Bidar: ಲಿಂಗಾಯತ ಮಹಾಮಠದಿಂದ ಬಸವ ಪಂಚಮಿ; ಮಕ್ಕಳಿಗೆ ಹಾಲು, ಪ್ರಸಾದ ವಿತರಣೆ
Team Udayavani, Aug 9, 2024, 4:30 PM IST
ಬೀದರ್: ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಚಿಕ್ಕಪೇಟೆಯ ಡಾನ್ ಬೊಸ್ಕೊ ಶಾಲೆಯಲ್ಲಿ ಶುಕ್ರವಾರ ಮಕ್ಕಳಿಗೆ ಹಾಲು, ಹಣ್ಣು ಹಾಗೂ ಪ್ರಸಾದ ವಿತರಿಸುವ ಮೂಲಕ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹಾಗೂ ಫಾದರ್ ಪ್ರವೀಣ್ ಅವರು ಮಕ್ಕಳಿಗೆ ಹಾಲು ಹಾಗೂ ಪ್ರಸಾದ ವಿತರಿಸಿದರು.
ಸಹೋದರತೆ, ಸಮಾನತೆ, ಸ್ವತಂತ್ರತೆಯ ಮಾನವೀಯ ಮೌಲ್ಯಗಳನ್ನು ಸಾರಿದ ಬಸವಣ್ಣನವರು ಕಾಯ-ಜೀವದ ಹೊಲಿಗೆ ಬಿಚ್ಚಿ ಪರಮಾತ್ಮನಲ್ಲಿ ಒಂದಾದ ದಿನವೇ ಶ್ರಾವಣ ಶುದ್ಧ ಪಂಚಮಿ. ಈ ದಿನವನ್ನು ಬಸವಭಕ್ತರು ಬಸವ ಪಂಚಮಿಯೆಂದು ಆಚರಿಸುತ್ತಾರೆ ಎಂದು ಉದ್ದೇಶಿಸಿ ಮಾತನಾಡಿದ ಪ್ರಭುದೇವ ಸ್ವಾಮೀಜಿ ನುಡಿದರು.
ಬಸವಣ್ಣನವರು ವಿಶ್ವದ ಮೊದಲ ಸಂಸತ್ತು ಎನಿಸಿದ ಅನುಭವ ಮಂಟಪವನ್ನು ಸ್ಥಾಪಿಸಿ ಜಾತಿ, ವರ್ಗ, ವರ್ಣ, ಲಿಂಗಭೇದಗಳಿಲ್ಲದೆ ಸರ್ವರಿಗೂ ಸಮಾನವಾಗಿ ಚರ್ಚಿಸಲು ಅನುವು ಮಾಡಿಕೊಟ್ಟರು ಎಂದು ಹೇಳಿದರು.
ಮೂಢನಂಬಿಕೆ, ಮೂಢ ಆಚರಣೆಗಳನ್ನು ವಿರೋಧಿಸಿ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಪರಿಶ್ರಮಿದ್ದರು ಎಂದು ತಿಳಿಸಿದರು.
ಇನ್ನು ಮುಂದೆ ಪ್ರತಿ ವರ್ಷ ಲಿಂಗಾಯತ ಮಹಾಮಠದಿಂದ ಬಸವ ಪಂಚಮಿಯನ್ನು ವಿಶ್ವ ಬಂಧುತ್ವದ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದರು.
ಏಸು, ಬಸವಣ್ಣ ಮೊದಲಾದವರು ಸಮಾಜವನ್ನು ಸರ್ವಾಂಗ ಸುಂದರಗೊಳಿಸಲು ಬೋಧಿಸಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಫಾದರ್ ಪ್ರವೀಣ್ ತಿಳಿಸಿದರು.
ವಚನಗಳಲ್ಲಿ ಬದುಕಿನ ರೀತಿ, ನೀತಿಗಳು ಹಾಸು ಹೊಕ್ಕಿದ್ದು, ಮಕ್ಕಳು ವಚನಗಳನ್ನು ಓದಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರಮೇಶ ಮಠಪತಿ ಹೇಳಿದರು.
ಬಸವಣ್ಣನವರ ನೂರು ವಚನಗಳನ್ನು ಕಂಠಪಾಠ ಮಾಡಿ ಹೇಳಿದವರಿಗೆ ಲಿಂಗಾಯತ ಮಹಾಮಠದಿಂದ ರೂ.1 ಸಾವಿರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಫಾದರ್ ಮ್ಯಾಥ್ಯೂ ಸಮ್ಮುಖ ವಹಿಸಿದ್ದರು. ಬಸವಣ್ಣನವರ ಲಿಂಗೈಕ್ಯ ದಿನವು ಕನ್ನಡಿಗರೆಲ್ಲರಿಗೂ ಪವಿತ್ರ ದಿನ ಎಂದು ಕೈಗಾರಿಕಾ ಇಲಾಖೆಯ ರಾಜಕುಮಾರ ಪಾಟೀಲ್ ಹೇಳಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಶಿವಕುಮಾರ ಪಾಖಾಲ್ ‘ಕಳಬೇಡ, ಕೊಲಬೇಡ…’ ವಚನವನ್ನು ಸಾಮೂಹಿಕವಾಗಿ ಓದಿಸಿದರು.
ಪರುಷ ಕಟ್ಟೆಯ ಚನ್ನಬಸವಣ್ಣ ವಚನ ಪ್ರಾರ್ಥನೆಗೈದರು. ಜಯಶ್ರೀ ಗಾದಗೆ ಗುರು ಪೂಜೆ ನೆರವೇರಿಸಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಕಾರ್ಯದರ್ಶಿ ಪ್ರಭು ತಟಪಟ್ಟಿ, ಪ್ರಮುಖರಾದ ಕಾಶಿನಾಥ ಪಾಟೀಲ್, ಅಶೋಕ್ ಎಲಿ, ಚಂದ್ರಶೇಖರ ಗಾದಗೆ, ಲಿಂಗಾನಂದ ಹಂಗರಗಿ ಇದ್ದರು. ಪ್ರಕಾಶ ಮಲ್ಲಾಸುರೆ ಭಕ್ತಿ ದಾಸೋಹಗೈದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.