ಕೋವಿಡ್ ಕೈಮೀರಿದರೆ ಆಡಳಿತ ಸಿದ್ಧವಿರಲಿ
ತುರ್ತುಸ್ಥಿತಿ ನಿಭಾಯಿಸಲು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿ | ಬಡವರಿಗೆ ಆಹಾರ ಧಾನ್ಯ ವಿತರಿಸಲು ಮನವಿ
Team Udayavani, Apr 10, 2020, 12:55 PM IST
ಬೀದರ: ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು.
ಬೀದರ: ವಿವಿಧ ದೇಶಗಳಲ್ಲಿ ಕೋವಿಡ್ ಸೋಂಕು ತೀವ್ರವಾಗಿ ವ್ಯಾಪಿಸುವುದನ್ನು ನೋಡುತ್ತಿದ್ದೇವೆ. ಹೀಗಾಗಿ ಮೂರರಿಂದ ಆರು ತಿಂಗಳ ಅವಧಿವರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಿಸಿ ಪರಿಸ್ಥಿತಿ ಕೈ ಮೀರಿದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸಿದ್ಧವಾಗಿರಬೇಕು ಎಂದು ಶಾಸಕ ಈಶ್ವರ ಖಂಡ್ರೆ ಸಲಹೆ ನೀಡಿದರು.
ಕೋವಿಡ್ ಮುಂಜಾಗ್ರತೆ ಕುರಿತಂತೆ ನಗರದಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಇದ್ದರಷ್ಟೇ ಆಗದು. ವೆಂಟಿಲೇಟರ್ ಬಳಿಕೆ ಬಗ್ಗೆ, ವೈದ್ಯರು ಮತ್ತು ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದರ ಬಗ್ಗೆ ತರಬೇತಿ ನೀಡಬೇಕು. ಕನಿಷ್ಠ 20000 ಪಿಪಿಇ ಕಿಟ್‌ಗಳು, ಅವಶ್ಯಕ ವೆಂಟಿಲೇಟರ್‌ಗಳು ಮತ್ತು ಆರೋಗ್ಯ ಸಿಬ್ಬಂದಿಗೆ ಎರಡು ಲಕ್ಷ ತ್ರಿಬಲ್ ಲೇಯರ್ ಮಾಸ್ಕ್ಗಳನ್ನು ಸ್ಟಾಕ್ ಮಾಡಿಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜಿಲ್ಲೆಯಲ್ಲಿನ ಕಡುಬಡವರಿಗೆ ಸಾಕಾಗುವಷ್ಟು ಆಹಾರ ಧಾನ್ಯ ನೀಡಿ ಅವರು ಹೊರಹೋಗದಂತೆ ನೋಡಿಕೊಳ್ಳಿ. ನಿರಾಶ್ರಿತರು, ಭಿಕ್ಷುಕರನ್ನು ಗುರುತಿಸಿ ಊಟ ಕೊಡಿ. ಜನ್‌ಧನ್ ಯೋಜನೆಯಡಿ 500 ರೂ. ಗಳನ್ನು ಎಲ್ಲರ ಖಾತೆಗೂ ಹಾಕುವಂತಾಗಬೇಕು. ಗ್ಯಾಸ್ ಸಿಲಿಂಡರ್ ಎಲ್ಲರಿಗೂ ಸರಿಯಾದ ಅವಧಿಗೆ ತಲುಪಬೇಕು. ಹಿರಿಯ ನಾಗರಿಕರಿಗೆ 1000 ರೂ. ಮಾಸಾಶನ ತುರ್ತಾಗಿ ಹಾಕಬೇಕು. ಕಲ್ಲಂಗಡಿ, ದ್ರಾಕ್ಷಿ ಮತ್ತು ತೊಗರಿ ಖರೀದಿ ಮಾಡಿ ರೈತರಿಗೆ ಹಣ ಕೊಡಬೇಕು ಎಂದು ಶಾಸಕರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ಕಾರ್ಡ್ ಇರದವರಿಗೂ ಪಡಿತರ: ಜಿಲ್ಲೆಯಲ್ಲಿ ತೊಂದರೆಗೊಳಗಾದ ಬಡ, ಕಾರ್ಮಿಕರಿಗೆ ಪ್ರಾಮಾಣಿಕವಾಗಿ ಆಹಾರ ಧಾನ್ಯ ತಲುಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಹೇಳಿದರು. ಸ್ಲಂನಲ್ಲಿರುವ ಬಡವರು ಮತ್ತು ಲಾಕ್‌ಡೌನ್ ಕಾರಣ ಕೆಲಸ ಕಳೆದುಕೊಂಡು ಜಿಲ್ಲೆಗೆ ಬಂದು ತಾಂಡಾ ಮತ್ತು ಮತ್ತಿತರ ಕಡೆ ನೆಲೆಯೂರಿದವರಿಗೆ ಕಾರ್ಡ್ ಕೇಳದೇ ಅಂತವರಿಗೆ ರೇಷನ್ ವಿತರಿಸಿ ಎಂದು ಶಾಸಕ ನಾರಾಯಣ ರಾವ್ ಧ್ವನಿಗೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.