ಚೆಕ್ ಡ್ಯಾಂ ನಿರ್ಮಾಣ ಹಂತದಲ್ಲೇ ಕಳಪೆ!
Team Udayavani, May 29, 2022, 1:24 PM IST
ಮುದಗಲ್ಲ: ಸಮೀಪದ ನಾಗಲಾಪುರ ಹಿರೇ ಹಳ್ಳಕ್ಕೆ ಸೆ.ನಂ.5ರ ಹತ್ತಿರ ನಿರ್ಮಿಸುತ್ತಿರುವ ಚೆಕ್ ಡ್ಯಾಂ ಕಾಮಗಾರಿ ನಿರ್ಮಾಣ ಹಂತದಲ್ಲಿಯೇ ಕಿತ್ತು ಹೋಗಿರುವುದು ಕಳಪೆ ಕಾಮಗಾರಿ ಎಂಬುವುದು ಬಯಲಾದಂತಾಗಿದೆ.
2020-21ನೇ ಸಾಲಿನ ಸಣ್ಣ ನೀರಾವರಿ ಇಲಾಖೆಯಡಿ ಸುಮಾರು ಒಂದು ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಮಾಡುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಎರಡು ತಿಂಗಳಿಂದ ಆರಂಭಿಸಲಾಗಿತ್ತು. ಕಾಮಗಾರಿ ನಡೆಸಲಾದ ಹಿರೇ ಹಳ್ಳದ ಅಕ್ಕಪಕ್ಕದಲ್ಲಿ ಸುಮಾರು ಆರು ಜನ ರೈತರ ಹೊಲಗಳ ದಡದಲ್ಲಿ ಗಿಡಗಂಟಿತೆರವುಗೊಳಿಸಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಚೆಕ್ ಡ್ಯಾಂನ ಎಡಭಾಗ ಮಳೆನೀರಿನ ರಬಸಕ್ಕೆ ಕಿತ್ತು ಹೋಗಿದೆ.
ಬೀರಮ್ಮ ಎಂಬುವರ ಜಮೀನು ಮತ್ತು ಕೊಳವೆ ಬಾವಿ ಹಾಳಾಗಿದೆ. ಹಿರೇ ಹಳ್ಳಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬರುವುದರಿಂದ ಹಳ್ಳದ ನೀರು ಜಮೀನಿಗೆ ನುಗ್ಗಿದೆ ಎಂದು ಹೊಲದ ಮಾಲೀಕರು ತಮ್ಮ ಅಳಲು ತೊಡಿಕೊಂಡಿದ್ದಾರೆ. ನಿಮ್ಮ ಹೊಲದ ಹತ್ತಿರ ಚೆಕ್ ಡ್ಯಾಂ ಮಂಜೂರಾಗಿದೆ. ಚೆಕ್ ಡ್ಯಾಂನಿಂದ ನಿಮ್ಮ ಕೊಳವೆ ಬಾವಿಗಳಿಗೆ ಅಂರ್ತಜಲ ಹೆಚ್ಚಾಗುತ್ತದೆ ಎಂದು ಹೇಳಿ ಚೆಕ್ ಡ್ಯಾಂ ನಿರ್ಮಿಸಲು ಮುಂದಾದ ಅಧಿಕಾರಿಗಳು, ಚೆಕ್ ಡ್ಯಾಂ ಕಿತ್ತುಕೊಂಡು ಹೊಲ, ಬೋರ್ ವೆಲ್ ಹಾಳಾದರು ಬಂದು ನೋಡಿಲ್ಲ ಎಂದು ರೈತ ಮಹಿಳೆ ಬೀರಮ್ಮ ದೂರಿದ್ದಾಳೆ.
ಕಾಮಗಾರಿ ನಡೆಯುತ್ತಿರುವಾಗ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದು ಹಳ್ಳ ಬಂದಿದ್ದರಿಂದ ಚೆಕ್ ಡ್ಯಾಂ ಪಕ್ಕದಲ್ಲಿ ಮಣ್ಣು ಕೊರೆದು ಕಂದಕ ಉಂಟಾಗಿದೆ. –ಪ್ರಹ್ಲಾದ್ ಬಿಜ್ಜೂರ, ಕಿರಿಯ ಅಭಿಯಂತರ, ಸಣ್ಣ ನೀರಾವರಿ ಇಲಾಖೆ ಕುಷ್ಟಗಿ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.