ಬೀದರ ಪಶು ವಿವಿ ಘಟಿಕೋತ್ಸವ ನಾಳೆ
Team Udayavani, Aug 30, 2018, 6:05 AM IST
ಬೀದರ: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಶುಕ್ರವಾರ ನಡೆಯಲ್ಲಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಾಜ್ಯಪಾಲ ವಾಜುಭಾಯಿ ವಾಲಾ ಆಗಮಿಸಲಿದ್ದಾರೆ ಎಂದು ಕುಲಪತಿ ಎಚ್.ಡಿ. ನಾರಾಯಣ ಸ್ವಾಮಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 447 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 309 ಸ್ನಾತಕ ಪದವೀಧರರು, 109 ಸ್ನಾತಕೋತ್ತರ ಹಾಗೂ 29 ಡಾಕ್ಟರೇಟ್ ಪದವೀಧರರು ಸೇರಿದ್ದಾರೆ. ಪ್ರತಿಭಾವಂತ 34 ಪದವೀಧರರಿಗೆ 66 ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದರು.
ಸ್ನಾತಕ ಪದವಿ: ಬಿವಿಎಸ್‌ಸಿ ಮತ್ತು ಎಎಚ್ ವಿಭಾಗದಲ್ಲಿ ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಅಶ್ವಿನಿ (11), ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಮಕುಮಾರ (8) ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ವಾಣಿ (2), ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಶ್ರೀಶಾರಾವ್ ಎಸ್(2), ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಕೇಶ ಸಿ.ಎಂ. (1) ಮತ್ತು ಶರತ ಜೋಶಿ (1), ಬೆಂಗಳೂರಿನ ರಿಬುವರ್ಗೀಸ್ ಮ್ಯಾಥ್ಯೂವ್(1), ಕವಿತಾ (1) ಚಿನ್ನದ ಪದಕ ಪಡೆದಿದ್ದಾರೆ.
ಬಿಟೆಕ್ (ಹೈನು ತಂತ್ರಜ್ಞಾನ): ಬೆಂಗಳೂರಿನ ಹೈನು ವಿಜ್ಞಾನ ಮಹಾವಿದ್ಯಾಲಯ ಬಸವಪ್ರಭು ಎಚ್.ಎನ್. (5) ಮತ್ತು ಕಲಬುರಗಿ ಹೈನು ವಿಜ್ಞಾನ ಮಹಾವಿದ್ಯಾಲಯದ ಅರ್ಚನಾ ಎಂ. (1) ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿಎಫ್‌ಎಸ್‌ಸಿಯಲ್ಲಿ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಗೋಪಿಕಾ ರಾಧಾಕೃಷ್ಣನ್ (3) ಚಿನ್ನದ ಪದಕ ಪಡೆಯಲಿದ್ದಾರೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿನ ಪ್ರತಿಭೆಗೆ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯ ಮೊಹ್ಮದ್ ಅರ್ಷದ್ ಕೆ., ಹಾಗೂ ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದ ಕಿರಣ ಎಸ್. ತಲಾ ಒಂದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಎಂಟೆಕ್ (ಹೈನು ವಿಜ್ಞಾನ): ಬೆಂಗಳೂರು ಹೈನು ವಿಜ್ಞಾನ ಮಹಾವಿದ್ಯಾಲಯದ ಡೆಕುಲಾ ಹಿಮಬಿಂದು, ಹೈನು ತಾಂತ್ರಿಕತೆ (1), ಯಶಸ್ವಿನಿ ಎನ್.ಎನ್., ಹೈನು ತಾಂತ್ರಿಕತೆ-(2015-16) (1) ಮತ್ತು ಸಂಜನಾ ಎಂ.ಸಿ., ಹೈನು ಸೂûಾ¾ಣುಜೀವಿ ಶಾಸ್ತ್ರ (1) ಚಿನ್ನದ ಪದಕ ಪಡೆದಿದ್ದಾರೆ.
ಡಾಕ್ಟರೇಟ್ ಪದವಿ: ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಜೇಶ್ವರ ಎಚ್.ಎನ್., ಕುಕ್ಕುಟ ವಿಜ್ಞಾನ (3), ಸುನೀಲಕುಮಾರ ಪಾಟೀಲ ಪಶುವೈದ್ಯಕೀಯ ಅಂಗರಚನಾಶಾಸ್ತ್ರ (1), ಲೋಕೇಶ ಎಲ್.ವಿ. ಪಶುವೈದ್ಯಕೀಯ ಔಷಧ ಮತ್ತು ವಿಷಶಾಸ್ತ್ರ(1), ಶಿವಲಿಂಗಪ್ಪ ಮುಕರ್ತಾಲ್ ಪಶುವೈದ್ಯಕೀಯ ಸೂûಾ¾ಣುಜೀವಿ ಶಾಸ್ತ್ರ (1), ಸರ್ವೇಶ ಕೆ. ಪಶುವೈದ್ಯಕೀಯ ರೋಗಶಾಸ್ತ್ರ (1), ಸುನೀತಾ ಬೆಹೆರಾ ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರ(1) ಮತ್ತು ಬೀದರನ ಪಶುವೈದ್ಯಕೀಯ ಮಹಾವಿದ್ಯಾಲಯದ ಜೈಶಂಕರ್ ಎನ್. ಪ್ರಾಣಿ ಆಹಾರ ಶಾಸ್ತ್ರ (1) ಪದಕ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.