ಬೀದರ: ತ್ರಿಶತಕ ದಾಟಿದ ಸೋಂಕಿತರು
Team Udayavani, Jun 13, 2020, 7:04 AM IST
ಬೀದರ: ಮಹಾರಾಷ್ಟ್ರದ ಕಂಟಕದಿಂದ ಗಡಿ ನಾಡು ಬೀದರನಲ್ಲಿ ಕೋವಿಡ್ ಆರ್ಭಟ ಮುಂದುವರಿದಿದೆ. ಶುಕ್ರವಾರ ಮತ್ತೆ 10 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ ತ್ರಿಶತಕ ದಾಟಿದೆ. ಇನ್ನೊಂದೆಡೆ 22 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 308 ಆದಂತಾಗಿದೆ. ಇದರಲ್ಲಿ 6 ಜನ ಸಾವನ್ನಪ್ಪಿದ್ದರೆ, 203 ಜನ ಬಿಡುಗಡೆ ಹೊಂದಿದ್ದಾರೆ. 99 ಸಕ್ರೀಯ ಪ್ರಕರಣಗಳಿವೆ. ದೆಹಲಿ, ಮಹಾರಾಷ್ಟ್ರ ಸಂಪರ್ಕದಿಂದ ನಲುಗಿ ಹೋಗಿರುವ ಜಿಲ್ಲೆಗೆ ಈಗ ಮಧ್ಯಪ್ರದೇಶದ ನಂಟಿನ ಹೊಸ ಪ್ರಕರಣ ವರದಿಯಾಗಿದೆ. 10 ಜನ ಸೋಂಕಿತರೆಲ್ಲರೂ ಬಸವಕಲ್ಯಾಣ ತಾಲೂಕಿಗೆ ಸೇರಿದ್ದಾರೆ. ದಿನ ಕಳೆದಂತೆ ಪ್ರಕರಣಗಳು ಏರಿಕೆಯಾಗುತ್ತ ಬಸವಕಲ್ಯಾಣ ಕೋವಿಡ್ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಸೋಂಕಿತರಲ್ಲಿ ನಾಲ್ಕು ವರ್ಷದ 2 ಹಾಗೂ 7 ವರ್ಷದ ಒಬ್ಬ ಮಕ್ಕಳು ಸೇರಿದ್ದಾರೆ. 27 ವರ್ಷದ ಪುರುಷ (ಪಿ-6328), 24 ವರ್ಷದ ಪುರುಷ (ಪಿ-6329), 7 ವರ್ಷದ ಬಾಲಕ (ಪಿ-6330), 34 ವರ್ಷದ ಮಹಿಳೆ (ಪಿ-6331), 4 ವರ್ಷದ ಮಗು (ಪಿ-6332), 35 ವರ್ಷದ ಮಹಿಳೆ (ಪಿ-6363), 4 ವರ್ಷದ ಬಾಲಕಿ (ಪಿ-6364), 25 ವರ್ಷದ ಪುರುಷ (ಪಿ-6335) ಮತ್ತು 56 ವರ್ಷದ ಮಹಿಳೆ (ಪಿ-6337) ರೋಗಿಗಳು ಮಹಾರಾಷ್ಟ್ರದ ನಂಟು ಹೊಂದಿದ್ದರೆ, 55 ವರ್ಷದ ಪುರುಷ (ಪಿ-6336) ರೋಗಿ ಮಧ್ಯ ಪ್ರದೇಶದ ಸಂಪರ್ಕಕ್ಕೆ ಬಂದಿದ್ದರಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ದೃಢಪಡಿಸಿದೆ.
3856 ಮಂದಿ ವರದಿ ಬಾಕಿ: ಬೀದರ ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಶಂಕಿತ 3856 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ. ಈವರೆಗೆ 31,611 ಜನರ ಸ್ಯಾಂಪಲ್ ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 27,447 ಮಂದಿಯದ್ದು ನೆಗೆಟಿವ್ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 2837 ಮತ್ತು ದ್ವಿತೀಯ ಸಂಪರ್ಕಿತ 4100 ಜನರನ್ನು ಗುರುತಿಸಲಾಗಿದೆ. ಕೋವಿಡ್ ಶಂಕಿತ 125 ಜನರು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.