ಬೀದರನಲ್ಲಿ ಬಟ್ಟೆ ಅಂಗಡಿ ಮಾಲೀಕ ಚಂದ್ರಶೇಖರ ಪಸರ್ಗೆ ಕಸರತ್ತು
Team Udayavani, Jan 18, 2018, 7:56 AM IST
ಬೀದರ: ಪ್ರಧಾನಿ ಮೋದಿ ಘೋಷಿಸಿದ ನೋಟ್ ಬ್ಯಾನ್, ಜಿಎಸ್‌ಟಿ ಜಾರಿ ನಿರ್ಧಾರ ಬೆಂಬಲಿಸಿ ಹಳೆಯ ಒಂದು ಮತ್ತು 2 ಪಾಯಿಗೆ ಸೀರೆಗಳನ್ನು ನೀಡಿದ್ದ ನಗರದ ಸೃಷ್ಟಿ- ದೃಷ್ಟಿ ಅಂಗಡಿಯಲ್ಲಿ ಈಗ ಮತ್ತೂಮ್ಮೆ ಸೀರೆ ಉಡುಗೊರೆಯಾಗಿ ಕೊಡಲಾಗುತ್ತಿದೆ. ಈ ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂಬ ಆಶಯ ಹೊಂದಲಾಗಿದೆ.
ಇಂದಿನ ದುಬಾರಿ ದುನಿಯಾದಲ್ಲಿ ಒಂದು- ಎರಡು ರೂಪಾಯಿಗೆ ಒಂದು ಸೀರೆ ಸಿಗುತ್ತದೆ ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ. ಸೃಷ್ಟಿ-ದೃಷ್ಟಿ ಅಂಗಡಿ ವ್ಯಾಪಾರಿ ಚಂದ್ರಕಾಂತ ಪಸರ್ಗೆ ಇಂಥದೊಂದು ಆಶಯದೊಂದಿಗೆ ಹಳೆಯ 1 ಅಥವಾ 2 ರೂಪಾಯಿ “ನೋಟು’ ಪಡೆದು ಹೊಸ ಸೀರೆ ನೀಡುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಉಡುಗೊರೆಯಾಗಿ ಆರಂಭಿಸಿರುವ ಬಂಪರ್ ಆಫರ್ ಜ.30ರವರೆಗೆ ಇರಲಿದ್ದು, ಸೀರೆ ಪಡೆಯಲು ನಾರಿಯರು ಬೆಳಗ್ಗೆಯಿಂದಲೇ ಬಟ್ಟೆ ಅಂಗಡಿ ಎದುರು ಸರದಿಯಲ್ಲಿ ನಿಲ್ಲುತ್ತಿದ್ದಾರೆ.
ಪ್ರಧಾನಿ ಮೋದಿ ಅವರು 500, 1000ರೂ. ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ನಿರ್ಧಾರ ಬೆಂಬಲಿಸಿದ ವ್ಯಾಪಾರಿ, ಹೊಸ ವರ್ಷ ಮತ್ತು ಕ್ರಿಸ್‌ಮಸ್ ಹಬ್ಬದ ಉಡುಗೊರೆಯಾಗಿ ಸೀರೆ ನೀಡಿದ್ದರು. ನಂತರ ಜಿಎಸ್‌ಟಿ ಜಾರಿಯಾದ ಬಳಿಕ ಕೇವಲ 10, 25 ಮತ್ತು 50 ಪೈಸೆಗೆ ಸೀರೆಯನ್ನು ವಿತರಿಸಿದ್ದರು. ಈಗ ಮತ್ತೆ 1 ಅಥವಾ 2 ರೂ.ಗೆ ಸೀರೆ ಕೊಡಲು ಮುಂದಾಗಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಆಡಳಿ ತಕ್ಕೆ ಬಂದು ಅವರೇ ಸಿಎಂ ಆಗಬೇಕೆಂದು ಆಶಿಸುತ್ತ ಸೀರೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಕುಮಾರಸ್ವಾಮಿ ಸಿಎಂ ಆಗಬೇಕೆಂದು ವೆಂಕಟೇಶ್ವರನಲ್ಲಿ ಹರಕೆಯನ್ನೂ ಹೊತ್ತಿದ್ದಾರೆ. ಕಳೆದ ಬಾರಿ 14 ಲಕ್ಷ ಸೀರೆಗಳನ್ನು ನೀಡಿದ್ದು, ಈ ಬಾರಿ 5 ಲಕ್ಷ ಸೀರೆಗಳನ್ನು ಜನರಿಗೆ ಕೊಡಲು ನಿರ್ಧರಿಸಿದ್ದೇನೆ.
ಈಗಾಗಲೇ ಸೂರತ್‌ನಿಂದ ಸೀರೆಗಳನ್ನು ತರಲಾಗಿದ್ದು, 100 ರಿಂದ 200 ರೂ. ದರದವರೆಗಿನ ಸೀರೆಗಳನ್ನು ಕೊಡುತ್ತಿದ್ದೇನೆ. ಸೀರೆ ಮಾರಾಟದಿಂದ ಬರುತ್ತಿರುವ ಹಣವನ್ನು ನಗರದ ಹೊರವಲಯದ ಅನಂತಶಯನ ಮಂದಿರದ ಲಕ್ಷ್ಮೀ ವೆಂಕಟೇಶ್ವರ ದೇವರ ಹುಂಡಿಗೆ ಹಾಕುವೆ ಎನ್ನುತ್ತಾರೆ ಪಸರ್ಗೆ.
ಟಿಕೆಟ್ ಆಕಾಂಕ್ಷಿ!
ಹಿಂದೆ ಜನ ಸೇವೆಗಾಗಿ ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದ ಪಸರ್ಗೆ ಈ ಬಾರಿ ಬೀದರ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿ ಸುವ ಆಸೆ ಹೊಂದಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಾಣಲು ಸೀರೆ ಉಡುಗೊರೆ ಎಷ್ಟರ ಮಟ್ಟಿಗೆ ಸಹಕಾರಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
ಪ್ರಧಾನಿ ಮೋದಿ ಅವರ ನೋಟ್ ಬ್ಯಾನ್ ನಿರ್ಧಾರ ಬೆಂಬಲಿಸಿ ಕ್ರಿಸ್‌ಮಸ್ ಹಬ್ಬಕ್ಕೆ ಸೀರೆಗಳನ್ನು ಉಡುಗೊರೆ ನೀಡಿದ್ದೆ. ಈಗ ಕುಮಾರಸ್ವಾಮಿ ಸಿಎಂ ಆಗಬೇಕೆಂಬುದು ನನ್ನ ಆಶಯ. ದೇಶ, ಸಮಾಜಕ್ಕಾಗಿ ಒಳ್ಳೆಯ ಆಡಳಿತ ನೀಡುವವರಿಗೆ ಬೆಂಬಲಿಸುತ್ತ
ಬರುತ್ತಿದ್ದೇನೆ.
ಚಂದ್ರಶೇಖರ ಪಸರ್ಗೆ, ಬಟ್ಟೆ ಅಂಗಡಿ ಮಾಲೀಕ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’
Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
Officers Promotion: ಹೊಸ ವರ್ಷಕ್ಕೆ 153 ಅಧಿಕಾರಿಗಳಿಗೆ ಭಡ್ತಿ ಭಾಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.