ಎರಡು ಸುತ್ತಿನ ಕೋಟೆ ಸ್ವಚ್ಛತೆಗೆ ಅಭಿಯಾನ
Team Udayavani, Mar 20, 2022, 12:55 PM IST
ಮುದಗಲ್ಲ: ಐತಿಹಾಸಿಕ ಎರಡು ಸುತ್ತಿನ ಕೋಟೆ ಸ್ವಚ್ಛತೆ ಅಭಿಯಾನಕ್ಕೆ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆರಳೆಣಿಕೆಯ ಜನರಿಂದ ಆರಂಭವಾಗಿದ್ದ ಕೋಟೆ ಸ್ವಚ್ಛತೆಗೆ ಈಗ ಹಲವಾರು ಸಂಘ-ಸಂಸ್ಥೆಯವರು, ಮಾಜಿ ಯೋಧರು, ಮಾಜಿ ಶಾಸಕ ದಿ|ಎಂ.ಗಂಗಣ್ಣ ಅಭಿಮಾನಿ ಬಳಗದವರು ಕೈ ಜೋಡಿಸಿದ್ದಾರೆ. ಈ ಕಾರ್ಯಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಹಲವು ಮುಖಂಡರು ಅಭಿಯಾನದಲ್ಲಿ ಭಾಗವಹಿಸಿ ಕೋಟೆ ಉಳಿವಿಗೆ ಶ್ರಮದಾನ ಮಾಡಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ ಸೇರಿದಂತೆ ಕೆಲವರು ಈ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಅಧಿಕಾರಿಗಳ ಸಾಥ್
ಲಿಂಗಸುಗೂರ ಪೊಲೀಸ್ ವೃತ್ತ ನಿರೀಕ್ಷಕ ಮಹಾಂತೇಶ ಸಜ್ಜನ್ ಅವರ ನೇತೃತ್ವದಲ್ಲಿ 1996-97ನೇ ಸಾಲಿನ 10ನೇ ತರಗತಿ ಗೆಳೆಯರ ಬಳಗದವರು ಕೋಟೆ ಸ್ವಚ್ಛತೆಗೆ ಕೈಜೋಡಿಸಿದ್ದಾರೆ. ಲಿಂಗಸುಗೂರಿನ ಸರ್.ಎಂ.ವಿಶ್ವೇಶ್ವರಯ್ಯ ಪದವಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ರಮೇಶ್ ಎಸ್. ತೆಗ್ಗಿನಮನಿ ಅವರ ನೇತೃತ್ವದಲ್ಲಿ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮದಾನಕ್ಕೆ ಮುಂದಾಗಿದ್ದಾರೆ. ಸರಕಾರ ಹಾಗೂ ವಿವಿಧ ಇಲಾಖೆ ನಿರ್ಲಕ್ಷದಿಂದ ಹಾಳು ಕೊಂಪೆಯಾಗಿದ್ದ ಕೋಟೆಗೆ ಸ್ಥಳೀಯರೇ ಲಕ್ಷಾಂತರ ರೂ. ಖರ್ಚು ಮಾಡಿ ಕೋಟೆ ಸ್ವಚ್ಛತೆ ಮಾಡುವ ಮೂಲಕ ಐತಿಹಾಸಿಕ ಕೋಟೆ ರಕ್ಷಣೆಗೆ ಮುಂದಾಗಿರುವುದು ವಿಶೇಷ.
ಕೋಟೆಯಲ್ಲೇನಿದೆ?
ಕೋಟೆಯಲ್ಲಿ ದೊಡ್ಡ ಹೊಕ್ರಾಣಿ, ರಾಣಿ ಸ್ನಾನಗೃಹ, ಇತಿಹಾಸ ಸಾರುವ ಶಿಲ್ಪಕಲೆಗಳು, ಪುರಾತನ, ಶಿಲಾಶಾಸನಗಳು, ದೇವಾಲಯಗಳು, ಮುಳ್ಳಿನ ದ್ವಾರಬಾಗಿಲು, ತೋಪುಗಳು, ಶಾಸನಗಳು, ಮೂರ್ತಿಗಳು ಸೇರಿದಂತೆ ಶ್ವೇತ ಶಿಲೆಯಿಂದ ಸುತ್ತುವರಿದಿರುವ ವಿಶಾಲವಾದ ಕೋಟೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಆದರೆ ಪ್ರವಾಸಿತಾಣದ ಯೋಗ ಮಾತ್ರ ಪಡೆದಿಲ್ಲಕೋಟೆ ಸ್ವಚ್ಛತೆಗೆ ಅನೇಕ ಕಾಣದ ಕೈಗಳು ಸಹಾಯ ಮಾಡುತ್ತಿದೆ. ಸರಕಾರದ ಅನುದಾನದ ಅಗತ್ಯವಿಲ್ಲ. ಸರಕಾರದ ವತಿಯಿಂದ ಕೋಟೆ ಉತ್ಸವ ನಡೆಸಿದರೆ ಸಾಕು. -ಎಸ್.ಎ.ನಯಿಮ್, ಕರವೇ ಅಧ್ಯಕ್ಷ, ಮುದಗಲ್ಲ ಘಟಕ
-ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.