ಕೈಗಾರಿಕೆ ಪುನಶ್ಚೇತನಕ್ಕೆ 3 ಲಕ್ಷ ಕೋಟಿ ಪ್ಯಾಕೇಜ್
ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೋನ್ ಕುರಿತ ಜಾಗೃತಿ ಶಿಬಿರ
Team Udayavani, Jun 27, 2020, 12:05 PM IST
ಬೀದರ: ನಗರದಲ್ಲಿ ಉದ್ದಿಮೆದಾರರಿಗಾಗಿ ಆಯೋಜಿಸಿದ್ದ ಜಾಗೃತಿ ಶಿಬಿರವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು.
ಬೀದರ: ಕೋವಿಡ್ ನಿಂದ ನಷ್ಟದಲ್ಲಿರುವ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದೆ. ಇದರಿಂದ ಉದ್ದಿಮೆದಾರರಿಗೆ ಅನುಕೂಲವಾಗಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ನಗರದ ಶಾರದಾ ಆರ್‌ಸಿಟಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಅಗ್ರ ಬ್ಯಾಂಕ್ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೋನ್ ಕುರಿತ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷ ಪ್ಯಾಕೇಜ್‌ನಿಂದ ಕಾರ್ಮಿಕರಿಗೆ ಮತ್ತೇ ಕಾರ್ಖಾನೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ನೀಡಬಹುದಾಗಿದೆ ಎಂದರು. ಎಸ್‌ಬಿಐ ವ್ಯವಸ್ಥಾಪಕ ಸುರೇಶ ಮತ್ತು ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಎಂ.ವಿ. ಭಾಗವತ್
ಮಾತನಾಡಿ, ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೋನ್‌ಗೆ ಯಾವುದೇ ಹೆಚ್ಚುವರಿ ಭದ್ರತೆ, ಪ್ರೊಸೆಸಿಂಗ್ ಫೀ ಇರುವುದಿಲ್ಲ. ಮರುಪಾವತಿಗೆ ನಾಲ್ಕು ವರ್ಷ ಅವಧಿ ಇದೆ. ಒಂದು ವರ್ಷ ಮೋರೆಟೋರಿಯಮ್ ಅವಧಿ ಇರುತ್ತದೆ. ಈ ವಿಶೇಷ ಪ್ಯಾಕೇಜ್‌ನಲ್ಲಿ ಔಟ್ ಸ್ಟಾಸ್ಟ್ಯಾಂಡಿಂಗ್ ಸಾಲದ ಮೇಲೆ ಶೇ.20 ರಷ್ಟು ಹೆಚ್ಚುವರಿ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ. ಕಮತಗಿ, ಕೆಎಸ್‌ಎಫ್‌ಸಿ ವ್ಯವಸ್ಥಾಪಕ ರಾಮ ಮಾರುತಿ ಪ್ರಸಾದ ಯೋಜನೆಯ ಬಗ್ಗೆ ವಿವರಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜೆಡಿ ಸುರೇಖಾ ಮುನೋಳಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಅಧಿಕಾರಿಗಳು, ಉದ್ದಿಮೆದಾರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.