ಎರಡು ಗ್ರಂಥ ಲೋಕಾರ್ಪಣೆ
Team Udayavani, Dec 27, 2020, 5:05 PM IST
ಬಸವಕಲ್ಯಾಣ: ಹಾರಕೂಡ ಮಠವು ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಾಹಿತಿಕವಾಗಿಯೂ ಸಮಾಜದಲ್ಲಿ ಉತ್ತಮ ಕೆಲಸದ ಮೂಲಕ ಅಪಾರ ಭಕ್ತರನ್ನು ಹೊಂದಿದ ಈ ಭಾಗದ ಏಕೈಕ ಮಠವಾಗಿದೆ ಎಂದು ಧಾರವಾಡದ ಹಿರಿಯ ಸಾಹಿತಿ ಡಾ| ಸಂಗಮೇಶ ಸವದತ್ತಿ ಹೇಳಿದರು.
ತಾಲೂಕಿನ ಹಾರಕೂಡ ಗ್ರಾಮದ ಹಿರೇಮಠದಲ್ಲಿ ಡಾ| ಚೆನ್ನವೀರ ಶಿವಾಚಾರ್ಯರು ರಚಿಸಿರುವ ಚನ್ನ ಚಂದ್ರಹಾರ ಹಾಗೂ ರಾಯಚೂರಿನ ಡಾ| ಚೆನ್ನಬಸವಯ್ಯ ಹಿರೇಮಠರಚಿಸಿರುವ ಕಲ್ಯಾಣ ಕರ್ನಾಟಕದಸಂಸ್ಕೃತಿ ಎಂಬ ಎರಡು ಗ್ರಂಥಗಳನ್ನುಲೋಕಾರ್ಪಣೆಗೊಳಿಸಿ ಮಾತನಾಡಿದಅವರು, ಹಾರಕೂಡ ಮಠವು ಒಂದುಪುಟ್ಟ ಗ್ರಾಮದಲ್ಲಿ ಇದ್ದರೂ ವಿದೇಶದ ವರೆಗು ಪಸರಿಸಿದೆ ಎಂದರು.
ಈ ಮಠದಿಂದ ಪ್ರಕಟವಾದ ಗ್ರಂಥಗಳು ಕೆನಡಾ ದೇಶದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಜಗತ್ತಿನತುಂಬ ಪ್ರಸಿದ್ಧವಾಗಿದೆ. ಅಲ್ಲದೆಡಾ| ಚೆನ್ನವೀರ ಶಿವಾಚಾರ್ಯರು ಸಮಾಜಕ್ಕೆ ಜ್ಞಾನದ ಬೆಳಕು ನೀಡುತ್ತಿದ್ದಾರೆ ಎಂದರು.
ಡಾ| ಚನ್ನಬಸವಯ್ಯ ಹಿರೇಮಠ ಅವರು ಕಲ್ಯಾಣ ಕರ್ನಾಟಕ ಸಂಸ್ಕೃತಿಕುರಿತು ಶಾಸನಗಳ ಕುರಿತು ವಿಶೇಷಉಪನ್ಯಾಸ ನೀಡಿದರು. ಸಾಹಿತಿ ಡಾ|ಗವಿಸಿದ್ಧಪ್ಪ ಪಾಟೀಲ ಮಾತನಾಡಿದರು.ಹಿರೇಮಠ ಸಂಸ್ಥಾನದ ಡಾ| ಚೆನ್ನವೀರಶಿವಾಚಾರ್ಯರು ಸಾನ್ನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ರಾಜಶೇಖರ ಮೇತ್ರೆ, ಬಿ.ಕೆ. ಹಿರೇಮಠ, ಹುಮನಾಬಾದ್‌ನ ಸಾಹಿತಿ ಎಚ್.ಕಾಶಿನಾಥರೆಡ್ಡಿ, ರಾಜಕುಮಾರ ಪಾಟೀಲಸಿರಗಾಪುರ, ಮೇಘರಾಜ ನಾಗರಾಳೆ ಇದ್ದರು. ಸುಭಾಷ ಮುರುಡ ಬೆಳಂಗಿ ಸ್ವಾಗತಿಸಿದರು. ಅಂಬರಾಯ ಉಗಾಜಿ ನಿರೂಪಿಸಿದರು. ಮಲ್ಲಿನಾಥ ಹಿರೇಮಠ ವಂದಿಸಿದರು.
ನಾವದಗಿಯ ರೇವಪ್ಪಯ್ಯಾ ಜಾತ್ರೆ: ಪಲಕ್ಲಿ ಉತ್ಕವ :
ಭಾಲ್ಕಿ: ಸುಕ್ಷೇತ್ರ ನಾವದಗಿ ಗ್ರಾಮದ ಸದ್ಗುರು ರೇವಪ್ಪಯ್ಯಾ ಮಹಾಶಿವಶರಣರ 84ನೇ ಜಾತ್ರಾ ಮಹೋತ್ಸವ ನಿಮಿತ್ತ ಸಂಭ್ರಮ ಪಲ್ಲಕ್ಕಿ ಉತ್ಸವ ನಡೆಯಿತು.
ರೇವಪ್ಪಯ್ನಾ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ವತಿಯಿಂದ ಕೋವಿಡ್-19 ಮುಂಜಾಗ್ರತಾಕ್ರಮವಾಗಿ ಜಾತ್ರಾ ಮಹೋತ್ಸವ ಸರಳ ರೀತಿಯಿಂದ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಭಕ್ತಾದಿಗಳಆಸಕ್ತಿಯ ಮೇರೆಗೆ ಅಗ್ನಿಪೂಜೆ, ಪಲ್ಲಕ್ಕಿ ಉತ್ಸವ ವೈಭವಪೂರಿತವಾಗಿ ನಡೆಸಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ಟ್ರಸ್ಟ್‌ಕಮಿಟಿ ಸದಸ್ಯರಾದ ಮಲ್ಲಿಕಾರ್ಜುನ ಸೇರಿಕಾರ, ಪ್ರದೀಪಪಾಟೀಲ, ಶಿವರಾಜ ಪಾಟೀಲ ಮಾವಿನಹಳ್ಳಿಯವರಜೊತೆಗೆ ಸಂಸ್ಥಾನ ಮಠದ ಶಾಂತವೀರ ಸ್ವಾಮಿ, ಸಿದ್ದಲಿಂಗ ಸ್ವಾಮಿ ಭಾಗಿಯಾಗಿದ್ದರು. ಪಲ್ಲಕ್ಕಿ ಉತ್ಸವಮೆರವಣಿಗೆಯಲ್ಲಿ ಕಾರಣಿಕ ಪುರವಂತರ ಕುಣಿತಮತ್ತು ಸುಮಂಗಲೆಯರ ಆರತಿ ಪ್ರದರ್ಶನ ಗಮನಸೆಳೆಯಿತು. ನೂರಾರು ಯುವಕರು ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.