ಸೋಂಕಿತರ ಶವಕ್ಕೆ “ಬಿಲಾಲ್’ ಮುಕ್ತಿದಾತ
Team Udayavani, Jul 9, 2020, 6:32 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀದರ: ಹೆಮ್ಮಾರಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ದಿನಕ್ಕೊಂದು ಯಡವಟ್ಟಾಗುತ್ತಿರುವುದು ಒಂದೆಡೆಯಾದರೆ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಸ್ವತಃ ಕುಟುಂಬದವರೇ ಹೆದರುತ್ತಿರುವುದು ಸಾಮಾನ್ಯವಾಗಿದೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಿಸಿಲೂರಿನ ಸಮಾಜಮುಖೀ ಕಾರ್ಯಕರ್ತರ ತಂಡ ಸೋಂಕಿತರು, ಅನಾಥರ ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದೆ. ಕೊರೊನಾ ದೇಶದೆಲ್ಲೆಡೆ ಜನರ ಜೀವ ಹಿಂಡುತ್ತ ತಲ್ಲಣ ಮೂಡಿಸುತ್ತಿದ್ದು ಬೀದರ್ ಸಹ ಇದಕ್ಕೆ ಹೊರತಾಗಿಲ್ಲ. ಜಿಲ್ಲೆಯಲ್ಲಿ ಸೋಂಕು ಹರಡುತ್ತಿದೆಯಲ್ಲದೆ ಇದರಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಭೀತಿ ಮಧ್ಯೆಯೇ ಬೀದರನ ಮಹ್ಮದ್ ಮಜೀದ್ ಬಿಲಾಲ್ ಮತ್ತು ಯುವಕರ ತಂಡ ಮಾನವೀಯತೆ ನೆಲೆಯಲ್ಲಿ ಕೋವಿಡ್-19 ರೋಗಕ್ಕೆ ಬಲಿಯಾಗಿರುವ, ಅಪರಿಚಿತರ ಶವಗಳನ್ನು ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿದೆ. ಆರೋಗ್ಯ ಇಲಾಖೆ, ನಗರಸಭೆ ಪರವಾನಿಗೆ ಪಡೆದು ಈವರೆಗೆ ಸೋಂಕಿನಿಂದ ಮೃತಪಟ್ಟ ಮೂವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಬೀದರ ಹೊರವಲಯದ ಚಿದ್ರಿಯ ಹೈದರ್ ಕಾಲೋನಿಯ ನಿವಾಸಿ ಮಹಮದ್ ಮಜೀದ್ ಬಿಲಾಲ್ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಸಂಘಟನೆ ಮೂಲಕ ಸಾಮಾಜಿಕ ಸೇವೆಗೈಯುತ್ತ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ನಗರ ಸೇರಿ ಜಿಲ್ಲೆಯಲ್ಲಿ ಅಪಘಾತ, ಬಾವಿ, ಹೊಳೆ, ಕೆರೆ ಸೇರಿದಂತೆ ಯಾವುದೇ ಸ್ಥಳದಲ್ಲಿ ಅನಾಥ ಮೃತದೇಹ ಪತ್ತೆಯಾದರೂ ಆ ಸ್ಥಳಕ್ಕೆ ಹಾಜರಾಗಿ ಆ ದೇಹಕ್ಕೆ ಮುಕ್ತಿ ನೀಡುತ್ತ ಬಂದಿದ್ದಾರೆ. ಈ ವರೆಗೆ ಹತ್ತಾರು ಅನಾಥ ಶವಗಳ ಅಂತ್ಯಕ್ರಿಯೆ ಮಾಡಿರುವ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಸಂಘಟನೆ ರಾಜ್ಯ ಜಂಟಿ ಕಾರ್ಯದರ್ಶಿ ಬಿಲಾಲ್ ಅವರ ತಂಡ ಈಗ ಕೊರೊನಾದಿಂದ ಸಾವಿಗೀಡಾದವರ ಸಂಸ್ಕಾರ ಮಾಡಲು ಮುಂದಾಗಿದೆ.
ಹದಿನೈದು ದಿನಗಳ ಹಿಂದೆಯಷ್ಟೇ ಡಿಎಚ್‌ಒ ಡಾ| ವಿ.ಜಿ. ರೆಡ್ಡಿಯವರಿಗೆ ಮನವಿ ನೀಡಿ ಪರವಾನಿಗೆ ಪಡೆದಿರುವ ತಂಡ ಮೂವರು ಸೋಂಕಿತರ ಶವ ಸಂಸ್ಕಾರ ಮಾಡಿದೆ. ಆರೋಗ್ಯ ಇಲಾಖೆ ಬಿಲಾಲ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಿದೆ. ಪಿಪಿಇ ಕಿಟ್ ಧರಿಸಿ, ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಮುಂಜಾಗ್ರತಾ ಕ್ರಮಗಳೊಂದಿಗೆ ಮೃತರ ಸಂಪ್ರದಾಯದಂತೆ ಅಂತಿಮ ಕ್ರಿಯೆಗಳನ್ನು ಮಾಡಲಾಗಿದೆ. ಇವರ ಸೇವೆಗೆ ಬ್ರಿಮ್ಸ್, ನಗರಸಭೆ ಸಹಕಾರ ನೀಡುತ್ತಿದೆ. ಅನಾಥರ ಶವ ಸಂಸ್ಕಾರಕ್ಕಾಗಿ ಮಜೀದ್ ಬಿಲಾಲ್ (ಮೊ. 8746999222) ಅವರನ್ನು ಸಂಪರ್ಕಿಸಬಹುದು. ಅವರ ತಂಡ ಸಂಬಂಧಪಟ್ಟವರ ಪರವಾನಿಗೆ ಪಡೆದು ಅಂತಿಮ ಕ್ರಿಯೆ ನಡೆಸಿಕೊಡಲಿದೆ.
ಅನಾಥ ಗೆಳೆಯನೊಬ್ಬನ ಶವ ಸಂಸ್ಕಾರದ ಘಟನೆ ನನ್ನನ್ನು ಈ ಸಮಾಜಮುಖೀ ಕಾರ್ಯದಲ್ಲಿ ತೊಡಿಗಿಸಿಕೊಳ್ಳುವಂತೆ ಮಾಡಿತು. ಸಮಾಜ ಸೇವೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥಾಪಕ ಹುದ್ದೆಯನ್ನು ಬಿಟ್ಟಿದ್ದೇನೆ. ಕಳೆದ ಐದು ವರ್ಷದಲ್ಲಿ ಹತ್ತಾರು ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಈಗ ಮುಂಜಾಗ್ರತಾ ಕ್ರಮದೊಂದಿಗೆ ಬೀದರನ ಮೂರು ಕೊರೊನಾ ಸೋಂಕಿತರ ಶವಕ್ಕೆ ಮುಕ್ತಿ ನೀಡಿದ್ದೇವೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಬೇರೆಡೆಗೆ ವಾಸವಾಗಿದ್ದೇನೆ.
ಮಜೀದ್ ಬಿಲಾಲ್
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.