ಬ್ರಿಮ್ಸ್ ನಲ್ಲಿ ತಪ್ಪಿ ದ ಭಾರೀ ಆಕ್ಸಿಜನ್ ದುರಂತ
Team Udayavani, May 11, 2021, 10:07 AM IST
ಬೀದರ: ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿ ಕಾರಿಗಳ ಸಮಯಪ್ರಜ್ಞೆ, ಪರಿಶ್ರಮದ ಪರಿಣಾಮ ಸೋಮವಾರ ನಗರದ ಬ್ರಿಮ್ಸ್ (ಕೋವಿಡ್) ಆಸ್ಪತ್ರೆಯಲ್ಲಿ ಚಾಮರಾಜನಗರ ಜಿಲ್ಲೆ ಮಾದರಿಯಲ್ಲಿ ಸಂಭವಿಸುತ್ತಿದ್ದ ಭಾರೀ ಅನಾಹುತ ತಪ್ಪಿದೆ.
ಸಕಾಲಕ್ಕೆ ಆಮ್ಲಜನಕ ಪೂರೈಕೆಗೆ ದಿಟ್ಟ ಕ್ರಮ ವಹಿಸುವ ಮೂಲಕ 100ಕ್ಕೂ ಹೆಚ್ಚು ಸೋಂಕಿತರ ಅಮೂಲ್ಯ ಜೀವ ಉಳಿಸಿದ್ದಾರೆ. ಬ್ರಿಮ್ಸ್ ಆಸ್ಪತ್ರೆಗೆ ಬೆಳಗ್ಗೆ 8 ಗಂಟೆಗೆ ಬಳ್ಳಾರಿಯ ಜಿಂದಾಲ್‌ನಿಂದ ಆಗಮಿಸಬೇಕಿದ್ದ ಆಕ್ಸಿಜನ್ ಹೊತ್ತ ಟ್ಯಾಂಕರ್ ತಾಂತ್ರಿಕ ಕಾರಣಗಳಿಂದ ತಡವಾಗಿರುವುದು ಬ್ರಿಮ್ಸ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆತಂಕ ತಂದೊಡ್ಡಿದ್ದು, ಇದು ಬೀದರ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಆದರೆ, ಜಿಲ್ಲಾ ಧಿಕಾರಿ ರಾಮಚಂದ್ರನ್ ಆರ್. ನೇತೃತ್ವದ ಅಧಿ ಕಾರಿ ಮತ್ತು ವೈದ್ಯರ ತಂಡದ ಮುನ್ನೆಚ್ಚರಿಕೆ ನಡೆಯಿಂದ ದೊಡ್ಡ ದುರಂತ ಆಗುವುದು ತಪ್ಪಿದಂತಾಗಿದೆ.
ಸುಮಾರು 550 ಕೋವಿಡ್ ಹಾಸಿಗೆ ಆಸ್ಪತ್ರೆಯಲ್ಲಿ 490 ಆಕ್ಸಿಜನ್ ಮತ್ತು 82 ವೆಂಟಿಲೇಟರ್ ವ್ಯವಸ್ಥೆ ಹೊಂದಿರುವ ಬೆಡ್‌ಗಳಿದ್ದು, ಆಸ್ಪತ್ರೆ ಆವರಣದಲ್ಲಿ 12 ಕೆ.ಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ವ್ಯವಸ್ಥೆ ಇದೆ. ಸದ್ಯ 300ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 100ಕ್ಕೂ ಹೆಚ್ಚು ಜನ ಆಕ್ಸಿಜನ್ ವೆಂಟಿಲೇಟರ್ ಮೇಲೆ ಉಸಿರಾಡುತ್ತಿದ್ದಾರೆ. ಇಂದು ಬೆಳಗ್ಗೆ ಎರಡೂ¾ರು ಗಂಟೆ ಸಾಕಾಗುವಷ್ಟೇ ಮಾತ್ರ ಆಮ್ಲಜನಕ ಲಭ್ಯತೆ ಇತ್ತು. ಆದರೆ, ಸಿಂದಗಿ ಬಳಿ ಬ್ರೇಕ್ ಫೇಲ್‌ದಿಂದಾಗಿ ಆಮ್ಲಜನಕದ ಟ್ಯಾಂಕರ್ ಬಾರದಿರುವುದು ಆಕ್ಸಿಜನ್ ಕೊರತೆಗೆ ಕಾರಣವಾಗಿತ್ತು.
ಇದರಿಂದ ಅ ಧಿಕಾರಿ ವರ್ಗದವರಲ್ಲಿ ತಳಮಳ ಹೆಚ್ಚಿಸಿತ್ತು. ಆಕ್ಸಿಜನ್ ವಾಹನ ತಡವಾದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಬ್ರಿಮ್ಸ್‌ನತ್ತ ದೌಡಾಯಿಸಿತು. ಕೂಡಲೇ ಎಚ್ಚೆತ್ತ ಬ್ರಿಮ್ಸ್ ಹಿರಿಯ ವೈದ್ಯ ಅ ಧಿಕಾರಿಗಳ ನಾಲ್ಕು ತಂಡಗಳನ್ನಾಗಿ ಮಾಡಿ ತ್ವರಿತ ಕಾರ್ಯಾಚರಣೆ ಮೂಲಕ ಪರಿಸ್ಥಿತಿ ನಿಭಾಯಿಸಿದ್ದಾರೆ. ಆಕ್ಸಿಜನ್ ಕೊರತೆ ಆಗದಂತೆ ಅಕ್ಕ ಪಕ್ಕದ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಸಿಲಿಂಡರ್‌ಗಳ ವ್ಯವಸ್ಥೆ ಮಾಡಿ, ಬ್ರಿಮ್ಸ್ ನ ಎರಡು ಪ್ರತ್ಯೇಕ ಕಟ್ಟಡಗಳಲ್ಲಿರುವ ಕೋವಿಡ್ ರೋಗಿಗಳಿಗೆ ಉಸಿರಾಡಲು ಪ್ರಾಣವಾಯು ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ.
ನಂತರ ಕಲಬುರಗಿ ಜಿಲ್ಲಾಡಳಿತ ಸಂಪರ್ಕಿಸಿ ಅಲ್ಲಿಗೆ ತೆರಳಬೇಕಿದ್ದ ಆಕ್ಸಿಜನ್ ವಾಹನವನ್ನು ತುರ್ತಾಗಿ ಬೀದರಗೆ ನೇರವಾಗಿ ಕಳುಹಿಸುವಂತೆ ಸ್ಥಳೀಯ ಜಿಲ್ಲಾಡಳಿತ ಮನವಿ ಮಾಡಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಕ್ಸಿಜನ್ ಟ್ಯಾಂಕ್ ಬಂದು ತಲುಪಿದ್ದು, ಅಧಿ ಕಾರಿ ಮತ್ತು ವೈದ್ಯರು ನಿಟ್ಟಿಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.