ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಶಾಶ್ವತ ಬೀಗ!
ನೆರವು ನೀಡದೆ ಕೈಚಲ್ಲಿ ಕುಳಿತಿರುವುದು ಕಾರ್ಮಿಕರು ಮತ್ತು ಬ್ಯಾಂಕ್‌ಗಳ ಸಂಕಷ್ಟ ದುಪ್ಪಟ್ಟುಗೊಳಿಸಿದೆ
Team Udayavani, Feb 26, 2021, 6:39 PM IST
ಬೀದರ: ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಕರ್ನಾಟಕದ ಅತಿ ಹಳೆಯ ಸಕ್ಕರೆ ಕಾರ್ಖಾನೆ. ದಶಕಗಳಿಂದ ಗಡಿ ನಾಡು ಬೀದರ ರೈತರ ಮತ್ತು ಕಾರ್ಮಿಕರ ಜೀವನಾಡಿ ಆಗಿದ್ದ ಈ ಸಂಸ್ಥೆಗೆ ಈಗ ಆರ್ಥಿಕ ಸಂಕಷ್ಟದಿಂದ ಬೀಗ ಬಿದ್ದಿದೆ. ಸರ್ಕಾರಗಳು ಬದಲಾದರೂ ಕಾರ್ಖಾನೆಯ ಪುನಃಶ್ಚೇತನದ ಭರವಸೆ ಮಾತ್ರ ಈಡೆರಲೇ ಇಲ್ಲ. ಇದಕ್ಕೆ ರಾಜಕೀಯ ನಾಯಕರ ಇಚ್ಛಾಶಕ್ತಿ ಮತ್ತು ಸಮರ್ಥ ನಾಯಕತ್ವದ ಕೊರತೆ ಮೂಲ ಕಾರಣ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಎಲ್ಲ ಪಕ್ಷಗಳು ಬಿಎಸ್‌ಎಸ್‌ಕೆ ಆರಂಭ ವಿಷಯವನ್ನೇ ಚುನಾವಣಾ ಪ್ರಚಾರಕ್ಕೆ ಅಸ್ತ್ರವಾಗಿ ಬಳಸಿಕೊಂಡಿದ್ದವು. ಅದೇ ರೀತಿ ಸಿಎಂ ಯಡಿಯೂರಪ್ಪ ಸಹ ಬಿಜೆಪಿ ಅಧಿಕಾರಕ್ಕೆ ಬಂದರೆ 50 ಕೋಟಿ ರೂ. ಪ್ಯಾಕೇಜ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಆಡಳಿತಕ್ಕೆ ಬಂದ ಮೇಲೆ ಮೌನವಾಗಿದ್ದಾರೆ. ಅಷ್ಟೇ ಅಲ್ಲ ಹಿಂದೆ ಸಕ್ಕರೆ ಸಚಿವರಾಗಿದ್ದ ಸಿ.ಟಿ ರವಿ ಅವರು ಬಿಎಸ್‌ಎಸ್‌ಕೆಗೆ ಹಣದ ನೆರವು ನೀಡುವುದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ, ಸಾಲ ಕೊಟ್ಟರೂ ಸಹ ಯಾವುದೇ ಉದ್ಧಾರ ಆಗುವ ಲಕ್ಷಣಗಳಿಲ್ಲ ಎಂದು ಹೇಳಿಕೆ ನೀಡಿದ್ದರು.
ಹಾಗಾಗಿ ಒಂದು ಕಾಲದಲ್ಲಿ ಜಿಲ್ಲೆಯ ಜನರ ಬದುಕಿನ ಭಾಗವಾಗಿದ್ದ ಸಂಸ್ಥೆ ಶಾಶ್ವತವಾಗಿ ಬಾಗಿಲು ಮುಚ್ಚಿಕೊಳ್ಳುತ್ತಾ ಎಂಬ ಆತಂಕ ಕಬ್ಬು ಬೆಳೆಗಾರರಲ್ಲಿ ಹೆಚ್ಚಿಸಿದೆ. ಆರು ದಶಕಗಳ ಹಿಂದೆ ಸ್ಥಾಪಿತಗೊಂಡು ರಾಜ್ಯದಲ್ಲೇ ಹಳೆಯ ಮತ್ತು ಅತ್ಯುತ್ತಮ ಕಾರ್ಖಾನೆ ಎನಿಸಿಕೊಂಡಿದ್ದ ಬಿಎಸ್‌ಎಸ್‌ಕೆ ಈಗ ಅಂದಾಜು 300 ಕೋಟಿ ರೂ.ಗಳಿಗೂ ಅಧಿಕ ಸಾಲದ ಹೊರೆ ಹೊತ್ತಿದೆ. ಸದ್ಯ ಕಾರ್ಖಾನೆಯ ಆಸ್ತಿಗಿಂತಲೂ ಅದರ ಸಾಲವೇ ಅಧಿಕವಾಗಿದೆ.
ಪ್ರತಿ ವರ್ಷ ಸಾಲದ ಮೇಲೆ ಸುಮಾರು 30 ಕೋಟಿ ರೂ. ಬಡ್ಡಿ ಆಗುತ್ತಿದ್ದರೆ ಇತ್ತ ಕಾರ್ಮಿಕರು ವೇತನ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಕಾರ್ಖಾನೆಯ
ಆಧುನೀಕರಣಕ್ಕೆ ನಿರಾಸಕ್ತಿ, ಆಡಳಿತ ವರ್ಗದ ಲೋಪ ಮತ್ತು ಭ್ರಷ್ಟಾಚಾರ ಸೇರಿ ಅನೇಕ ಕಾರಣಗಳಿಂದ ಈ ದುಸ್ಥಿತಿಗೆ ತಲುಪಿದೆ. ಹಿಂದಿನ ಸಮ್ಮಿಶ್ರ ಸರ್ಕಾರ ಪುನಃಶ್ವೇತನಕ್ಕಾಗಿ 20 ಕೋಟಿ ರೂ. ಅನುದಾನ ನೀಡಿತ್ತಾದರೂ ಯಾವುದೇ ಲಾಭ ಆಗಲಿಲ್ಲ.
ಮತ್ತೂಂದೆಡೆ ಬಿಎಸ್‌ಎಸ್‌ಕೆಯ ಆರ್ಥಿಕ ಸ್ಥಿತಿಯಿಂದಾಗಿ ಸಾಲ ನೀಡಿರುವ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ಗೂ ಸಹ ಅಸಲು-ಬಡ್ಡಿ ಹೇಗೆ ಬರುತ್ತದೆ ಎಂಬ ಭಯ ಕಾಡುತ್ತಿದೆ. ಸರ್ಕಾರ ವಿಶೇಷ ಪ್ಯಾಕೇಜ್‌ನ ನೆರವು ನೀಡದೆ ಕೈಚಲ್ಲಿ ಕುಳಿತಿರುವುದು ಕಾರ್ಮಿಕರು ಮತ್ತು ಬ್ಯಾಂಕ್‌ಗಳ ಸಂಕಷ್ಟ ದುಪ್ಪಟ್ಟುಗೊಳಿಸಿದೆ.
ಬಿಎಸ್‌ಎಸ್‌ಕೆ ಕಾರ್ಖಾನೆ ಸಾಲದ ಹಣವನ್ನು ಷೇರಿಗೆ ಪರಿವರ್ತಿಸಿ, ವಿಶೇಷ ಅನುದಾನ ಕಲ್ಪಿಸಿ ರೈತರ ಹಿತ ಕಾಪಾಡಬೇಕು ಎಂಬುದು ರೈತ ಸಂಘಟನೆಗಳು ಒತ್ತಾಯಿಸಿದ್ದರೆ, ಕೆಲವರು ಮೈಸೂರು ಶುಗರ್, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಮಾದರಿಯಲ್ಲಿ ಬಿಎಸ್ ಎಸ್‌ಕೆಯನ್ನು ಸಹ ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಪುನಾರಂಭಿಸಲಿ ಎಂಬ ಬೇಡಿಕೆ ಇದೆ. ಇನ್ನು ರೈತರು ಯಾರಾದರೂ ನಡೆಸಲಿ ಕಬ್ಬು ಕ್ರಷಿಂಗ್ ಆರಂಭಗೊಂಡರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ.
ಬಿಎಸ್‌ಎಸ್‌ಕೆ ಕಬ್ಬು ನುರಿಸುವಕೆ ನಿಲ್ಲಿಸಿದ ಕಾರಣ ಸದ್ಯ ನಿರುಪಯುಕ್ತ ಎನಿಸಿದೆ. ನೂರಾರು ಕೋಟಿ ರೂ. ವ್ಯಯಿಸಿರುವ ಕಾರ್ಖಾನೆ ಹೀಗೆಯೇ ಬಿಟ್ಟರೆ ಪೂರ್ಣ
ಹಾಳಾಗುತ್ತದೆ. ಯಂತ್ರೋಪಕರಣಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಈ ಸ್ಥಿತಿ ಬಾರದಂತೆ ನೋಡಿಕೊಂಡು ಭವಿಷ್ಯ ರೂಪಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
*ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.