024, 11:09 AM IST
ಬೀದರ್: ಕರ್ನಾಟಕ ವಚನ ಸಾಹಿತ್ಯ ಪರಿಷತ್ ವತಿಯಿಂದ ಅ. 28 ರಂದು ನಗರದ ಜಿಲ್ಲಾ ರಂಗ ಮಂದಿರದಲ್ಲಿ ರಾಜ್ಯ ಮಟ್ಟದ 5 ನೇ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷೆ ಸುನೀತಾ ದಾಡಗೆ ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ಸಮ್ಮೇಳನಾಧ್ಯಕ್ಷತೆಯಲ್ಲಿ ಬೆಳಗ್ಗೆ 10.30ಕ್ಕೆ ಜರುಗುವ ಸಮ್ಮೇಳನವನ್ನು ವಿಜಯಪುರದ ಹಿರಿಯ ಸಾಹಿತಿ ಡಾ.ಜೆ.ಎಸ್ ಪಾಟೀಲ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಗವಹಿಸುವರು. ಬಸವಕಲ್ಯಾಣದ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಇಳಕಲ್ ನ ಶ್ರೀ ಗುರುಮಹಾಂತ ಸ್ವಾಮಿಗಳು ನೇತೃತ್ವ ಹುಲಸೂರಿನ, ಡಾ. ಶಿವಾನಂದ ಸ್ವಾಮೀಜಿ ಮತ್ತುಡಾ. ಸಿದ್ಧರಾಮ ಶರಣು ಬೆಲ್ದಾಳೆ ಸಮ್ಮುಖ ವಹಿಸುವರು. ಪರಿಷತ್ ರಾಜ್ಯಾಧ್ಯಕ್ಷ ಎಂವಿ ತ್ಯಾಗರಾಜ್ ಆಶಯ ನುಡಿ ನುಡಿಯುವರು, ಜಿಲ್ಲೆಯ ಸಂಸದ, ಶಾಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಂತರ ವಿವಿಧ ಚಿಂತನ ಗೋಷ್ಠಿ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.