Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್ ಮಾನಸಿಕ ರೋಗಿ: ಈಶ್ವರ ಖಂಡ್ರೆ
Team Udayavani, Dec 1, 2024, 3:10 PM IST
ಬೀದರ್: ಮಹಾ ಬಮಾನವತಾವಾದಿ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಮತ್ತು ಲಘುವಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಒಬ್ಬ ಜೋಕರ್. ಅವರೊಬ್ಬ ಮಾನಸಿಕ ರೋಗಿಯಾಗಿದ್ದು, ಚಿಕಿತ್ಸೆಯ ಪಡೆಯುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ರವಿವಾರ (ಡಿ.01) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣ ಒಬ್ಬ ಸಮಾಜ ಸುಧಾರಕ, ಸಮ ಸಮಾಜ ನಿರ್ಮಾಣಕ್ಕೆ ಕ್ರಾಂತಿಗೈದ ಮಹಾಪುರುಷ. ಹಾಗಾಗಿ ಸರ್ಕಾರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಡೀ ವಿಶ್ವವೇ ಅವರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಸಂದರ್ಭದಲ್ಲಿ ಯತ್ನಾಳ್ ಇತಿಹಾಸದ ಅರಿವಿಲ್ಲದೆ, ಆರೆಸ್ಸೆಸ್ಸಿಗರನ್ನು ಖುಷಿ ಪಡಿಸಲು ಮತ್ತು ಬಿಜೆಪಿಯಲ್ಲಿನ ಆಂತರಿಕ ಕಲಹಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಯತ್ನಾಳ್ ಹೇಳಿಕೆಯಿಂದ ಜಗತ್ತಿನ ಬಸವಾನುಯಾಯಿಗಳಿಗೆ ನೋಡವಾಗಿದೆ. ವಿನಾಶ ಕಾಲೇ ವಿಪರಿತ ಬುದ್ದಿ ಎಂಬಂತೆ ವರ್ತಿಸುತ್ತಿರುವ ಅವರಿಗೆ ಮುಂದಿನ ದಿನಗಳಲ್ಲಿ ಬಸವ ಭಕ್ತರು ತಕ್ಕ ಪಾಠ ಕಲಿಸುತ್ತಾರೆ. ಬಸವಣ್ಣನ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ಪಕ್ಷ ಈ ವಿಷಯದಲ್ಲಿ ಮೌನ ವಹಿಸಿದ್ದು, ಪಕ್ಷದ ಬಣ್ಣ ಬಯಲಾಗಿದೆ. ಬಿಜೆಪಿ ವರಿಷ್ಠರೇ ಯತ್ನಾಳ್ ಅವರನ್ನು ಬಸವೇಶ್ವರರಿಗೆ ಅವಹೇಳನ ಮಾಡಲು ಛೂ ಬಿಟ್ಟಿದ್ದಾರೆ ಎಂದು ಆರೋಪಿಸಿದ ಖಂಡ್ರೆ ಅವರು, ಯತ್ನಾಳ ವಿರುದ್ಧ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಕ್ಫ್ ಬೋರ್ಡ್ ನೋಟಿಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದು, ಯಾವುದೇ ರೈತರಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಕ್ಫ್ ಸಂಬಂಧ ಹೆಚ್ಚು ನೋಟಿಸ್‌ಗಳು ಹೋಗಿದೆ. ಆದರೂ, ಯತ್ನಾಳ್ ತಂಡ ಪಕ್ಷದಲ್ಲಿ ಒಳಜಗಳ ಹಿನ್ನಲೆ ಸ್ವಾರ್ಥಕ್ಕಾಗಿ ರೈತರನ್ನು ಬೀದಿಗೆ ಬಂದು ಬಲಿಪಶು ಮಾಡಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಹಟಾವೋ ಹೋರಾಟದಲ್ಲಿ ಬಸವಣ್ಣನಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಕಲ್ಯಾಣದ ತ್ರಿಪುರಾಂತ ಕೆರೆಯ ದಡದಲ್ಲಿಯೇ ಮೂಲ ಅನುಭವ ಮಂಟಪದ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಅನೇಕ ಸಂಶೋಧಕರೇ ದೃಢಪಡಿಸಿದ್ದಾರೆ. ಸ್ವಾಮಿಜೀಗಳು ಯಾವುದೇ ದಾಖಲೆ ಇಲ್ಲದೆ ವಿವಾದ ಸೃಷ್ಟಿಸುವಂಥ ಹೇಳಿಕೆ ನೀಡುವುದು ಸರಿಯಲ್ಲ. ವಿಶ್ವವಿಖ್ಯಾತ ನೂತನ ಅನುಭವ ಮಂಟಪ ಕೆಲಸ ವೇಗವಾಗಿ ನಡೆಯುತ್ತಿದ್ದು, ಇದನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಹೋರಾಟ ನಡೆಸುವ ಮಾತುಗಳನ್ನಾಡುತ್ತಿದ್ದಾರೆ. ಎಲ್ಲ ಮಠಾಧೀಶರು, ಬಸವಣ್ಣನವರ ಸಾಮರಸ್ಯದ ಪರಿಕಲ್ಪನೆಗೆ ಮನ್ನಣೆ ಕೊಡಬೇಕು ಎಂದು ಖಂಡ್ರೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು
Bangla; ಭಾರತೀಯ ಬಸ್ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.