ರಾಜ್ಯದಲ್ಲಿ ಕಡಿಮೆ ಸೋಂಕಿತರ ಜಿಲ್ಲೆ ಬೀದರ
Team Udayavani, Jun 2, 2021, 6:30 PM IST
ಹುಮನಾಬಾದ: ರಾಜ್ಯದಲ್ಲಿಯೇ ಬೀದರ ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳು ಶ್ರಮಿಸಿದ್ದು, ರಾಜ್ಯದಲ್ಲಿ ಅತೀ ಕಡಿಮೆ ಸೋಂಕಿತರು ಇರುವ ಜಿಲ್ಲೆ ಎಂದು ಗುರುತಿಸಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಪ್ರಾಂಗಣದಲ್ಲಿ ಕೊರೊನಾ ವಾರಿಯರ್ಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಜನರು ಕೋವಿಡ್ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 2000 ರೂ.
ಪ್ರೋತ್ಸಾಹ ಧನ: ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ಕೋವಿಡ್ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ತಲಾ 2000 ರೂ. ಪ್ರೋತ್ಸಾಹಧನ ಹಾಗೂ ಆಹಾರ ಕಿಟ್ ಸ್ವಂತ ಖರ್ಚಿನಲ್ಲಿ ನೀಡುವುದಾಗಿ ಘೋಷಿಸಿದರು. ಅ ಧಿಕಾರ ಯಾರಿಗೂ ಶಾಶ್ವತ ಅಲ್ಲ. ಪ್ರಭು ಚವ್ಹಾಣ ಅವರಿಗೆ ಜನರ ಸೇವೆ ಮಾಡಲು ಉತ್ತಮ ಅವಕಾಶ ದೊರೆತ್ತಿದ್ದು, ಜನರ ಸಂಕಷ್ಟದಲ್ಲಿ ಭಾಗವಹಿಸಿ ಉತ್ತಮ ಆಡಳಿತ ನೀಡಲಿ ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವೈದ್ಯರು-ಸಿಬ್ಬಂದಿ, ಪುರಸಭೆ ಕಾರ್ಮಿಕರು, ಪೊಲೀಸ್ ಅಧಿ ಕಾರಿಗಳು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರನ್ನು ಸಚಿವರು ಸನ್ಮಾನಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಡಾ| ಶಿವಕುಮಾರ ಸಿದ್ದೇಶ್ವರ, ನಾಗಯ್ನಾ ಹಿರೇಮಠ, ಶಂಭುಲಿಂಗ ದೇಸಾಯಿ, ಸೋಮಲಿಂಗ ಕುಂಬಾರ, ಡಾ| ನಾಗನಾಥ ಹುಲಸೂರೆ, ಶಿವಾನಂದ ಮಂಠಾಳಕರ್ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.