ದೇಶಕ್ಕೆ ಸ್ವಾತಂತ್ರ್ಯಾ ಸಿಕ್ಕಾಗಹೈ.ಕ.ದಲ್ಲಿ ರಕ್ತಕಣ್ಣೀರು


Team Udayavani, Sep 17, 2018, 11:18 AM IST

untitled-1.jpg

ಬೀದರ: ಸುದೀರ್ಘ‌ ಹೋರಾಟದ ಫಲವಾಗಿ ನಮ್ಮ ದೇಶ 15ನೇ ಆಗಸ್ಟ್‌ 1947ರಲ್ಲಿ ಸ್ವಾತಂತ್ರ್ಯಾ ಪಡೆದು ಹರ್ಷದಲ್ಲಿದ್ದಾಗ ಹೈದ್ರಾಬಾದ-ಕರ್ನಾಟಕದ ಜನರ ಕಣ್ಣಲ್ಲಿ ರಕ್ತಕಣ್ಣೀರು ಹರಿಯುತ್ತಿತ್ತು. ಹೈದ್ರಾಬಾದ್‌ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದ ಬೀದರ, ಕೊಪ್ಪಳ, ರಾಯಚೂರು, ಕಲಬುರಗಿ ಹಾಗೂ ಇತರೆ ಪ್ರದೇಶಗಳು 13 ತಿಂಗಳ
ನಂತರ ಸ್ವಾತಂತ್ರ್ಯಾ ಪಡೆದಿದ್ದು, ಅನೇಕ ಹೋರಾಟಗಾರರು ಪ್ರಾಣ ಬಲಿದಾನ ಮಾಡಿದ್ದಾರೆ.

1947ರಲ್ಲಿ ಇಡೀ ದೇಶ ಹರ್ಷದಿಂದ ಸ್ವಾತಂತ್ರ್ಯಾದ ಸಂಭ್ರಮಾಚರಣೆ ನಡೆಸುತ್ತಿದ್ದರೆ, ಹೈದ್ರಾಬಾದ-ಕರ್ನಾಟಕ ಭಾಗದ ಜನರು ಮಾತ್ರ ಸ್ವಾತಂತ್ರ್ಯಾದ ಭಾಗ್ಯ ದೊರೆಯದೆ ನಕರ ಯಾತನೆ ಅನುಭವಿಸುತ್ತಿದ್ದರು. ತ್ರಿವರ್ಣ ಧ್ವಜ ಹಾರಿಸುವ ಹಕ್ಕು ಕೂಡ ಇಲ್ಲಿನ ಜನರಿಗೆ ಆ ಸಂದರ್ಭದಲ್ಲಿ ಇರಲಿಲ್ಲ. ಜಿಲ್ಲೆಯ ವಿವಿಧೆಡೆ ಧ್ವಜಾರಣಕ್ಕೆ ಮುಂದಾದ ಹೋರಾಟಗಾರನ್ನು ಬಂಧಿಸಿ ಜೈಲಿಗೆ ಹಾಕಿದ ಘಟನೆಗಳು ಇಲ್ಲಿ ನಡೆದಿದ್ದು, ಜಿಲ್ಲೆಯ ಅದೆಷ್ಟೊ ಜನ ವಿಮೋಚನಾ
ಚಳವಳಿಯಲ್ಲಿ ಪಾಲ್ಗೊಂಡು, ಜೈಲುವಾಸ ಅನುಭವಿಸಿದ್ದಾರೆ. ಹತ್ಯಾಕಾಂಡಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ಈ ಭಾಗದ ಜಲಿಯನ್‌ವಾಲಾಬಾಗ್‌ ಎಂದೇ ಇಲ್ಲಿನ ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ ಮಾನವೀಯತೆ ಮರೆತ ರಜಾಕಾರರು ನೂರಾರು ಜನರನ್ನು ಸಜೀವ ದಹನ ಮಾಡಿ ಕ್ರೌರ್ಯ ಮೆರೆದಿದ್ದರು. ಸ್ವಾತಂತ್ರ್ಯಾಕ್ಕಾಗಿ ಜಿಲ್ಲೆಯ ಅನೇಕ ಹೋರಾಟಗಾರರು ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಅವರ ಕುಟುಂಬಗಳು ನರಕ ಯಾತನೆ ಅನುಭವಿಸಿರುವ ಕುರಿತು, ರಜಾಕಾರರ ದಬ್ಟಾಳಿಕೆಗೆ ಸಿಲುಕಿ ಶೋಷಣೆ ಅನುಭವಿಸಿರುವುದು ವಿವಿಧ ಗ್ರಂಥಗಳಲ್ಲಿ ಉಲ್ಲೆಖವಾಗಿದೆ.

ಮಾಹಿತಿ ಕೊರತೆ: ನಾವು ದೇಶದ ಮಹಾನ್‌ ನಾಯಕರನ್ನು, ಸ್ವಾತಂತ್ರ್ಯಾ ಹೋರಾಟಗಾರರನ್ನು ಗುರುತಿಸುತ್ತೇವೆ. ಅವರ ಇತಿಹಾಸ ಅರಿಯುವ ಪ್ರಯತ್ನವನ್ನು ಮಾಡುತ್ತೇವೆ. ಆದರೆ, ಹೈದ್ರಾಬಾದ- ಕರ್ನಾಟಕ ಭಾಗದ ಹೋರಾಟ ಕುರಿತು ಈ ಭಾಗದ ಯುವಕರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪರಿಪೂರ್ಣ ಮಾಹಿತಿ ಕೊರತೆ ಇದೆ. ವಿಮೋಚನಾ ಚಳವಳಿಯ ಕುರಿತು ಯಾವುದೇ ಪಠ್ಯಪುಸ್ತಕದಲ್ಲಿ ಪೂರ್ಣ ಇತಿಹಾಸ ಸಾರವ ಕೆಲಸ ಆಗದ ಹಿನ್ನೆಲೆಯಲ್ಲಿ ಅನೇಕ ಹೋರಾಟಗಾರರ ಇತಿಹಾಸ ಅವರ, ಕುಟುಂಬಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ.

ಕನ್ನಡ ಶಾಲೆ: ನಿಜಾಮನ ಆಡಳಿತದಲ್ಲಿ ಉರ್ದು ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಕೂಡ ಅಪೂರಾಧವಾಗಿತ್ತು. ಈ ಹಿಂದಿನ ಹಿರಿಯರು ಉರ್ದು ಭಾಷೆಯ ಪತ್ರಿಕೆಗಳನ್ನು ಅತಿ ಸರಳವಾಗಿ ಓದುವ ಜೊತೆಗೆ, ಉದ್ಯೋಗದಲ್ಲಿ ಕೂಡ ಉರ್ದು ಭಾಷೆ ಬಳಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಕೂಡ ಗೋರ್ಟಾ ಹಿರೇಮಠ, ಭಾಲ್ಕಿ ಹಿರೇಮಠ ಸೇರಿದಂತೆ ವಿವಿಧೆಡೆ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸಿದ್ದಾರೆ. ಹೊರಗೆ ಉರ್ದು ಭಾಷೆಯ ನಾಮ ಫಲಕ ಹಾಕಿ, ಒಳಗೆ ಕನ್ನಡ ಭಾಷೆಯ ಬೋಧನೆ ಮಾಡಿದ ಪರಿಣಾಮ ಈ ಭಾಗದಲ್ಲಿ ಕನ್ನಡ ಉಳಿದಿದೆ. ಇಂದಿಗೂ ಕೂಡ
ಬೀದರ ಜಿಲ್ಲೆಯಲ್ಲಿ ಕನ್ನಡ, ಉರ್ದು, ಹಿಂದಿ, ಮರಾಠಿ ಭಾಷೆಗಳ ಪ್ರಭಾವ ಇದ್ದು, ಮಾತನಾಡುವ ಸಂದರ್ಭದಲ್ಲಿ ಆ ನಾಲ್ಕು ಭಾಷೆಗಳ ಮಿಶ್ರಣವಾಗುತ್ತದೆ.

ಗುರುತಿಸುವ ಕಾರ್ಯವಾಗಲಿ: ಹೈ.ಕ. ವಿಮೋಚನೆಗಾಗಿ ಹೋರಾಟ ಮಾಡಿದ ಜಿಲ್ಲೆಯ ಅನೇಕ ಮುಖಂಡರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಯಾವ ಸರ್ಕಾರಗಳೂ ಇಂದಿಗೂ ಮುಂದೆ ಬಂದಿಲ್ಲ. ಪ್ರತಿವರ್ಷ ಕಲಬುರಗಿಗೆ ಮುಖ್ಯಮಂತ್ರಿಗಳು ಬಂದು ರಾಷ್ಟ್ರಧ್ವಜ ಹಾರಿಸುವ ವಾಡಿಕೆ ಇದೆಯಷ್ಟೆ. ಈ ಭಾಗದ ಹೋರಾಟಗಾರರ ಇತಿಹಾಸ ಸಾರುವ, ಅವರ ಸ್ಮಾರಕ ನಿರ್ಮಾಣ ಕುರಿತು ಯಾರೊಬ್ಬರೂ ಮುಂದಾಗದಿರುವುದು ಹೋರಾಟಗಾರರ ಕುಟುಂಬಗಳಿಗೆ ನೋವು ತಂದಿದೆ. ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡ ದಿ| ರಾಮಚಂದ್ರ ವೀರಪ್ಪ ಅವರು ಕೂಡ ಈ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಜೈಲು ಶಿಕ್ಷೆ ಅನುಭವಿಸಿದರು.

ಅವರ ನಿಧನದ ನಂತರ ಸರ್ಕಾರ ಅವರ ಸ್ಮಾರಕ ನಿರ್ಮಾಣ ಮಾಡುವ ಭರವಸೆ ನೀಡಿದ್ದು, ಇಂದಿಗೂ ಆ ಕಾರ್ಯ ನಡೆದಿಲ್ಲ. ಈ ಭಾಗದಲ್ಲಿ ಆರ್ಯ ಸಮಾಜ ಶಾಖೆಗಳನ್ನು ಸ್ಥಾಪಿಸಿದ ಭಾಯಿ ಬನಸ್ಸಿಲಾಲ್‌ ಹೋರಾಟಕ್ಕೆ ಹೊಸ ಸ್ವರೂಪ ನೀಡಿದರು. ವಕೀಲರಾದ ಇವರು ಸರ್ದಾರ ವಲ್ಲಭಭಾಯಿ ಪಟೇಲ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಇಲ್ಲಿನ ಕ್ರೌರ್ಯ, ನಿಜಾಮನ ದಬ್ಟಾಳಿಕೆ ಕುರಿತು ವಿವರಿಸಿ, ಸರ್ಕಾರದ ಗಮನ ಸೆಳೆಯ ಕೆಲಸ ಮಾಡಿದರು. ಇವರ ಕಾರ್ಯಕ್ಕೆ ಭಾಯಿ ಶಾಮಲಾಲ್‌ ಸಾಥ್‌ ನೀಡಿದರು. ಅಲ್ಲದೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಜನರು ಹೋರಾಟ ನಡೆಸಿದ್ದು, ಅವರ ಕಾರ್ಯಗಳನ್ನು ಗುರುತಿಸಿ, ಈ ಭಾಗದಲ್ಲಿ ವಿಶೇಷ ಸ್ಮಾರಕಗಳನ್ನು ನಿರ್ಮಿಸುವ ಕಾರ್ಯ ನಡೆಯಬೇಕಾಗಿದೆ.

ಆಪರೇಷನ್‌ ಪೋಲೊ: ಸ್ವತಂತ್ರ ಭಾರತದ ಒಕ್ಕೂಟ ಆಡಳಿತ ವ್ಯವಸ್ಥೆಗೆ ಸೇರದಿರಲು ನಿರ್ಧರಿಸಿದ ನಿಜಾಮ್‌ ಸೈನ್ಯ ಈ ಭಾಗದಲ್ಲಿ ಹಿಂಸೆಗೆ ಮುಂದಾಗಿತ್ತು. ಇಲ್ಲಿನ ಕ್ರೌರ್ಯದ ಮಾಹಿತಿ ಪಡೆದ ಅಂದಿನ ಗೃಹ ಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲ ಅವರು 1948 ಸೆ.13ಕ್ಕೆ ಆಪರೇಷನ್‌ ಪೋಲೊ ಎಂಬ ಹೆಸರಿನ ಕಾರ್ಯಾಚರಣೆ ಶುರು ಮಾಡಿದರು. ಸೊಲ್ಲಾಪೂರ, ಬೇಜವಾಡ ಮಾರ್ಗವಾಗಿ ಆರಂಭಗೊಂಡ ಕಾರ್ಯಚರಣೆ ಮೇಜರ್‌ ಜನರಲ್‌ ಜೆ.ಎನ್‌. ಚೌಧರಿಯವರ ನೇತೃತ್ವದಲ್ಲಿ ರಜಾಕಾರರ ಪಡೆಯ ವಿರುದ್ಧ ಹೋರಾಟ ನಡಯಿತು.

ಸತತ ಐದು ದಿನಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಸೆ.17ರ ಸಂಜೆ 5 ಗಂಟೆಯ ಸುಮಾರಿಗೆ ಹೈದ್ರಾಬಾದ್‌ ಸಂಸ್ಥಾನದ ಸೇನೆಯ ಮುಖ್ಯಸ್ಥ ಎಲ್‌.ಉದ್ರುಜ್‌ ಭಾರತೀಯ ಸೇನೆಗೆ ಶರಣಾದರು. ನಿಜಾಮನು ಭಾರತದ ಒಕ್ಕೂಟ ವ್ಯವಸ್ಥೆಗೆ ಹೈದ್ರಾಬಾದ್‌ -ಕರ್ನಾಟಕವನ್ನು ಅಧಿಕೃತವಾಗಿ ಸೇರಿಸಿ ಅಂಗೀಕಾರ ಪತ್ರಕ್ಕೆ ಸಹಿ ಹಾಕುವ ಮೂಲಕ ವಿಮೋಚನೆ ಹೊಂದಿ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗಿರುವುದು ಇತಿಹಾಸದಲ್ಲಿ ದಾಖಲಾಗಿದೆ.

ಹುಮನಾಬಾದ ತಾಲೂಕಿನ ಪ್ರಮುಖ ಹೋರಾಟಗಾರರು: ಭಾಯಿ ಬನ್ಸಿಲಾಲ್‌, ಭಾಯಿ ಶ್ಯಾಮಲಾಲ್‌, ಪಂಡಿತ ಶಿವಚಂದ್ರಜೀ ನೆಲ್ಲಗಿ, ಪುಂಡಲಿಕರಾವ್‌ ಆರ್ಯ, ಪಾಂಡುರಂಗ ಕುಕಡಾಲ, ಪಾಂಡುರಂಗ ಕಂದಿ, ತುಕಾರಾಮ ನಾರಾಯಣಪೇಟ್‌, ಕೀಶನರಾವ್‌ ಚಿಟಗುಪ್ಪಕರ್‌, ಕಾಶಿನಾಥರಾವ್‌ ಪಾಟೀಲ, ಇಂದ್ರಸಿಂಗ್‌ ರಾಜಪೂತ, ಕರಬಸಪ್ಪ ಹೆಗ್ಗೆ, ಬಸವರಾಜ ಬಗದಲಕರ್‌, ಶಿವರಾಮ ವೀರಪ್ಪ, ಲಿಂಗೊಜಿರಾವ್‌ ಕಾಮತಿಕರ್‌, ರಾಮಚಂದ್ರ ವೀರಪ್ಪ, ಮಾಣಿಕರಾವ್‌ ಭಂಡಾರಿ, ಮಲಶೆಟ್ಟೆಪ್ಪ ಬುಳ್ಳಾ, ಲಕ್ಷ್ಮಣ ವೀರಪ್ಪ, ಸಿದ್ರಾಮಪ್ಪ ಮಂಕಲ್‌, ಅಂಬಣ್ಣಾ ಸೆರಲಾ,
ಈಶ್ವರರಾವ್‌ ಮಹಿಂದ್ರಕರ್‌, ಬಸವರಾಜ ಪ್ರಭಾ, ಭೀಮರಾವ್‌ ಪಟವರ್ಧನ, ದತ್ತುರಾವ್‌ ಪುಟ್ಟಾಣಗಾರ್‌, ನರಸಿಂಗ್‌ರಾವ್‌, ಲಕ್ಷ್ಮಣರಾವ್‌, ರಾವಜಿರಾವ್‌ ಇಂಗಳೆ ಸೇರಿದಂತೆ ತಾಲೂಕಿನ ನೂರಾರು ಜನರು ಹಾಗೂ ಆರ್ಯ ಸಮಾಜದ ಪ್ರತಿನಿಧಿಗಳು ಹೋರಾಟದಲ್ಲಿ ಧುಮುಕಿದ್ದರು.

ಔರಾದ ತಾಲೂಕಿನ ಹೋರಾಟಗಾರರು: ಸಂಗವೀರ ಸೆಗೆದ್ದಾರ, ಸಂಗಪ್ಪ ಮಹಾಜನ, ಸೋಮನಾಥ ಸೆಗೆದ್ದಾರ, ಪಾಂಡುರಂಗ ಬಿರಾದರ, ನಾಗೋರಾವ್‌ ಇದ್ರಾಳೆ, ನಾಗಭೂಷಣ ಬಿಚಕುಂದೆ, ಚನ್ನವೀರ ಸ್ವಾಮಿ, ಚಂದ್ರಪಾಲಜಿ ಆರ್ಯ, ಗಣಪತರಾವ್‌ ಮೂಳೆ, ಮಾಧವರಾವ್‌ ಬಸನಾಳ, ವೈಜಿನಾಥ ಮಗಮೆ, ಜ್ಞಾನೋಬರಾವ್‌ ಜಾಧವ, ಅಣ್ಣಾರಾವ್‌ ಮುಚಳಂಬೆ, ಕಂಟ್ಟೆಪ್ಪ ಖಂಡೆ, ಶಂಕರಯ್ನಾ ಸ್ವಾಮಿ, ಬಸೆಟ್ಟಿ ಬೈರೆ, ಭೀಮರಾವ್‌ ಪಾಟೀಲ, ಮಾಧವರಾವ್‌ ಬಸನಾಳೆ, ವೀರಶೇಟ್ಟಿ ಸೆಗೆದಾರ ಸೇರಿದಂತೆ ಇನ್ನು ಅನೇಕ ಹೋರಾಟಗಾರು ಹೈ.ಕ. ವಿಮೋಚನೆಯಲ್ಲಿ ಸಕ್ರಿಯವಾಗಿ ಹೋರಾಟ ನಡೆಸಿದ್ದರು.

ಬಸವಕಲ್ಯಾಣ ತಾಲೂಕಿನ ಹೋರಾಟಗಾರರು: ಧರ್ಮಪ್ರಕಾಶ, ಸಿದ್ರಾಮಪ್ಪ ಪಟ್ಟೆ, ವೆಂಕಟರಾವ್‌ ಆರ್ಯ, ವೆಂಕಟರಾವ್‌ ಜಗತಾಪ, ರಾಮನಂದಜೀ ಲಾಡ್‌, ವಿಠೊಬಾ ನಿರೋಡೆ, ವಿಶ್ವನಾಥರಾವ್‌ ಗರ್ಜೆ, ಮಾರುತಿ ಮಡಿವಾಳ, ಮಹಾರುದ್ರಪ್ಪ ಪಟ್ಟೆ, ಚಂದ್ರಕಾಂತರಾವ್‌ ಮೇತ್ರಸ್ಕರ್‌, ನರಸಿಂಗರಾವ್‌ ಥೆಂಮಗಳೆ, ನರಸಿಂಗರಾವ್‌ ನೆಳಗಿ, ನರಸಿಂಗ್‌ ಮಹೇಂದ್ರಕರ್‌, ಬಾಬುರಾವ್‌ ಕ್ಷೀರಸಾಗರ, ಭೀಮರಾವ್‌ ಮಾಳೆ, ಮಲ್ಲಾರೆಡ್ಡಿ ಮುಡಬಿ, ಗೋಖುಲಸಿಂಗ್‌ ಚವ್ಹಾಣ, ಪಂಡಿತ ಗೋಪಾಲದೇವ ಶಾಸ್ತ್ರಿ, ಗೋಪಾಲರಾವ್‌ ಮುಡಗಿ, ಗುಂಡಪ್ಪಾ ಬುಕ್ಕಾ, ಗಣಪತರಾವ್‌ ಸಿಂಧೆ, ಕಾಶೆಪ್ಪಾ ಭಾಲ್ಕೆ, ಉದಯಭಾನುಜೀ, ಈಶ್ವರಾವ್‌ ಜಗತಾಪ ಸೇರಿದಂತೆ ನೂರಾರು ಹೋರಾಟಗಾರರು ಇದ್ದರು.

ಭಾಲ್ಕಿ ತಾಲೂಕಿನ ಹೋರಾಟಗಾರರು: ಅಂಬಾದಾಸರಾವ್‌ ಗುಂಡೆರಾವ್‌, ಗುರುಲಿಂಗಪ್ಪ ಮೋದಿ, ಚನ್ನಪ್ಪ ಡಾಕ್ಟರ್‌,
ಗೋವಿಂದರಾವ್‌ ಬಿರಾದರ, ಧೂಳಪ್ಪ ಕಾಂಬಳೆ, ಜಗನ್ನಾಥ ನಾಯಕ, ಧೂಳಪ್ಪ ಗುಳಶೆಟ್ಟಿ, ನರಸಿಂಗರಾವ್‌ ಹಸೂರೆ, ಪ್ರಹ್ಲಾದ ಶರ್ಮಾ, ಬಿಳಿರಾಮ ಬಿರಾದರ, ಭಾವುರಾವ್‌ ಪಾಟೀಲ, ಭೀಮಣ್ಣ ಖಂಡ್ರೆ, ಮಡಿವಾಳಯ್ಯ ಸ್ವಾಮಿ, ಮಹಾರುದ್ರಪ್ಪ ಸಿರ್ಸೆ, ಮಹಾದೇವಪ್ಪ ಲೋಖಂಡೆ, ಮಾಧವರಾವ್‌ ಕಾಳೆ, ಯಶವಂತರಾವ್‌ ಸಾಯಗಾಂವಕರ, ರತ್ನದಾಸ ಬೈರಾಗಿ, ರಾಚಯ್ನಾ ಸವಾಮಿ, ರಾಮರಾವ್‌ ಕುಲಕರ್ಣಿ, ಶಿವಶರಣಪ್ಪ ಪಾಟೀಲ, ಶ್ರೀಪತಿ ಚೆನ್ನಪ್ಪನವರ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಜನರು ಹೈ.ಕ. ವಿಮೋಚನೆಯಲ್ಲಿ ಪಾಲ್ಗೊಂಡಿದರು.

ಬೀದರ ತಾಲೂಕಿನ ಹೋರಾಟಗಾರರು: ಅಪ್ಪಾರಾವ್‌ ಶೆಟಕಾರ, ನಾನಾರಾವ್‌ ಕುಮಠೇಕರ್‌, ಬಸವಂತರಾಯ ಶೇಟಕರ, ಗುರಪ್ಪ ಲಾಡಗೇರಿ, ಜ್ಞಾನರಾವ್‌, ಭೀಮಣ್ಣ ಮಜ್ಜಿಗೆ, ಮಹಾಂತಪ್ಪ ಮಡಕೆ, ಮಾಣಿಕರಾವ್‌ ಚೌಧರಿ, ಮಾಣಿಕರಾವ್‌ ಫುಲೇಕರ, ಮಾಧವ ಪಾಠಕ, ಮುರಳಿಧರರಾವ್‌ ಕಾಮತಿಕರ್‌, ರಾಮಕೃಷ್ಣರಾವ್‌ ಅಣದೂರ, ರಂಗನಾಥರಾವ್‌ ಸಾಯಗಾಂವಕರ್‌, ರಾಮಣ್ಣಾ ಕ್ಯಾಸಾ, ವೀರಭದ್ರಪ್ಪ ಕವಲಾಸ, ವಿಶ್ವನಾಥರಾವ್‌ ತಳಪಳ್ಳಿಕರ, ಶ್ರೀನಿವಾಸರಾವ್‌ ಏಖೇಳ್ಳಿ, ಶ್ರೀನಿವಾಸ ಹವಾಲ್ದಾರ ಸೇರಿದಂತೆ ನೂರಾರು ಪ್ರಮುಖ ಹೋರಾಟಗಾರರು ಭಾಗವಹಿಸಿದ್ದರು.

ಸತ್ಯ ಅರಿಯುವ-ಹೇಳುವ ಶಕ್ತಿ ರಾಜಕಾರಣಿಗಳಿಗಿಲ್ಲ ಸತ್ಯ ಅರಿಯುವ ಹಾಗೂ ಸತ್ಯ ಹೇಳುವ ಶಕ್ತಿ ಇಂದಿನ ರಾಜಕಾರಣಿಗಳು ಹಾಗೂ ಅ ಧಿಕಾರಿಗಳಿಗೆ ಇಲ್ಲ. ಸ್ವತಂತ್ರ ಭಾರತದಲ್ಲಿ ನಡೆದ ಅತಿದೊಡ್ಡ ಹತ್ಯಾಕಾಂಡ ಈ ಭಾಗದಲ್ಲಿ ನಡೆದಿದೆ. ಇಡಿ ದೇಶ ಬ್ರಿಟಿಷರಿಂದ ಮುಕ್ತಿ ದೊರೆತ ಸಂತಸದಲ್ಲಿರುವ ಸಂದರ್ಭದಲ್ಲಿ ಹೈದ್ರಾಬಾದ-ಕರ್ನಾಟಕ ಭಾಗದ ಜನರು ರಕ್ತಕಣ್ಣೀರು ಸುರಿಸಿದ್ದಾರೆ. ಅನೇಕ ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಹೋರಾಟಕ್ಕೆ ಮುಂದಾಗುವ ಅನೇಕ ಕುಟುಂಬದವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಜಾಕಾರರ ಹಾವಳಿ ತಡೆಯಲು ಅನೇಕ ವೀರರು ಹೋರಾಡಿದ್ದು, ಯಾವುದೇ ಇತಿಹಾಸದಲ್ಲಿ ದಾಖಲಾಗಿಲ್ಲ. ಕಾರಣ ಯಾರಿಗೂ ಸತ್ಯ ಬೇಕಾಗಿಲ್ಲ. ಇಂದು ನಾವು ಸೆ.17ರಂದು ಯಾವ ದಿನ ಆಚರಿಸುತ್ತಿದ್ದೇವೆ. ಯಾವ ಕಾರಣಕ್ಕೆ ಆಚರಣೆ ಮಾಡುತ್ತಿದ್ದೇವೆ ಎಂಬುದು ಇಂದಿನ ಯುವಶಕ್ತಿಗೆ ಗೊತ್ತಿಲ್ಲ. ನಮ್ಮ ನಿಜವಾದ ನಾಯಕರು ಯಾರು ಎಂಬುದು ಯುವಕರಿಗೆ ಗೊತ್ತಿಲ್ಲ. ಕಾರಣ ಪಠ್ಯಪುಸ್ತಕದಲ್ಲಿ ಇಲ್ಲಿನ ಪೂರ್ಣ ಇತಿಹಾಸ ದಾಖಲಾಗಿಲ್ಲ. ರಜಾಕಾರರು ಹಿಂದೂಗಳ ಮೇಲೆ ಮಾಡಿದ ದಬ್ಟಾಳಿಕೆ, ಕ್ರೌರ್ಯಕ್ಕೆ ಅದೇಷ್ಟೊ ಕುಟುಂಬಗಳು ಸರ್ವನಾಶವಾಗಿವೆ. ಇಲ್ಲಿನ ದಬ್ಟಾಳಿಕೆ ತಾಳಲಾಗದೆ ಈ ಭಾಗದ ಅನೇಕರು ಸೊಲ್ಲಾಪುರಕ್ಕೆ ಪಲಾಯನ ಮಾಡಿದರು. 

ಇದನ್ನು ಅರಿತ ಗೋರ್ಟಾ ಹಿರೇಮಠದ ಸುರೇಶಸ್ವಾಮಿ, ರಾಚೋಟಿ ಶಿವಾಚಾರ್ಯರು, ಸಿದ್ದವೀರಸ್ವಾಮಿ ಬನ್ನಟ್ಟಿಕರ್‌ ಅವರು ನಮ್ಮವರನ್ನು ಸಂರಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಟೇಕೆಕರ್‌ ವಾಡಿಯಲ್ಲಿ ಕ್ಯಾಂಪ್‌ ತೆರೆದು ಸೊಲ್ಲಾಪುರದಲ್ಲಿ ಅನ್ನ, ವಸ್ತ್ರ ಭಿಕ್ಷೆ ಬೇಡಿ ಜನರನ್ನು ಒಂದುಗೂಡಿಸುವ ಮೂಲಕ ಹೋರಾಟದ ಕುರಿತು ಸ್ಪೂರ್ತಿ ತುಂಬವ ಕಾರ್ಯ ಮಾಡಿದ್ದು ಯಾರಿಗೂ ಗೊತ್ತಿಲ್ಲ. ಹೋರಾಟದಲ್ಲಿ ಗೋರ್ಟಾ, ತೊಗಲೂರ್‌, ಮೇಹೇಕರ್‌, ಆಳವೈ, ಮದಕಟ್ಟಿ, ದಾಡಗಿ, ಹುಮನಾಬಾದ, ಭಾಲ್ಕಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಹತ್ಯಾಕಾಂಡ ನಡೆದಿದ್ದು, ಯಾಕೆ ಅವರು ಪ್ರಾಣ ಕಳೆದುಕೊಂಡರು, ಯಾವ ಕಾರಣಕ್ಕೆ ಹತ್ಯಾಕಾಂಡ ನಡೆಯಿತು ಎಂಬುದು ಇಂದಿನ ವಿದ್ಯಾರ್ಥಿಗಳಿಗೆ ಗೊತ್ತಿಲ್ಲ. ಸರ್ದಾರ ಪಟೇಲರು ಈ ಭಾಗಕ್ಕೆ ನೀಡಿದ ಕೊಡುಗೆ ಏನು ಎಂಬುದರ ಸತ್ಯ ಸಂದೇಶ ಇಂದಿನ ಜನಾಂಗಕ್ಕೆ ತಿಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ. ಹೋರಾಟ ಕುರಿತು ಇತಿಹಾಸದಲ್ಲಿ ದಾಖಲಿಸುವ ಮೂಲಕ ದೇಶದ ಸ್ವಾತಂತ್ರ್ಯಾದ ಜೊತೆಗೆ ಇಲ್ಲಿನ ಕೊನೆಯ ಹೋರಾಟದ ಬಗ್ಗೆ ಕೂಡ ತಿಳಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕದಲ್ಲಿ ಹೈ.ಕ. ವಿಮೋಚನೆಯ ಪೂರ್ಣ ಇತಿಹಾಸ ಅಳವಡಿಸಲು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು. ಓಟಿಗಾಗಿ ಹೋರಾಟದ ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ.
ರಾಜೇಶ್ವರ ಶಿವಾಚಾರ್ಯರು, ತಡೋಳಾ

ಹೋರಾಟದ ಸ್ವರೂಪ
ವಿಮೋಚನೆಗಾಗಿ ಜಿಲ್ಲೆಯ ಅನೇಕ ಮಠ, ಸಂಸ್ಥಾನ, ಶಿಕ್ಷಣ ಸಂಸ್ಥೆಗಳು ಶ್ರಮಿಸಿವೆ. ಹೋರಾಟ ರೂಪುರೇಷೆ ಸಿದ್ಧಪಡಿಸಲು ಹಾಗೂ ಹೋರಾಟದಲ್ಲಿ ಧುಮುಕುವ ಯುವಕರಿಗಾಗಿ ವಿವಿಧೆಡೆ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದ ಆರ್ಯ ಸಮಾಜ, ಗೋರ್ಟಾ ಹಿರೇಮಠ, ಭಾಲ್ಕಿ ಹಿರೇಮಠ, ಮಾಣಿಕನಗರದ ಮಾಣಿಕಪ್ರಭುಗಳ ಸಂಸ್ಥಾನ, ಚಿಟಗುಪ್ಪ ಭವಾನಿ ಮಂದಿರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಗುಪ್ತವಾಗಿ ಸ್ವಯಂ ರಕ್ಷಣಾ ತರಬೇತಿಗಳು ನಡೆಯುತ್ತಿದವು. ಈ ಸಂದರ್ಭದಲ್ಲಿ ಆಯುಧ ಅಥವಾ ಶಸ್ತ್ರಗಳನ್ನು ಇಟ್ಟುಕೊಳ್ಳುವುದು ಅಪರಾಧ ಎಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಗರುರಿಪಡಿಸಲಾಗುತ್ತಿತ್ತು. ಯಾವುದೇ ಹಬ್ಬ, ಮೆರವಣಿಗೆಗೂ ಅವಕಾಶಗಳು ತೀರ ಕಡಿಮೆ. ಆದರೂ, ದೇವಸ್ಥಾನಗಳಲ್ಲಿ ಭಜನೆ, ಪೂಜೆಗೆಂದು ಜನರು ಒಂದೆಡೆ ಸೇರಿ ಹೋರಾಟದ ಚರ್ಚೆಗಳನ್ನು ನಡೆಸುತ್ತಿದ್ದರು. ಅಲ್ಲದೆ, ಈ ಹೋರಾಟದಲ್ಲಿ ಈ ಭಾಗದ ಮಹಿಳೆಯರು ಶ್ರಮಿಸಿದ್ದಾರೆ. ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಮಹಿಳೆಯರು ಗುಪ್ತಚರ ಕೆಲಸ ನಿರ್ವಹಿಸಿ ಅನೇಕ ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಿದ್ದು, ಹೋರಾಟಗಾರರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ ಹಿರಿಮೆ ಇಲ್ಲಿನ ಮಹಿಳಾ ಹೋರಾಟಗಾರಿಗೂ ಸಲ್ಲುತ್ತದೆ.

ದೇಶದ ಅಂತಿಮ ಹೋರಾಟ ಇಡೀ ದೇಶ 1947ರಲ್ಲಿ ಸ್ವಾತಂತ್ರ್ಯಾ ಗಳಿಸಿದ ಸಂತೋಷದಲ್ಲಿ ಮುಳಗಿದ್ದಾಗ  ಜಾಮನ ಸಂಸ್ಥಾನದಲ್ಲಿ ಜನರು ಆತಂಕದಲ್ಲಿದ್ದರು. ಹ್ಯದ್ರಾಬಾದ ಕರ್ನಾಟಕ ವಿಮೋಚನೆ ಭಾರತದ ಸ್ವಾತಂತ್ರ್ಯಾ ಹೋರಾಟದ ಅಂತಿಮ ಮಜಲಾಗಿ ಗುರುತಿಸಿಕೊಂಡಿದೆ. ಈ ಹೋರಾಟವು ಹಲವಾರು ದೃಷ್ಟಿಯಿಂದ ಮಹತ್ವದಾಗಿದೆ. ಭಾರತದ ಉಳಿದ ಭಾಗಗಳಲ್ಲಿ ನಡೆದಿರುವುದಕ್ಕಿಂತ ವಿಭಿನ್ನವಾಗಿ ಸಂಪ್ರದಾಯವಾದಿ, ಸರ್ವಾಧಿ ಕಾರಿ ಮತ್ತು ಮಂತಾಂಧ, ಕೋಮುಶಕ್ತಿಯ ವಿರುದ್ಧ ಇಲ್ಲಿ ಹೋರಾಟ ನಡೆದಿದ್ದು, ಸ್ವಾತಂತ್ರ್ಯಾದ ಬಯಕೆ ಹಾಗೂ ಅದಕ್ಕಾಗಿ ಎಂತಹ ಬಲಿದಾನಕ್ಕೂ ಹೆದರದ ವೀರರು ಜಿಲ್ಲೆಯಲ್ಲಿ ಇದ್ದರು ಎಂಬುದು ಇಲ್ಲಿನ ಅದೇಷ್ಟೊ ಜನರಿಗೆ ಗೊತ್ತಿಲ್ಲ. ಇಂದಿನ ಜನರಿಗೆ ಈ ಭಾಗದ ಹೋರಾಟಕ್ಕೆ ಸೆಣಸಾಟ ನಡೆಸಿದವರ ಹೆಸರುಗಳು ಗೊತ್ತಿಲ್ಲದ ಸ್ಥಿತಿ ಇಲ್ಲಿದ್ದು, ಇದಕ್ಕೆ ರಾಜಕಾರಣಿಗಳ ಮತಬ್ಯಾಂಕ್‌ ರಾಜಕಾರಣ ಮುಖ್ಯ ಕಾರಣ ಎನ್ನುವುದು ಅನೇಕ ಹೋರಾಟಗಾರರ ಕುಟುಂಬದವರ ಮಾತು. ಈ ಭಾಗದ ಸ್ವಾತಂತ್ರ್ಯಾ ಚಳವಳಿಯು ಸೌಮ್ಯವಾದಿಗಿಂತ ಹೆಚ್ಚಾಗಿ ಉಗ್ರ, ಹಿಂಸಾವಾದಿಯಾಗಿದ್ದು, ಕ್ರಾಂತಿ ಸ್ವರೂಪ ಪಡೆಯಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೈ.ಕ. ಸ್ವಾತಂತ್ರ್ಯಾ ಚಳವಳಿಯು ಭಾರತದಲ್ಲಿ ಉಳಿದ ಭಾಗಗಳಲ್ಲಿ ನಡೆದ ಚಳವಳಿಗಿಂತ ವಿಭಿನ್ನವಾಗಿತ್ತು. ಏಕೆಂದರೆ ಇಲ್ಲಿನ ಜನರು ಸ್ವಾತಂತ್ರ್ಯಾಕ್ಕಾಗಿ ಸಶಸ್ತ್ರ ಹೋರಾಟ ನಡೆಸಿದ್ದು, ಬಂದೂಕಿನ ಗುಂಡಿಗೆ ಅನೇಕರು ಬಲಿಯಾಗಿದ್ದಾರೆ.  

ಭಾರತವು ಸ್ವಾತಂತ್ರ್ಯಾಗಳಿಸಲು ನಡೆಸಿದ ಮಹಾಸಂಗ್ರಾಮದಲ್ಲಿ ಇದು ಅಂತಿಮ ಹೋರಾಟ ಎಂಬ
ಹಿರಿಮೆಗೆ ಅರ್ಹವಾಗಿದೆ. ಆದರೆ, ಇತಿಹಾಸಕಾರರ, ಸಾಹಿತಿಗಳ ಗಮನಕ್ಕೆ ಬಾರದೆ, ಕಣ್ಮರೆಯಾಗುತ್ತಿದೆ.

„ದುರ್ಯೋಧನ ಹೂಗಾರ

ಟಾಪ್ ನ್ಯೂಸ್

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

police

Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ

ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.