ಗ್ರಾಮೀಣ ಭಾಗದಲ್ಲಿ ಸಲೂನ್‌ ಅಬಾಧಿತ

ಕೊರೊನಾ ಸೋಂಕು ಭೀತಿ; ಸಲೂನ್‌ ಮುಚಲು ಆದೇಶ |ಎಲೆಕಿಕಲ್‌ ಮಷೀನ್‌ಗಳಿಂದ ಕೇಶ ಮುಂಡನೆ

Team Udayavani, Apr 15, 2020, 12:09 PM IST

15-April-6

ಬೀದರ: ಕೊರೊನಾ ಭೀತಿ ನಡುವೆಯೂ ಜಿಲ್ಲೆಯ ಹಳ್ಳಿಗಳಲ್ಲಿ ಹೇರ್‌ ಕಟಿಂಗ್‌ ಮಾಡಲಾಯಿತು. (ಅಂತರ್ಜಾಲ ಚಿತ್ರ).

ಬೀದರ: ಕೊರೊನಾ ವೈರಸ್‌ ಗಡಿ ಜಿಲ್ಲೆಗೂ ತನ್ನ ಕಬಂಧ ಬಾಹು ಈಗಾಗಲೇ ಚಾಚಿದ್ದು, ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಲಾಕ್‌ಡೌನ್‌ಗೂ ಮುನ್ನವೇ ಹೇರ್‌ ಸಲೂನ್‌, ಪಾರ್ಲರ್‌ಗಳನ್ನು ಮುಚ್ಚಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಮಾತ್ರ ಹೇರ್‌ ಸಲೂನ್‌ ಅಬಾಧಿತವಾಗಿ ಮುಂದುವರಿದಿದ್ದು, ಇದರಿಂದ ಜನರಲ್ಲಿ ಸೋಂಕಿನ ಭೀತಿ ಹೆಚ್ಚಿದೆ.

ಮನುಕುಲವನ್ನೇ ಕಪಿಮುಷ್ಠಿಯಲ್ಲಿ ಹಿಡಿದು ನರಕಯಾತನೆ ನೀಡುತ್ತಿರುವ ಕೊರೊನಾದಿಂದ ಜನ ಅಕ್ಷರಶಃ ನಲುಗಿದ್ದಾರೆ. ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿ ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದೆ. ಇತ್ತ ಸಾರ್ವಜನಿಕರು ಸಾಧ್ಯವಾದಷ್ಟು ಸೋಂಕು ತಗುಲದಿರಲಿ ಎಂದು ಸ್ವಯಂ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹಳ್ಳಿ ಪ್ರದೇಶದಲ್ಲಿ ಮಾತ್ರ ಸಾಮಾಜಿಕ ಅಂತರದ ಪರಿಜ್ಞಾನ ಇಲ್ಲದವರಂತೆ ವರ್ತಿಸುತ್ತಿದ್ದು, ಇದಕ್ಕೆ ಗ್ರಾಮಗಳಲ್ಲಿ ಹೇರ್‌ ಸಲೂನ್‌ ಸೇವೆ ಸಾಕ್ಷಿಯಾಗಿದೆ.

ಕೊರೊನಾ ಸೋಂಕು ಹರಡುವಿಕೆಗೆ ಹೇರ್‌ ಸಲೂನ್‌ ಮತ್ತು ಪಾರ್ಲರ್‌ ಅಂಗಡಿಗಳು ಬಹು ಮುಖ್ಯ ಕಾರಣವಾಗ ಬಲ್ಲದು. ಹಾಗಾಗಿ ಜಿಲ್ಲಾಡಳಿತ ಲಾಕ್‌ಡೌನ್‌ ಜಾರಿಗೊಳಿಸುವ ಮುನ್ನವೇ ಜಿಲ್ಲಾಡಳಿತ ಮಾ. 16ರಿಂದಲೇ ಅಂಗಡಿ ಮುಚ್ಚಲು ಆದೇಶಿಸಿ ಮಹತ್ವದ ಹೆಜ್ಜೆಯನ್ನಿಟ್ಟಿತ್ತು.

ಬೀದರ ನಗರ ಒಂದರಲ್ಲೇ ಸುಮಾರು 400 ಅಂಗಡಿಗಳಿಗೆ ಬೀಗ್‌ ಹಾಕಲು ಬಿಗಿ ಕ್ರಮ ಕೈಗೊಂಡಿತ್ತು. ನಗರ-ಪಟ್ಟಣ ಪ್ರದೇಶದಲ್ಲಿ ಲಾಕ್‌ಡೌನ್‌ ನಿಯಮ ಪಾಲಿಸುತ್ತಿರುವ ಜನ ಮನೆಯಲ್ಲೇ ಎಲೆಕ್ಟ್ರಿಕಲ್‌ ಮಷೀನ್‌ಗಳಿಂದ ಕೇಶ ಮುಂಡನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಗ್ರಾಮಗಳಲ್ಲಿ ಇಂದಿಗೂ ಹೇರ್‌ ಕಟಿಂಗ್‌, ಶೇವಿಂಗ್‌ ಮುಂದುವರಿದಿದೆ.

ಅಂಗಡಿಗಳು ಬಾಗಿಲು ಹಾಕಿರುವುದರಿಂದ ಹಳ್ಳಿ ಹಳ್ಳಿಗೆ ತೆರಳಿ ಹೇರ್‌ ಸಲೂನ್‌ ಮಾಡುತ್ತಿದ್ದಾರೆ. ಈ ಸೇವೆಗೆ ಗ್ರಾಹಕರೊಂದಿಗೆ ಯಾವುದೇ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಹತ್ತಾರು ಜನರಿಗೆ ಸಲೂನ್‌ ಮಾಡುವವರು ಮಾಸ್ಕ್ ಧರಿಸುವುದು ಸೇರಿದಂತೆ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ, ಸ್ಯಾನಿಟೈಸರ್‌ ಬಳಸಿ ಕೈ ತೊಳೆದುಕೊಳ್ಳುವುದು ಸೇರಿ ಶುಚಿತ್ವಕ್ಕೆ ಒತ್ತು ಕೊಡುತ್ತಿಲ್ಲ. ಇದು ಜಿಲ್ಲೆಯಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಸೋಂಕು ಹರಡುವಿಕೆ ಸಂದಿಗ್ಧ ಸ್ಥಿತಿಯಲ್ಲೂ ಗ್ರಾಮಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ಹೇರ್‌ ಸಲೂನ್‌ಗೆ ಬ್ರೇಕ್‌ ಹಾಕಬೇಕಿದೆ. ಇಲ್ಲವೇ ಸಲೂನ್‌ ಮಾಡುವವರು ಮುಂಜಾಗ್ರತಾ ಕ್ರಮಗಳಾದರೂ ವಹಿಸಬೇಕಿದೆ. ಇಲ್ಲವಾದರೆ ದೊಡ್ಡ ಆತಂಕ ತಂದೊಡ್ಡುವ ಸಾಧ್ಯತೆ ಇದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ನನ್ನ ಹೇರ್‌ ಸಲೂನ್‌ ಅಂಗಡಿ ಬಂದ್‌ ಮಾಡಿದ್ದೇನೆ. ಈ ಉದ್ಯೋಗದಿಂದಲೇ ಜೀವನ ನಿರ್ವಹಿಸಬೇಕು. ಸದ್ಯ ಸಲೂನ್‌ ಅಪಾಯಕಾರಿ ಎಂಬುದು ತಿಳಿದಿದೆ. ಆದರೂ ಹೊಟ್ಟೆಪಾಡಿಗಾಗಿ ಗ್ರಾಮಗಳಿಗೆ ತೆರಳಿ ಸೇವೆ ಮಾಡುತ್ತಿದ್ದೇನೆ.
ಭೀಮಣ್ಣ ಕಲ್ಲಪ್ಪ,
ಸಲೂನ್‌ ಮಾಲೀಕ

ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar: ಅ.28ರಂದು 5 ನೇ ವಚನ ಸಾಹಿತ್ಯ ಸಮ್ಮೇಳನ

Bidar: ಅ.28ರಂದು 5ನೇ ವಚನ ಸಾಹಿತ್ಯ ಸಮ್ಮೇಳನ

1-wewqewqe

Bidar; ಸಾಲ ಬಾಧೆಯಿಂದ ಇಬ್ಬರು ರೈತರು ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

5

Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

Suvarna-obama

Belagavi Session: ಬರಾಕ್‌ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.