Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಲಕ್ಷ ರೂ. ಲಂಚ ಸ್ವೀಕಾರ!!!
Team Udayavani, Nov 22, 2024, 6:59 PM IST
ಬೀದರ್ : ಎನ್ಎ ನಿವೇಶನಗಳ ಮಾರಾಟದ ಅನುಮೋದನೆಗಾಗಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಲಕ್ಷ ರೂ. ಲಂಚ ಸ್ವೀಕಾರ ಹಿನ್ನಲೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (BUDA) ಆಯಕ್ತ ಮತ್ತು ಯೋಜನಾ ಸದಸ್ಯ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ(ನ22) ಇಲ್ಲಿನ ಪ್ರತಾಪ ನಗರದಲ್ಲಿ ನಡೆದಿದೆ.
ನಗರದ ಗುಂಪಾ ನಿವಾಸಿಯಾಗಿರುವ ಸತೀಶ ನೌಬಾದೆ ಎಂಬುವರು ಚಿಕ್ಕಪೇಟ್ ಗ್ರಾಮದಲ್ಲಿ 2.11 ಎಕರೆ ಭೂಮಿಗೆ 2022 ರಲ್ಲಿ ವಸತಿ ಉದ್ದೇಶಕ್ಕಾಗಿ ವಿನ್ಯಾಸ ಮಂಜೂರಾತಿ ಆದೇಶ ಪಡೆದುಕೊಂಡಿದ್ದು, ನಿಯಮದಂತೆ ಆರಂಭಿಕ ಹಂತದಲ್ಲಿ ಶೇ.40 ರಷ್ಟು ಅನುಪಾತದ ನಿವೇಶನಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ ಶೇ. 60ರಷ್ಟು ನಿವೇಶನಗಳ ಬಿಡುಗಡೆಗಾಗಿ ಬುಡಾ ಆಯುಕ್ತ ಶ್ರೀಕಾಂತ ಚಿಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ ರೆಡ್ಡಿ50 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದರಿಂದ ನೊಂದಿದ್ದ ಸತೀಶ್ ನ. 22 ರಂದು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸತೀಶ ಅವರು ಶುಕ್ರವಾರ ಮುಂಗಡವಾಗಿ 10 ಲಕ್ಷ ರೂ. ನೀಡಲು ಬುಡಾ ಕಚೇರಿಗೆ ಹೋದಾಗ ಆಯುಕ್ತರು, ತಮ್ಮ ಪರಿಚಯದ ಸಿದ್ದೇಶ್ವರ ಎಂಬುವರ ಕೈಯಲ್ಲಿ ಕೊಡಲು ತಿಳಿಸಿದ್ದಾರೆ. ಅದರಂತೆ ಸಿದ್ದೇಶ್ವರ ಹಣ ಪಡೆಯುವಾಗ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಸಿಪಿಐಗಳಾದ ಸಂತೋಷ ರಾಠೋಡ, ಬಾಬಾ ಸಾಹೇಬ್ ಪಾಟೀಲ, ಅರ್ಜುನಪ್ಪ, ಸಿಬ್ಬಂದಿಗಳಾದ ವಿಷ್ಣುರೆಡ್ಡಿ, ಶ್ರೀಕಾಂತ, ಶಾಂತಲಿಂಗಪ್ಪ, ವಿಜಯಶೇಖರ, ಅಡೆಪ್ಪ, ಕಿಶೋರಕುಮಾರ, ಭರತ, ಶುಕ್ಲೋಧನ ಮತ್ತು ಸುವರ್ಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.