Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Team Udayavani, Dec 8, 2024, 2:56 PM IST
ಬೀದರ್: ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಡಿ. 8 ರಂದು ಸಾಯಂಕಾಲ ಹಿಂದೂ ರಾಷ್ಟ್ರೀಯ ಜಾಗರಣ ಸಮಿತಿ ಆಯೊಜಿಸಿದ್ದ ಬೃಹತ್ ಹಿಂದೂ ಜಾಗೃತಿ ಸಮಾವೇಶಕ್ಕೆ ನಿರ್ಬಂಧ ಹೇರಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ ಎಂದು ಹಿರಿಯ ಹಿಂದೂ ಮುಖಂಡ ಈಶ್ವರಸಿಂಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ರವಿವಾರ (ಡಿ.08) ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ 144 ಸೆಕ್ಷನ್ ಅಡಿ ನಿಷೇಧ ಹೇರಿ ಕಾರ್ಯಕ್ರಮ ರದ್ದುಪಡಿಸುವುದರ ಜೊತೆಗೆ ಹೈದ್ರಾಬಾದ್ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಧವಿ ಲತಾ, ಗುಜರಾತಿನ ಖ್ಯಾತ ಭಾಷಣಕಾರ್ತಿ ಕಾಜಲ್ ಹಿಂದೂಸ್ತಾನಿ ಹಾಗೂ ಶ್ರೀರಾಮ ಸೇನೆಯ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಬೀದರಗೆ ಬರದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ ಎಂದು ಕಿಡಿಕಾರಿದರು.
ಮಾಧವಿ ಲತಾ ಅವರು ಚುನಾವಣೆ ಪ್ರಚಾರದ ವೇಳೆ ಬಿಲ್ಲು, ಬಾಣ ಪ್ರದರ್ಶಿಸಿದ್ದರು, ಕಾಜಲ್ ಹಿಂದೂಸ್ತಾನಿ ಅವರು ಗುಜರಾತಿನಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದರು, ಪ್ರಮೋದ ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾರೆ ಎಂಬ ನೆಪವೊಡ್ಡಿ ಈ ಮೂವರನ್ನು ಬೀದರಗೆ ಪ್ರವೇಶಿಸಿದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಖಂಡನೀಯ ಎಂದರು.
ಇತ್ತೀಚೆಗೆ ಮಾಧವಿ ಲತಾ ಅವರು ಕಲಬುರಗಿಯ ಗಣೇಶ ಉತ್ಸವದಲ್ಲಿ ಬಂದು ಭಾಷಣ ಮಾಡಿದ್ದರು, ಕಾಜಲ್ ಹಿಂದೂಸ್ತಾನಿ ಅವರು ಒಂದು ತಿಂಗಳ ಹಿಂದೆ ಭಾಲ್ಕಿಯಲ್ಲಿ ಮಾತನಾಡಿದ್ದರು. ಆಗ ಇಲ್ಲದ ನಿಷೇಧ ಈಗೇಕೆ? ಪ್ರಮೋದ್ ಮುತಾಲಿಕ್ ಅವರು ಕಳೆದ ಹತ್ತು ವರ್ಷಗಳಿಂದ ಬೀದರಗೆ ಬರುತ್ತಿಲ್ಲ ಅವರು ಯಾವ ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಬೃಹತ್ ಸಮಾವೇಶಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿ ಪೆಂಡಾಲ್, ವೇದಿಕೆ ಸೇರಿದಂತೆ ಧ್ವನಿವರ್ಧಕ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದ್ದು, ಈ ಅಪಾರ ಹಣದ ನಷ್ಟವನ್ನು ಭರಿಸುವವರು ಯಾರು? ಆ ಮೂವರನ್ನು ಬರದಂತೆ ಜಿಲ್ಲಾಡಳಿತ ತಡೆಯಬಹುದಾಗಿತ್ತು. ಆದರೆ, ಇಡೀ ಕಾರ್ಯಕ್ರಮ ಸ್ಥಳದಲ್ಲಿ 144 ಸೆಕ್ಷನ್ ಹೇರಿ ಹಿಂದೂಸ್ತಾನ್ ಭೂಮಿಯಲ್ಲಿಯೇ ಹಿಂದೂಗಳನ್ನು ದಮನ ಮಾಡಲು ಜಿಲ್ಲಾಡಳಿತ ಹೊರಟಿದೆ. ಹಾಗಾಗಿ ಜಿಲ್ಲಾಡಳಿತ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು. ಕಾರ್ಯಕ್ರಮಕ್ಕೆ ಆದ ಅಪಾರ ನಷ್ಟವನ್ನು ಜಿಲ್ಲಾಡಳಿತದಿಂದ ವಸೂಲಿ ಮಾಡಿ ಕೊಡಲು ನ್ಯಾಯಾಲಯಕ್ಕೆ ಪ್ರತ್ಯೇಕ ಖಟ್ಲೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಇತ್ತೀಚೆಗೆ ಇದೇ ಮೈದಾನದಲ್ಲಿ ಅನ್ಯ ಕೋಮಿನ ಮೂರು ದಿವಸದ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಜಿಲ್ಲಾಡಿಳಿತ ನಿದ್ರೆಗೆ ಜಾರಿತ್ತೆ? ಈ ತಿಂಗಳ 11 ರಂದು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಮೌಲ್ವಿಗಳ ಸಮಾವೇಶ ನಡೆಯಲು ಈ ಸರ್ಕಾರ ಅನುಮತಿ ನೀಡಿದೆ. ಆದರೆ, ಇಡೀ ವಿಶ್ವದಲ್ಲಿಯೇ ಹಿಂದೂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಈ ದೇಶದಲ್ಲಿ ಹಿಂದುಗಳ ಮೇಲೆ ಅನ್ಯಾಯವೆಸಗಲಾಗುತ್ತದೆ ಎಂದರೆ ನಾವು ಕಾರ್ಯಕ್ರಮ ಎಲ್ಲಿ ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಬೊಬ್ಬೆ ಹಾಕುತ್ತಿರುವುದು ಒಂದು ಕಡೆಯಾದರೆ, ಬಹು ಸಂಖ್ಯಾತ ಹಿಂದೂ ಸಮುದಾಯದ ಪ್ರಮುಖ ಕಾರ್ಯಕ್ರಮವಾಗಿರುವ ಈ ಬೃಹತ್ ಸಮಾವೇಶ ನಿಷೇಧಿಸಿ ಸಂವಿಧಾನವನ್ನು ಹಾಗೂ ಪ್ರಜಾಪ್ರಭುತ್ವವನ್ನು ಹಾಡುಹಗಲೇ ಕಗ್ಗೊಲೆ ಮಾಡಲು ಹೊರಟಿದೆ. ಇನ್ನು ಮುಂದೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಕಳೆದುಕೊಂಡಿದೆ. ಈ ಕಾರ್ಯಕ್ರಮದ ನಿಷೇಧ ಕುರಿತು ಬೆಳಗಾವಿಯ ಅಧಿವೇಶನದಲ್ಲೂ ಸಹ ನಮ್ಮ ಬಿಜೆಪಿ ಶಾಸಕರ ಮೂಲಕ ದೊಡ್ಡ ರೀತಿಯಲ್ಲಿ ಧ್ವನಿ ಎತ್ತಲಾಗುವುದು. ಇನ್ನು ಮುಂದೆ ಉಚ್ಛ ನ್ಯಾಯಾಲಯದಲ್ಲಿ ಕಾರ್ಯಕ್ರಮದ ಆಯೋಜನೆಗೆ ಆದೇಶ ಪಡೆದು ಇನ್ನೂ ಹೆಚ್ಚಿನ ರೀತಿಯಲ್ಲಿ ಹಿಂದುಗಳನ್ನು ಸೇರಿಸಿ ಇದಕ್ಕಿಂತಲೂ ವಿಶಾಲ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ, ವಿಶ್ವ ಹಿಂದೂ ಪರಿಷತ್ ವಿಭಾಗ ಪ್ರಮುಖ ರಾಮಕೃಷ್ಣ ಸಾಳೆ, ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ಬಸವರಾಜ ಸ್ವಾಮಿ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.