ಭಾರತಕ್ಕೆ ಇಸ್ರೋ ಕೊಡುಗೆ ಅಮೂಲ್ಯ
"ರಾಷ್ಟ್ರ ನಿರ್ಮಾಣಕ್ಕಾಗಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿನ ಅನ್ವೇಷಣೆ' ಅಂತಾರಾಷ್ಟ್ರೀಯ ಸಮ್ಮೇಳನ
Team Udayavani, Mar 13, 2020, 6:21 PM IST
ಬೀದರ: ಖಗೋಳ ವಿಜ್ಞಾನದ ವಿಸ್ಮಯ ಅದ್ಭುತ ಸಂಶೋಧನೆಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಇಸ್ರೋದ ಸಾಧನೆ, ಭಾರತಕ್ಕೆ ಕೊಟ್ಟ ಕೊಡುಗೆ ಅಮೂಲ್ಯ ಎಂದು ಇಸ್ರೋ ನಿವೃತ್ತ ಉಪನಿರ್ದೇಶಕ ಡಾ| ಪಿ.ಜೆ. ಭಟ್ ಸಂತಸ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆಎಸ್‌ಟಿಎ) ಹಾಗೂ ಹೈ.ಕ. ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಗುರುವಾರ ನಗರದ ಬಿವಿಬಿ ಮಹಾವಿದ್ಯಾಲಯದಲ್ಲಿ ನಡೆದ “ರಾಷ್ಟ್ರ ನಿರ್ಮಾಣಕ್ಕಾಗಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿನ ಅನ್ವೇಷಣೆ’ ವಿಷಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ತಾಂತ್ರಿಕ ಅಧಿವೇಶನದಲ್ಲಿ ಅವರು ಮಾತನಾಡಿದರು.
ಭೂಮಿಯ ಉಪಗ್ರಹವಾದ ಚಂದ್ರ ಮತ್ತು ಮಂಗಳ ಗ್ರಹಕ್ಕೆ ತಲುಪಲು ಮಾಡಿದ ಪ್ರಯತ್ನ ಇಡೀ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ. ಇಸ್ರೋ ಸಂಸ್ಥೆ ಚಂದ್ರಯಾನ-1 ಮತ್ತು ಚಂದ್ರಯಾನ-2 ಉಡಾವಣೆಗೊಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಮಂಗಳ ಗ್ರಹಕ್ಕೂ ಲಗ್ಗೆ ಇಡುವಲ್ಲಿ ಇಸ್ರೋ ಯಶ್ವಸಿಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಆಧುನಿಕ ತಂತ್ರಜ್ಞಾನದಿಂದ ಖಗೋಳ ವಿಜ್ಞಾನದಲ್ಲಿ ಭಾರತವು ಮೇಲುಗೈ ಸಾಧಿ ಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಪಗ್ರಹಗಗಳ ಉಡಾವಣೆಯ ಸಂದರ್ಭದಲ್ಲಿ ಯಾವ ದೋಷಗಳಿಲ್ಲದೆ ಕಾರ್ಯಾಚರಣೆ ನಿರ್ವಹಿಸಿದ ಉಪಗ್ರಹಗಳು ಇನ್ನೂ ಮುಂದೆಯೂ ಯಶ್ವಸಿ ಸಾಧನೆ ಮಾಡುವಲ್ಲಿ ಭಾರತದ ಖಗೋಳ ವಿಜ್ಞಾನಿಗಳು ಸಾಕಷ್ಟು ಪ್ರಯತ್ನದಲ್ಲಿದ್ದಾರೆ. ಅವರ ಯಶಸ್ಸಿಗೆ ಭಾರತ ಸರ್ಕಾರದ ಸಹಕಾರವಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಅಧಿವೇಶನದಲ್ಲಿ ಹೈದ್ರಾಬಾದ್‌ನ ಐಐಟಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ|ಜೆ. ಸೂರ್ಯನಾರಾಯಣ ಮಾತನಾಡಿ, ಭೌತವಿಜ್ಞಾನ ಪ್ರಚಲಿತ ದಿನಮಾನದಲ್ಲಿ ಅತಂತ್ಯ ಅವಶ್ಯಕವಾಗಿದೆ. ಜನಸಾಮಾನ್ಯರ ಹಾಗೂ ದೈನಂದಿನ ಕಾರ್ಯಾಚರಣೆಯಲ್ಲಿ ನಡೆಯುವ ವೈಜ್ಞಾನಿಕ ಸಮಸ್ಯೆಗಳನ್ನು ನಿರ್ವಹಣೆ ಮಾಡಿಕೊಳ್ಳಲು ಪ್ರತಿ ಕ್ಷೇತ್ರಗಳಲ್ಲೂ ಭೌತವಿಜ್ಞಾನವು ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದ ಅವರು, ರಾಸಾಯನಿಕ ಜೈವಿಕ ಹಾಗೂ ಖಗೋಳ ವಿಜ್ಞಾನಗಳಿಗೂ ಪ್ರತಿಕೂಲವಾಗಿರುವ ವಿಷಯವಾಗಿದೆ ಎಂದು ವಿಷಯ ಮಂಡಿಸಿದರು.
ಅಧಿವೇಶನದಲ್ಲಿ ವಿಷಯ ತಜ್ಞರು ತಮ್ಮ ವೈಜ್ಞಾನಿಕ ಭಿತ್ತಿ ಚಿತ್ರಗಳ ಪ್ರದರ್ಶನ ಮಾಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಎಸ್.ಕೆ. ಸಾತನೂರ, ಉಪ ಪ್ರಾಂಶುಪಾಲ ಡಾ| ಎಸ್.ಬಿ. ಗಾಮಾ, ಸಮ್ಮೇಳನ ಸಂಚಾಲಕ ನಾಗನಾಥ ಸರೋದೆ ಮತ್ತು ಕೆಎಸ್‌ಟಿಎ ವೈಜ್ಞಾನಿಕ ಅಧಿ ಕಾರಿ ಉಮೇಶ ಘಾಟಗೆ ಉಪಸ್ಥಿತರಿದ್ದರು.
ಅಂಕಿತಾ ಬಜಾಜ್, ರಜನಿ ಜೆ. ಮತ್ತು ಸುರೇಶ ಕೋಟೆ ಕಾರ್ಯಕ್ರಮ ನಡೆಸಿಕೊಟ್ಟರು. ಸಮ್ಮೇಳನದಲ್ಲಿ ವಿವಿಧ ಮಹಾವಿದ್ಯಾಲಯ ಹಾಗೂ ಹೊರ ರಾಜ್ಯಗಳ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.