ಬೀದರಿನ ಕೀರ್ತನಾ ಅಮೆರಿಕ ವಿವಿ ರಾಯಭಾರಿ…ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ
Team Udayavani, Feb 22, 2021, 9:26 PM IST
ಬೀದರ್ : ಬೀದರಿನ ಎಂಜಿನಿಯರಿಂಗ್ ಪದವೀಧರೆ ಕೀರ್ತನಾ ಡಿ. ಕೋಳೆಕರ್ , ಅಮೆರಿಕದ ಪ್ರತಿಷ್ಠಿತ ‘ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್ ನ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಬೀದರನಲ್ಲಿ ನೆಲೆಸಿರುವ 26 ವರ್ಷದ ಕೀರ್ತನಾ ಅಮೆರಿಕದ ಕಾಲಮಾನದಲ್ಲಿ ಆನ್‌ಲೈನ್ ಮೂಲಕ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಯ ವಿವಿಧ ಕೋರ್ಸ್‌ಗಳು, ಉತ್ಕೃಷ್ಟ ಶೈಕ್ಷಣಿಕ ಗುಣಮಟ್ಟ ಹಾಗೂ ಸೌಕರ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕೀರ್ತನಾ ಅವರು ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್‌ನಲ್ಲಿ ಎರಡು ವರ್ಷಗಳ ಮಾಸ್ಟರ್ಸ್ ಇನ್ ಇನ್ಫಾರ್ಮೆಷನ್ ಸಿಸ್ಟಂ ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದು, ಡಿಸೆಂಬರ್‌ನಲ್ಲಿ ಅವರ ಕೋರ್ಸ್ ಪೂರ್ಣಗೊಳ್ಳಲಿದೆ.
ನಗರದ ವಕೀಲ ದಾದಾರಾವ್ ಕೋಳೆಕರ್ ಹಾಗೂ ದಿ.ಪ್ರೊ. ಅಲ್ಕಾ ಕೋಳೆಕರ್ ದಂಪತಿಯ ಪುತ್ರಿ ಕೀರ್ತನಾ, ಬೀದರನ ಗುರುನಾನಕ ಸಂಸ್ಥೆಯಲ್ಲಿ ಪ್ರೌಢ, ಕಾಲೇಜು ಶಿಕ್ಷಣ ಮುಗಿಸಿ, ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ಸ್‌ನಲ್ಲಿ ಪದವಿ ಪಡೆದಿದ್ದಾರೆ.
ವಿವಿ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾಗಿದ್ದಕ್ಕೆ ಬಹಳ ಸಂತಸವಾಗಿದೆ. ನಾನು 2020ನೇ ಸಾಲಿನ ಮೊದಲ ರಾಯಭಾರಿ ಆಗಿರುವುದನ್ನು ವಿಶ್ವವಿದ್ಯಾಲಯ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕೋವಿಡ್ ಸಂದರ್ಭದಲ್ಲಿನ ಕಾರ್ಯಕ್ಕಾಗಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪರಿಶ್ರಮ ವಹಿಸಿ ವ್ಯಾಸಂಗ ಮಾಡಿದರೆ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಬಹುದು. ತಂದೆ, ತಾಯಿ, ಕಲಿತ ಶಾಲೆ, ಕಾಲೇಜು ಹಾಗೂ ಊರಿಗೂ ಕೀರ್ತಿ ತರಬಹುದು ಎಂದು ಹೇಳಿದ್ದಾರೆ.
ಸನ್ಮಾನ: ಅಮೇರಿಕ ಪ್ರತಿಷ್ಠಿತ ವಿಶ್ವವಿದ್ಯಾಲಯದ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾದ ಪ್ರಯುಕ್ತ ಕೀರ್ತನಾ ಅವರನ್ನು ನಗರದಲ್ಲಿ ವಕೀಲರಾದ ವೀರಶೆಟ್ಟಿ ಭಂಡೆ, ಕೆ. ಕಾಶೀನಾಥ, ಬಾಬುರಾವ್ ಎಂ.ಪಾಟೀಲ ಹಾಗೂ ನಿವೃತ್ತ ಶಿಕ್ಷಕಿ ವಿಮಲಾ ಪಾಟೀಲ ಸನ್ಮಾನಿಸಿದರು. ಬೀದರ ಪ್ರತಿಭೆ ಅಮೆರಿಕದ ವಿವಿಯೊಂದರ ರಾಯಭಾರಿ ಆಗಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.