ಕ್ಷೇತ್ರಾಭಿವೃದ್ಧಿಗೆ “ಸಲಗರ’ ಏಕಮೇವ ಆಯ್ಕೆ
| ವಿವಿಧೆಡೆ ಬಿಜೆಪಿಯಿಂದ ಅಬ್ಬರದ ಪ್ರಚಾರ | ಮತ ನೀಡುವಂತೆ ಬಿಜೆಪಿ ಅಭ್ಯರ್ಥಿ ಮನವಿ
Team Udayavani, Apr 5, 2021, 7:35 PM IST
ಬಸವಕಲ್ಯಾಣ: ಕ್ಷೇತ್ರದ ಅಭಿವೃದ್ಧಿ ಆಗಬೇಕಾದರೆ ನಿಮ್ಮ ಆಯ್ಕೆ ಶರಣು ಸಲಗರ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರ ನಾಗದೆ ಹೇಳಿದರು. ತಾಲೂಕಿನ ತಳಭೋಗ ಗ್ರಾಮದಲ್ಲಿ ರವಿವಾರ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ರೈತರು, ಮಹಿಳೆಯರು, ದೀನ ದಲಿತರಿಗೆ ಹಲವು ಯೋಜನೆ ರೂಪಿಸಿದೆ. ಆತ್ಮನಿರ್ಭರ ಯೋಜನೆ ಪರಿಚಯಿಸಿ ಕೆಳ ವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಿದೆ ಎಂದರು.
ಅಭ್ಯರ್ಥಿ ಶರಣು ಸಲಗರ ಮಾತನಾಡಿ, ಬಿಜೆಪಿಯಿಂದ ಶರಣು ಸಲಗರ ಅವರಿಗೆ ಟಿಕೆಟ್ ಸಿಗಬೇಕೆಂದು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ದೇವರ ಮೊರೆ ಹೋಗಿ ಅನೇಕ ಹೋಮ-ಹವನ, ಪೂಜೆ-ಭಜನೆ, ಪಾದಯಾತ್ರೆ, ದೀಡ್ ನಮಸ್ಕಾರ ಹಾಗೂ ತೆಂಗಿನ ಕಾಯಿ ಒಡೆದಿದ್ದಾರೆ. ಇದರ ಪ್ರತಿಫಲ ಎಂಬಂತೆ ನಾನಿಂದು ನಿಮ್ಮ ಮುಂದೆ ನಿಂತಿದ್ದೇನೆ. ನಾನು ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ ಶಾಸಕನಾಗಿರುವುದಿಲ್ಲ; ಸದಾ ನಿಮ್ಮ ಸೇವಕನಾಗಿರುತ್ತೇನೆ. ಸಮಸ್ಯೆ ಪರಿಹಾರಕ್ಕೆ ಶಾಸಕರನ್ನು ಹುಡುಕಿ ಅಲೆದಾಡುವಂತಿಲ್ಲ. ನಾನೇ ಸ್ವತಃ ನಿಮ್ಮೂರಿಗೆ ಬರುವೆ ಎಂದರು.
ಚೌಕಿವಾಡಿ, ಚೌಕಿವಾಡಿ ತಾಂಡಾ, ರಾಮತೀರ್ಥ (ಕೆ), ಕೊಂಗೆವಾಡಿ, ಚಂಡಕಾಪುರ, ಉಮಾಪುರ, ಹಳ್ಳಿ, ನಿಲಕಂಠವಾಡಿ, ಖಾನಾಪುರವಾಡಿಯಲ್ಲಿ ಪ್ರಚಾರ ನಡೆಸಿದರು. ಈ ವೇಳೆ ತಳಭೋಗ ಗ್ರಾಮದ ನವನಾಥ ಸಾಳುಂಕೆ, ಕರಣ ಮಾನೆ, ರಾಮ ಮಾನೆ, ಲಕ್ಷ್ಮಣ ಪಾಟೀಲ್, ದೇವದಾಸ ಮಾನೆ, ರವಿ ಫುಲಾರೆ, ನವನಾಥ ರಾಠೊಡ, ಚೌಕಿವಾಡಿಯ ವಿಠuಲ್ ರೆಡ್ಡಿ, ಬಾಲಾಜಿ ರೆಡ್ಡಿ, ಸಂಜು ಪಾಟೀಲ್, ಅಂಗದ್ ಪಾಟೀಲ್, ಮೋಹನ ರೆಡ್ಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.