ಅನಧಿಕೃತ ಧಾರ್ಮಿಕ ಕೇಂದ್ರಗಳಿಗೆ ಕಂಟಕ
ಸುಪ್ರೀಂ ಆದೇಶದನ್ವಯ ಕ್ರಮನಗರಸಭೆಯಿಂದ ಕಾರ್ಯಾಚರಣೆ18 ಸ್ಥಳ ಪಟ್ಟಿ -6 ಕೇಂದ್ರ ತೆರವು
Team Udayavani, Mar 5, 2020, 12:01 PM IST
ಬೀದರ: ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳಿಗೆ ಇದೀಗ ಕಂಟಕ ಶುರುವಾಗಿದೆ. ಸುಪ್ರೀಂ ಕೋರ್ಟ್ ಆದೇಶದನ್ವಯ ಬೀದರ ನಗರದಲ್ಲಿ ಬಿಗಿ ಬಂದೋಬಸ್ತ್ನಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಇದರಿಂದ ಅನಧಿಕೃತವಾಗಿ ನೆಲೆ ಕಂಡ ಧಾರ್ಮಿಕ ಕೇಂದ್ರಗಳು ಸ್ಥಳ ಬಿಟ್ಟು ಕದಲಬೇಕಾದ ಸ್ಥಿತಿ ಎದುರಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಉದ್ಯಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ 18 ಧಾರ್ಮಿಕ ಕಟ್ಟಡಗಳನ್ನು ನಗರಸಭೆ ಪಟ್ಟಿ ಮಾಡಿದೆ. ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದಂತೆ 2009ರ ನಂತರ ನಿರ್ಮಾಣವಾದ ದೇವಸ್ಥಾನ, ಚರ್ಚ್ ಹಾಗೂ ಇತರ ಧಾರ್ಮಿಕ ಕೇಂದ್ರಗಳ ಕಟ್ಟಡಗಳು ತೆರವು ಪಟ್ಟಿಯಲ್ಲಿ ಸೇರಿವೆ. ಮಂಗಳವಾರ ನಗರಸಭೆಯಿಂದ 6 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ. ಧಾರ್ಮಿಕ ಕಟ್ಟಡ, ಕಟ್ಟೆಗಳನ್ನು ಅಕ್ರಮವಾಗಿ ನಿರ್ಮಿಸಿರುವ ಕುರಿತು ಕೆಲವು ಬಾರಿ ನಗರಸಭೆಯಿಂದ ಈ ಹಿಂದೆ ಸೂಚನೆ ನೀಡಲಾಗಿತ್ತು. ಆದರೆ, ಅದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ನಗರಸಭೆ ಪೌರಾಯುಕ್ತ ಬಿ. ಬಸಪ್ಪ ಮತ್ತು ತಹಶೀಲ್ದಾರ್ ಕೀರ್ತಿ ಚಾಲಕ ಅವರ ನೇತೃತ್ವದಲ್ಲಿ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಕೆಲವು ಕಡೆ ಕಾರ್ಯಾಚರಣೆಗೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿತ್ತಾದರೂ ನಂತರ ಕೋರ್ಟ್ ಆದೇಶ ಕುರಿತು ಮನವೊಲಿಕೆ ಬಳಿಕ ತೆರವು ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ನಗರದ ಯಾವ್ಯಾವ ಕೇಂದ್ರ: ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ 18 ಧಾರ್ಮಿಕ ಕೇಂದ್ರಗಳಲ್ಲಿ 7 ದೇವಸ್ಥಾನ, 1 ಚರ್ಚ್ ಮತ್ತು 10 ಇತರೆ ಕಟ್ಟೆಗಳು ಸೇರಿವೆ. ಇದರಲ್ಲಿ ಎಸ್‌ಬಿಎಚ್ ಬ್ಯಾಂಕ್ ಕಾಲೋನಿ ಉದ್ಯಾನದ ರಾಮಲಿಂಗೇಶ್ವರ ಮಂದಿರ, ಟಿಡಿಬಿ ಕಾಲೋನಿ ಕ್ರಾಸ್ (ಪ್ಲಾಟ್‌ಫಾರ್ಮ್), ಶಹಾಪುರ ಗೇಟ್‌ನ ಅಂಬೇಡ್ಕರ (ಪ್ಲಾಟ್‌ಫಾರ್ಮ್), ಗರೀಬ್ ಕಾಲೋನಿ ಕಟ್ಟೆ- ಧ್ವಜ, ಕಾನನ ಕಾಲೋನಿ ಕ್ರಾಸ್ (ಧ್ವಜ), ಮೈಲೂರು ಸಿಎಂಸಿ ಕಾಲೋನಿ ಅಂಬೇಡ್ಕರ್ ಭಾವಚಿತ್ರ, ಕ್ರಾಸ್ ಕಟ್ಟೆ ಮತ್ತು ಅಂಬೇಡ್ಕರ್ (ಪ್ಲಾಟ್ ಫಾರ್ಮ್), ಮೈಲೂರು ಉದ್ಯಾನ ಹಸಿರು ಧ್ವಜ (ಪ್ಲಾಟ್‌ಫಾರ್ಮ್), ವಡ್ಡರ ಕಾಲೋನಿ ಸಿದ್ರಾಮೇಶ್ವರ ಚೌಕ್, ಸಾಯಿ ನಗರದ ಚರ್ಚ್, ನೌಬಾದ್‌ನ ತಲಾಟಿ ಲೇಔಟ್‌ನ ಹನುಮಾನ ಮಂದಿರ ಮತ್ತು ಗಣೇಶ ಮಂದಿರ, ಕೆಐಎಡಿಬಿ ಲೇಔಟ್‌ನ ಹನುಮಾನ ಮಂದಿರ, ನೌಬಾದ್ ತರಬೇತಿ ಕೇಂದ್ರದ ಬಳಿಯ ಶಿವಶರಣ ಮಾದಾರ ಚನ್ನಯ್ಯ ಭಾವಚಿತ್ರ, ಆಟೋ ನಗರದ ಬಲಭೀಮ ಮಂದಿರ ಮತ್ತು ಹೆಗ್ಗೆ ಲೇಔಟ್ ನ ಹನುಮಾನ ಮಂದಿರ ಪಟ್ಟಿಯಲ್ಲಿವೆ.
ಮಂಗಳವಾರ ನೌಬಾದ್ ಸಾಯಿ ನಗರದ ಚರ್ಚ್, ಸೈಯಾದ್ರಿ ಲೇಔಟ್‌ನ ಗಣೇಶ ಮಂದಿರ, ಆಟೋ ನಗರದ ಜೈ ಶ್ರೀ ಬಲಭೀಮ ಮಂದಿರ, ತಲಾಟಿ ಲೇಔಟ್‌ನ ಗಣೇಶ ಮಂದಿರ, ಕೆಐಎಡಿಬಿ ಲೇಔಟ್ ಮತ್ತು ಬಿಎಸ್‌ಎಸ್‌ಕೆ ಲೇಔಟ್‌ನ ಹನುಮಾನ ಮಂದಿರಗಳನ್ನು ತೆರವು ಮಾಡಲಾಗಿದೆ. ಉಳಿದ ಧಾರ್ಮಿಕ ಕೇಂದ್ರಗಳನ್ನು ಪಿಯುಸಿ ಪರೀಕ್ಷೆ ಬಳಿಕ ತೆರವುಗೊಳಿಸಲು ನಗರಸಭೆ ನಿರ್ಧರಿಸಿದೆ. ಕಾರ್ಯಾಚರಣೆ ವೇಳೆ ಸ್ಥಳೀಯ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಲಾಗಿರುವ 18 ಧಾರ್ಮಿಕ ಕಟ್ಟಡಗಳ ಪಟ್ಟಿ ಮಾಡಲಾಗಿದ್ದು, ಮಂಗಳವಾರ 6 ಕಟ್ಟಡಗಳನ್ನು ತೆರವು ಮಾಡಲಾಗಿದೆ. ಇನ್ನುಳಿದ ಕೇಂದ್ರಗಳ ಕಾರ್ಯಾಚರಣೆಯನ್ನು ಪಿಯಸಿ ಪರೀಕ್ಷೆ ಬಳಿಕ ಕೈಗೊಳ್ಳಲಾಗುವುದು. ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಿದ ಬಳಿಕ ದೇವರ ವಿಗ್ರಹ ಮತ್ತು ಸಾಮಗ್ರಿಗಳು ನಗರಸಭೆ ವಶಕ್ಕೆ ಪಡೆದುಕೊಂಡಿದ್ದು, ಸ್ಥಳೀಯ ನಿವಾಸಿಗರು ಕೇಳಿದರೇ ಅವರಿಂದ ಮುಚ್ಚಳಿಕೆ ಬರೆದುಕೊಂಡು
ಅವರ ಸುಪರ್ಧಿಗೆ ನೀಡಲಾಗುವುದು.
ಬಿ. ಬಸಪ್ಪ,
ನಗರಸಭೆ ಪೌರಾಯುಕ್ತ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.