ಕ್ವಾರಂಟೈನ್ ಕೇಂದ್ರ ಹಾಸ್ಟೆಲ್‌ಗಳಲ್ಲಿ ಸುವ್ಯವಸ್ಥೆ: ದೇವಮಾನೆ
Team Udayavani, May 2, 2020, 5:20 PM IST
ಬೀದರ: ವಿದ್ಯಾರ್ಥಿ ನಿಲಯವೊಂದರ ಕ್ವಾರಂಟೈನ್ ಕೇಂದ್ರಕ್ಕೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ ಭೇಟಿ ನೀಡಿ ಪರಿಶೀಲಿಸಿದರು
ಬೀದರ: ಕೋವಿಡ್-19 ತಡೆ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ 5 ತಾಲೂಕಿನ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರಂಟೈನ್ ಕೇಂದ್ರಗಳು, ವಲಸಿಗರ ಕೇಂದ್ರ, ಪ್ರಥಮ ಶಂಕಿತರ ಹಾಗೂ ದ್ವಿತೀಯ ಶಂಕಿತರ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ ಎಂದು ಬಿಸಿಎಂ ಇಲಾಖೆ ಉಪ ನಿರ್ದೇಶಕ ರಮೇಶ ದೇವಮಾನೆ ತಿಳಿಸಿದ್ದಾರೆ.
ಭಾಲ್ಕಿ ತಾಲೂಕು ಹಲಬರ್ಗಾ, ಡೊಣಗಾಪುರ ಹಾಸ್ಟೆಲ್, ಹುಮನಾಬಾದ ತಾಲೂಕು ಚಿಟ್ಟಗುಪ್ಪಾ, ಘಾಟಬೋರಳ ಮತ್ತು ನಿರ್ಣಾ, ಔರಾದ ತಾಲೂಕು ಧುಪತಮಹಾಗಾಂವ, ಕಮಲನಗರ ಪಟ್ಟಣದಲ್ಲಿ ಹಾಗೂ ಬಸವಕಲ್ಯಾಣ ತಾಲೂಕು ಬಂದವರ ಓಣೆ, ಉಜಳಂಬ ಮತ್ತು ಮುಡಬಿ ಗ್ರಾಮದಲ್ಲಿ ಇಲಾಖೆಯಿಂದ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹಾಸ್ಟೆಲ್ ಗಳಲ್ಲಿ ವಾಸವಾಗಿರುವ ನಿರಾಶ್ರಿತರು, ಪ್ರಥಮ ಹಂತದ ಶಂಕಿತರು, ದ್ವೀತಿಯ ಹಂತದ ಶಂಕಿತರಿಗೆ ನಿತ್ಯ ಬೆಳಗ್ಗೆ ಚಹಾ, ಉಪಹಾರ, ಮಧ್ಯಾಹ್ನದ ಊಟಕ್ಕೆ ರೊಟ್ಟಿ, ಅನ್ನ, ತರಕಾರಿ, ಸಾಂಬಾರು, ಸಂಜೆ ಚಹಾ ಬಿಸ್ಕಿಟ್ ಅಥವಾ ಸ್ನಾಕ್ಸ್ ,ರಾತ್ರಿ ಊಟಕ್ಕೆ ಚಪಾತಿ, ಅನ್ನ, ತರಕಾರಿ, ಸಾಂಬಾರು ಒಳ್ಳೆಯ ರುಚಿಕರವಾದ ಊಟ ತಯಾರಿಸಿ ಮನೆ ಊಟದ ವಾತವರಣ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ತವ್ಯದಲ್ಲಿದ್ದ ಸಿಬ್ಬಂದಿಯವರ ಆರೋಗ್ಯ ಹಿತದೃಷ್ಠಿಯಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್, ಹ್ಯಾಂಡ್ ಗ್ಲೋಸ್, ಸಾನಿಟೈಸರ್ ಹಾಗೂ ಇನ್ನಿತರ ಅವಶ್ಯಕ ಸಾಮಗ್ರಿಗಳನ್ನು ಇಲಾಖಾ ವತಿಯಿಂದ ಒದಗಿಸಲಾಗುತ್ತಿದೆ. ಹಾಗೂ ಆಗಾಗ ಭೇಟಿ ನೀಡಿ ಸಲಹೆ ಸೂಚನೆಗಳು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇಲಾಖೆ ನಿಲಯಗಳ ಕ್ವಾರಂಟೈ… ಕೇಂದ್ರಗಳಿಗೆ ಸ್ಥಳೀಯ ಶಾಸಕರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಸುವ್ಯವಸ್ಥೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.