ಬೀದರ: ಜನತಾ ಕರ್ಫ್ಯೂ ಭಾಗಶಃ ಯಶಸ್ವಿ
Team Udayavani, May 25, 2020, 12:03 PM IST
ಬೀದರ: ರವಿವಾರ ಕರ್ಫ್ಯೂ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ ವೃತ್ತ ಬಿಕೋ ಎನ್ನುತ್ತಿರುವುದು.
ಬೀದರ: ಕೋವಿಡ್ ಸೋಂಕು ನಿಯಂತ್ರಣ ಕ್ರಮದ ಭಾಗವಾಗಿ ರಾಜ್ಯ ಸರ್ಕಾರ ಕರೆ ನೀಡಿದ್ದ ‘ರವಿವಾರ ಕರ್ಫ್ಯೂ’ಗೆ ಬೀದರ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಲಾಕ್‌ಡೌನ್ ಸಡಿಲಕೆ ಬಳಿಕ ಜನ-ವಾಹನ ಸಂಚಾರ ಎಂದಿನಂತೆ ಸಹಜ ಸ್ಥಿತಿಗೆ ಬಂದಿತ್ತು. ಆದರೆ, ರವಿವಾರ ಸರ್ಕಾರದ ಬಂದ್ ಕರೆಗೆ ಜಿಲ್ಲೆಯ ಜನರು ಸಹಕರಿಸುವ ಮೂಲಕ ಭಾಗಶಃ ಯಶಸ್ವಿಗೊಳಿಸಿದ್ದಾರೆ. ನಗರ ಸೇರಿ ಕೆಲವೆಡೆ ಬೆರಳಣಿಕೆಯಷ್ಟು ಜನರ ಓಡಾಟ ಮಾತ್ರ ಕಾಣಿಸಿಕ್ಕಿದ್ದು ಹೊರತುಪಡಿಸಿದರೆ ಎಲ್ಲೆಡೆ ಸ್ತಬ್ಧವಾಗಿತ್ತು.
ಬೆಳಗ್ಗೆಯಿಂದಲೂ ಸರ್ಕಾರಿ ಸಾರಿಗೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳೂ ರಸ್ತೆಗೆ ಇಳಿಯಲಿಲ್ಲ. ಬೈಕ್ ಮೇಲೆ ವಿನಾಕಾರಣ ಸುತ್ತುತ್ತಿದ್ದವರನ್ನು ಪೊಲೀಸರು ಎಚ್ಚರಿಕೆ ನೀಡುವ ಮೂಲಕ ವಾಪಸ್ ಕಳುಹಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು. ಜೀವನಾವಶ್ಯಕ ವಸ್ತುಗಳಿಗಾಗಿ ಕಿರಾಣಿ, ಔಷಧ ಮಳಿಗೆಗಳು, ಹಣ್ಣು- ತರಕಾರಿ ಮಾರಾಟ ಹೊರತುಪಡಿಸಿದರೆ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.