ಚೆಕ್‌ಪೋಸ್ಟ್ ಪರಿಶೀಲನೆ-ಮತಗಟ್ಟೆ ಸಭೆ
ಶಾಂತಿಯುತ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.
Team Udayavani, Mar 29, 2021, 7:02 PM IST
ಬೀದರ: ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿ.ಪಂ ಸಿಇಒ ಜಹೀರಾ ನಸೀಮ್ ಮತ್ತು ಎಸ್‌ಪಿ ನಾಗೇಶ ಡಿ.ಎಲ್. ಅವರು ಬಸವಕಲ್ಯಾಣ ಕ್ಷೇತ್ರದಲ್ಲಿ ಸಂಚರಿಸಿ ಚೆಕ್‌ಪೋಸ್ಟಗಳ ಸ್ಥಿತಿಗತಿ ಪರಿಶೀಲಿಸಿದರು. ಅಲ್ಲದೇ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಗುರುತಿಸಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿ ಪೂರ್ವಭಾವಿ ಸಭೆ ನಡೆಸಿ ಮತದಾನ ಬಗ್ಗೆ ಜಾಗೃತಿ ಮೂಡಿಸಿದರು.
ಡಿಸಿ, ಸಿಇಒ ಮತು ಎಸ್ಪಿ ಅವರ ತಂಡವು ಮೊದಲು ತಡೋಳಾ ಮತ್ತು ಕಲಕೋರಾ ಬಳಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿತು. ಮಾದರಿ ನೀತಿ
ಸಂಹಿತೆ ಉಲ್ಲಂಘನೆ ಬಗ್ಗೆ ಚೆಕ್‌ಪೋಸ್ಟ್‌ಗಳಲ್ಲಿ ಮೂರು ಪಾಳಿಯಲ್ಲಿ ಕಾರ್ಯನಿರತವಾಗಿರುವ ಸ್ಟಾ ಟಿಕ್ ಸರ್ವೆಲನ್ಸ್ ತಂಡದ ಕಾರ್ಯವೈಖರಿ ಪರಿಶೀಲಿಸಿದ
ಜಿಲ್ಲಾಧಿಕಾರಿಗಳು, ಮತದಾರರಿಗೆ ಹಂಚಲು ಲಿಕ್ಕರ್, ಆಯುಧ, ಅಧಿಕ ಪ್ರಮಾಣದಲ್ಲಿ ಹಣ ಒಯ್ಯುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ವಾಹನ ಪರಿಶೀಲನೆ ಮಾಡುವಾಗ ಕಡ್ಡಾಯ ವಿಡಿಯೋ ಮಾಡಬೇಕು. ಪ್ರತಿದಿನ ಕಾರ್ಯಚಟುವಟಿಕೆಗಳ ಬಗ್ಗೆ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಮತದಾನ
ಪೂರ್ಣವಾಗುವವರೆಗೂ, ಪೂರ್ವಾನುಮತಿಯಿಲ್ಲದೇ ರಜೆ ಮೇಲೆ ತೆರಳದೇ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಮಹಾರಾಷ್ಟ್ರದಿಂದ ಬರುವ ವಾಹನಗಳ ಪರಿಶೀಲನೆಗಾಗಿ ಪರ್ತಾಪೂರ ತಾಂಡಾ ಬಳಿಯಲ್ಲಿ, ಮನ್ನಳ್ಳಿ-ಓಮರ್ಗಾ ಎಂಎಸ್ ಬಾರ್ಡರ್, ಅಂಬೇವಾಡಿ ಕ್ರಾಸ್, ಗೋಟಾಳ ಗಡಿಯಲ್ಲಿ, ಕಲಬುರಗಿ ಗಡಿಯಿಂದ ಬರುವ ವಾಹನಗಳ ಪತ್ತೆಗೆ ಕೋಹೀನೂರ-ಮಹಾಗೊಣಗಾಂವ್ ಮಧ್ಯೆ ಚೆಕ್ ಪೋಸ್ಟ್ ಸ್ಥಾಪಿಸಿ ಬೆಳಗ್ಗೆ 6ರಿಂದ ಮ. 2ರವರೆಗೆ, ಮ. 2ರಿಂದ ರಾತ್ರಿ 10ರವರೆಗೆ ಮತ್ತು ರಾತ್ರಿ 10ರಿಂದ ಬೆಳಗಿನ 6 ಗಂಟೆವರೆಗೆ ಒಂದು ಪಾಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡು ಐವರಂತೆ ಮೂರು ಪಾಳಿನಲ್ಲಿ ಒಟ್ಟು 15 ಜನರ ತಂಡವು ಪ್ರತಿ ದಿನ ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಇದೆ ವೇಳೆ ಬಸವಕಲ್ಯಾಣ ಎಸಿ ಭುವನೇಶ ಪಟೇಲ್ ಅವರು ಡಿಸಿಗೆ ಮಾಹಿತಿ ನೀಡಿದರು.
ಪೂರ್ವಭಾವಿ ಸಭೆ: ಅತೀ ಕಡಿಮೆ ಮತದಾನ ನಡೆಯುವ ಮತ್ತು ಅತೀಸೂ¾ಕ್ಷ್ಮ ಮತಗಟ್ಟೆ ಎಂದು ಗುರುತಿಸಿದ ಮುಡುಬಿ ಪೊಲೀಸ್ ಠಾಣಾ ವ್ಯಾಪ್ತಿಯ
ಒಟ್ಟು 643 ಮತದಾರರು ಇರುವ ಕಲಕೋರಾ ಗ್ರಾಮದ 260ರ ಮತಗಟ್ಟೆ ಮತ್ತು ಬಸವಕಲ್ಯಾಣ ಸಿಟಿನಲ್ಲಿ ಅತೀ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಿರುವ
567 ಮತದಾರರು ಇರುವ ಧರಮಪ್ರಕಾಶ ಗಲ್ಲಿಯ ಮತಗಟ್ಟೆ ಸಂಖ್ಯೆ 89ರಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆ ಕೂಡ
ನಡೆಯಿತು.
ಈ ವೇಳೆ ಮಾತನಾಡಿದ ಡಿಸಿ, ಜಿಲ್ಲೆಯಲ್ಲಿ ಒಟ್ಟು ಸೂಕ್ಷ್ಮ 100, ಅತೀ ಸೂಕ್ಷ್ಮ 64 ಮತ್ತು ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗುವ 2 ಮತಗಟ್ಟೆಗಳಲ್ಲಿ
ಶಾಂತಿಯುತ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಪ್ರಜಾಪ್ರಭುತ್ವ ಬಲಪಡಿಸಲು ನಾವುಗಳು ತಪ್ಪದೇ ಮತದಾನ ಮಾಡಬೇಕು. ಅರ್ಹ
ಎಲ್ಲರೂ ಮತದಾನ ಮಾಡುವುದು ಸಂವಿಧಾನ ಬದ್ಧ ಕರ್ತವ್ಯವಾಗಿದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಗ್ರಾಮಸ್ಥರಲ್ಲಿ ವಿನಂತಿಸಿದರು.
ಜಿಪಂ ಸಿಇಒ ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಮಾತದಾನ ಮಾಡಬೇಕು. ಮತದಾನ ಮಾಡಲು ಮಹಿಳೆಯರು ಹಿಂಜರಿಯಬಾರದು. ಮತಗಟ್ಟೆಗಳಲ್ಲಿ ಕಲ್ಪಿಸಿರುವ ಅನುಕೂಲತೆಗಳನ್ನು ಬಳಸಿಕೊಂಡು ವಿಕಲಚೇತನರು ಕೂಡ ಮತದಾನ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಮಹತ್ವ ಮತ್ತು ಮತಯಂತ್ರಗಳ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಪಿ ಮಾತನಾಡಿ, ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಪ್ರತಿಯೊಬ್ಬರು ನಿರ್ಭಿಡೆಯಿಂದ ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲ ರೀತಿಯ ಪೊಲೀಸ್ ಬಂದೋಬಸ್ತ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್ ನಾಗಯ್ಯ ಹಿರೇಮಠ, ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಗೌತಮ ಅರಳಿ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.